Home ಪ್ರಖರ ವಿಶೇಷ BREAKING : ಮಂಗಳೂರು : ಸಾಲ ಮರುಪಾವತಿಸದಕ್ಕೆ ಕಿರುಕುಳ : ವಾಟ್ಸಾಪ್ ಸ್ಟೇಟಸ್ ಹಾಕಿ ದಿವ್ಯಾಂಗ...

BREAKING : ಮಂಗಳೂರು : ಸಾಲ ಮರುಪಾವತಿಸದಕ್ಕೆ ಕಿರುಕುಳ : ವಾಟ್ಸಾಪ್ ಸ್ಟೇಟಸ್ ಹಾಕಿ ದಿವ್ಯಾಂಗ ವ್ಯಕ್ತಿ ಆತ್ಮಹತ್ಯೆ

0

ಮಂಗಳೂರು : ಸಾಲ ಮರುಪಾವತಿಗೆ ಬ್ಯಾಂಕ್ ಅಧ್ಯಕ್ಷನಿಂದ ಕಿರುಕುಳ ಆರೋಪ ಹಿನ್ನೆಲೆಯಲ್ಲಿ, ಕಿರುಕುಳ ಬಗ್ಗೆ ವಾಟ್ಸಪ್ ಸ್ಟೇಟಸ್ ವಿಡಿಯೋ ಹಾಕಿ ದಿವ್ಯಾಂಗ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಗಳೂರು ಹೊರವಲಯದ ಪೆರ್ಮಾಯಿ ಎಂಬಲ್ಲಿ ಈ ಒಂದು ಘಟನೆ ನಡೆದಿದೆ.


ಪೆರ್ಮಾಯಿ ನಿವಾಸಿ ಮನೋಹರ್ ಪಿರೇರ (46) ಆತ್ಮಹತ್ಯೆಗೆ ಶರಣಾದ ವ್ಯಕ್ತಿ ಎಂದು ತಿಳಿದುಬಂದಿದ್ದು. ಕ್ಯಾತೋಲಿಕ್ ಸಹಕಾರಿ ಬ್ಯಾಂಕ್ ಅಧ್ಯಕ್ಷರ ವಿರುದ್ಧ ಆರೋಪ ಮಾಡಿದ್ದಾರೆ. ಎಂಸಿಸಿ ಬ್ಯಾಂಕ್ ನಿಂದ 15 ಲಕ್ಷ ರೂಪಾಯಿ ಮನೋಹರವರು ಸಾಲ ಪಡೆದಿದ್ದರು. ಕೋವಿಡ್ ವೇಳೆ ನಷ್ಟಕ್ಕೆ ಈಡಾಗಿ ಬ್ಯಾಂಕ್ ಸಾಲ ಕಟ್ಟಲು ಅವರಿಗೆ ಆಗಿರಲಿಲ್ಲ. ಹಾಗಾಗಿ ಮನೆಯನ್ನು ಜಪ್ತಿ ಮಾಡಲು ಬ್ಯಾಂಕಿನ ಆಡಳಿತ ಮಂಡಳಿ ಮುಂದಾಗಿದೆ.

ಎಂಸಿಸಿ ಬ್ಯಾಂಕ್ ಅಧ್ಯಕ್ಷ ಅನಿಲ್ ವಿರುದ್ಧ ಮನೋಹರ್ ಕಿರುಕುಳದ ಆರೋಪ ಮಾಡಿದ್ದಾರೆ. ಆತ್ಮಹತ್ಯೆಗೂ ಮುನ್ನ ವಿಡಿಯೋ ಮಾಡಿರುವ ಮನೋಹರ್ ಪಿರೇರಾ ನನ್ನ ಸಾವಿಗೆ ಬ್ಯಾಂಕ್ ಅಧ್ಯಕ್ಷ ಅನಿಲ್ ಕಾರಣ ಎಂದು ಹೇಳಿಕೆ ನೀಡಿದ್ದಾರೆ.ಅನಿಲ್ ಲೋಬೊ ಕಿರುಕುಳ ನೀಡಿದ್ದಾನೆ ಎಂದು ಮನೋಹರ್ ಅವರು ಹೇಳಿಕೆ ನೀಡಿದ್ದಾರೆ.ಕಿರುಕುಳ ಕೊಟ್ಟಿದ್ದಕ್ಕೆ ಆತ್ಮಹತ್ಯೆಗೆ ಶರಣಾದ ದಿವ್ಯಾಂಗ ವ್ಯಕ್ತಿ ಬ್ಯಾಂಕ್ ಅಧ್ಯಕ್ಷ ಅನಿಲ್ ಲೋಬೊ ವಿರುದ್ಧ ಪ್ರಕರಣ ದಾಖಲಾಗಿದೆ. ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.

LEAVE A REPLY

Please enter your comment!
Please enter your name here