ಬಂಟ್ವಾಳ: ಇಲ್ಲಿನ ಅರಳ ಗ್ರಾಮದ ಅಳಕೆ ನಿವಾಸಿ, ಪ್ರಗತಿಪರ ಕೃಷಿಕ ಕೊರಗಪ್ಪ ಸಪಲ್ಯ ಎಂಬವರ ಪುತ್ರ ಮಹಾಬಲ (47) ಇವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಶನಿವಾರ ಮಧ್ಯಾಹ್ನ ನಡೆದಿದೆ.



ಅವಿವಾಹಿತರಾಗಿದ್ದ ಇವರು ಕಳೆದ ಮೂರು ವರ್ಷಗಳಿಂದ ಮನೆ ಸಮೀಪದ ಸ್ವಂತ ಕಟ್ಟಡದಲ್ಲಿ ‘ಮಾತೃಶ್ರೀ ಎಂಜಿನಿಯರಿಂಗ್ ವಕ್ಸ್ರ್ ‘ ಸಂಸ್ಥೆ ನಡೆಸುತ್ತಿದ್ದರು.


ಆರ್ಥಿಕ ಮುಗ್ಗಟ್ಟಿನಿಂದ ಶನಿವಾರ ಮಧ್ಯಾಹ್ನ ಅಂಗಡಿ ಒಳಗೆ ನೇಣಿಗೆ ಶರಣಾಗಿದ್ದಾರೆ ಎಂದು ಗ್ರಾಮಾಂತರ ಠಾಣೆ ಪೊಲೀಸರು ತಿಳಿಸಿದ್ದಾರೆ.