ಉಪ್ಪಿನಂಗಡಿ: ಕೆಎಸ್‌ಆರ್‌ಟಿಸಿ ಬಸ್ ಚಾಲಕನೋರ್ವ ಕುಡಿದು ಬಸ್ ಚಲಾಯಿಸಿ ಪ್ರಯಾಣಿಕರನ್ನು ಭಯಭೀತಗೊಳಿಸಿದ ಘಟನೆ ಉಪ್ಪಿನಂಗಡಿಯಲ್ಲಿ ನಡೆದಿದೆ.
ಪುತ್ತೂರಿನಿಂದ ಉಪ್ಪಿನಂಗಡಿಗೆ ಆಗಮಿಸಿ ಆಲಂತಾಯದತ್ತ ಸಾಗುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ನ್ನು ಅದರ ಚಾಲಕ ಮದ್ಯ ಸೇವಿಸಿ ಬಸ್‌ನ್ನು ಮನಸೋ ಇಚ್ಛೆ ಚಲಾಯಿಸಿದ ಪರಿಣಾಮ ಬಸ್‌ನಲ್ಲಿದ್ದ ಮಹಿಳೆಯರು, ಮಕ್ಕಳಯಾದಿಯಾಗಿ ಭಯಭೀತರಾಗಿ ಚೀರಾಡತೊಡಗಿದರು. ಬಸ್‌ನಲ್ಲಿದ್ದ ಪ್ರಯಾಣಿಕರ ಚೀರಾಟವನ್ನು ಕಂಡ ಸ್ಥಳೀಯ ನಾಗರಿಕರು ಬಸ್‌ನ್ನು ನಿಲ್ಲಿಸಲು ಮುಂದಾಗಿ ಬಸ್ ನಿಲ್ಲುತ್ತಿದ್ದಂತೆಯೇ ಚಾಲಕನನ್ನು ಬಸ್‌ನಿಂದ ಕೆಳಗಿಳಿಸಿ ತರಾಟೆಗೆ ತೆಗೆದುಕೊಂಡ ಬಳಿಕ ಪೊಲೀಸರ ವಶಕ್ಕೆ ಒಪ್ಪಿಸಿದರು.
ಬಸ್ ಚಾಲಕನ ಅವಾಂತರದಿಂದ ಜೀವಭಯಕ್ಕೆ ತುತ್ತಾದ ಪ್ರಯಾಣಿಕರು ಅತಂತ್ರರಾಗುವುದನ್ನು ತಪ್ಪಿಸುವ ಸಲುವಾಗಿ ಬಸ್‌ನ ನಿರ್ವಾಹಕನೇ ಬಸ್‌ನ್ನು ಚಲಾಯಿಸಿ ಪ್ರಯಾಣಿಕರಿಗೆ ಸೇವೆಯನ್ನು ಒದಗಿಸಿದರು ಎಂದು ವರದಿಯಾಗಿದೆ.