ಹೊಸದಿಲ್ಲಿ: ಈಗ ಮದುವೆಯಾಗಿಲ್ಲ ಎಂಬ ಕೊರಗು ಯುವಕರಲ್ಲಿ ಕಾಡುತ್ತಿದೆ. ಕೆಲವರು 35ರಿಂದ 40 ವರ್ಷ ದಾಟಿದರೂ ಮದುವೆಗೆ ಹೆಣ್ಣು ಸಿಗುತ್ತಿಲ್ಲ ಎಂಬ ಕೊರಗಿನಲ್ಲಿ ಜೀವನ ನೂಕುತ್ತಿದ್ದಾರೆ. ಇನ್ನು ಸಾಂಸಾರಿಕ ಕಲಹ, ವೈಯಕ್ತಿಕ ಕಾರಣ ಸೇರಿದಂತೆ ಹಲವು ವಿಚಾರಗಳಿಗೆ ಸಂಬಂಧಿಸಿದಂತೆ ವಿವಾಹ ವಿಚ್ಚೇದನ ಪಡೆದ ಪುರುಷರು ಹಾಗೂ ಪತ್ನಿ ಮೃತಪಟ್ಟವರ ಪುರುಷರನ್ನೇ ಟಾರ್ಗೆಟ್ ಮಾಡುತ್ತಿದ್ದ ಮಹಿಳೆಯೊಬ್ಬಳು ಈಗ ಪೊಲೀಸರ ಅತಿಥಿಯಾಗಿದ್ದಾಳೆ.
ಇಂಥವರನ್ನೇ ಟಾರ್ಗೆಟ್ ಮಾಡುತ್ತಿದ್ದ ಮಹಿಳೆಯೊಬ್ಬಳು ವಂಚಿಸಿರುವುದು ಎಷ್ಟು ಗೊತ್ತಾ ಬರೋಬ್ಬರಿ 1.25 ಕೋಟಿ ರೂಪಾಯಿ. ಅದು ಹೇಗೆ ಅನ್ನೋದೇ ಕುತೂಹಲಕರಿ ಸ್ಟೋರಿ.
ಲೂಟಿಕೋರ ದುಲ್ಹಾನ್ ಅಥವಾ ಲೂಟಿ ಮಾಡುವ ವಧು ಎಂದು ಪೊಲೀಸರು ಬಣ್ಣಿಸಿರುವ ಮಹಿಳೆಯೊಬ್ಬರು ದಶಕಕ್ಕೂ ಹೆಚ್ಚು ಪುರುಷರನ್ನು ಮದುವೆಯಾಗಿ ಸೆಟಲ್ ಮೆಂಟ್ ಹೆಸರಿನಲ್ಲಿ ಒಟ್ಟು ₹ 1.25 ಕೋಟಿ ವಸೂಲಿ ಮಾಡಿದ ಬಳಿಕ ಆಕೆಯನ್ನು ಬಂಧಿಸಲಾಗಿದೆ.
ಉತ್ತರಾಖಂಡ ನಿವಾಸಿಯಾಗಿರುವ ನಿಕ್ಕಿ ಎಂಬಾಕೆ 2013ರಲ್ಲಿ ಆಗ್ರಾದ ಉದ್ಯಮಿಯೊಬ್ಬರನ್ನು ಮೊದಲು ವಿವಾಹವಾಗಿದ್ದರು. ಕೆಲ ಸಮಯದ ಬಳಿಕ ಆ ವ್ಯಕ್ತಿಯ ಕುಟುಂಬದ ವಿರುದ್ಧ ಪ್ರಕರಣ ದಾಖಲಿಸಿ ರಾಜಿ ಸಂಧಾನದ ಭಾಗವಾಗಿ ರೂ. 75 ಲಕ್ಷ ಪಡೆದಿದ್ದಳು.
2017 ರಲ್ಲಿ ಸೀಮಾ ಗುರುಗ್ರಾಮ್‌ನ ಸಾಫ್ಟ್‌ವೇರ್ ಇಂಜಿನಿಯರ್‌ನನ್ನು ವಿವಾಹವಾದ ಈ ಲೇಡಿ ನಂತರ ಆ ವ್ಯಕ್ತಿಯಿಂದ ಬೇರ್ಪಟ್ಟ ನಂತರ ರೂ. 10 ಲಕ್ಷವನ್ನು ಸೆಟಲ್‌ಮೆಂಟ್ ಆಗಿ ತೆಗೆದುಕೊಂಡಳು. 2023 ರಲ್ಲಿ ಜೈಪುರ ಮೂಲದ ಉದ್ಯಮಿಯನ್ನು ವಿವಾಹವಾದ ಈಕೆ ರೂ. 36 ಲಕ್ಷ ಮೌಲ್ಯದ ಚಿನ್ನಾಭರಣ ಮತ್ತು ನಗದು ಹಣದೊಂದಿಗೆ ಅವರ ಮನೆಯಿಂದ ಪರಾರಿಯಾಗಿದ್ದಳು. ಕುಟುಂಬದವರು ಪ್ರಕರಣ ದಾಖಲಿಸಿದ ನಂತರ ಜೈಪುರ ಪೊಲೀಸರು ಸೀಮಾಳನ್ನು ಬಂಧಿಸಿದ್ದಾರೆ.
ಸೀಮಾ ಮದುವೆಯಾಗದವರನ್ನು ಟಾರ್ಗೆಟ್ ಮಾಡುವ ಜೊತೆಗೆ ಶ್ರೀಮಂತರು, ಒಳ್ಳೆಯ ಕೆಲಸದವರನ್ನು ಹುಡುಕುತ್ತಿದ್ದಳು ಎಂದು ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ, ಸಾಮಾನ್ಯವಾಗಿ ವಿಚ್ಛೇದನ ಪಡೆದ ಅಥವಾ ತಮ್ಮ ಹೆಂಡತಿಯನ್ನು ಕಳೆದುಕೊಂಡಿರುವ ಪುರುಷರಿಗಾಗಿ ಹುಡುಕಾಟ ನಡೆಸುತ್ತಿದ್ದ ಈಕೆ, ಕೊನೆಗೆ ಯಾರಿಗೆ ಮೋಸ ಮಾಡಬಹುದು ಎಂದು ಲೆಕ್ಕಾಚಾರ ಹಾಕುತ್ತಿದ್ದಳು. ಬೇರೆ ಬೇರೆ ರಾಜ್ಯಗಳಲ್ಲಿ ಮದುವೆಯಾಗಿ ವಿವಿಧ ಪ್ರಕರಣಗಳಲ್ಲಿ ಒಟ್ಟು ರೂ. 1.25 ಕೋಟಿ ವಸೂಲಿ ಮಾಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.