Home ಕರಾವಳಿ ಹೊಸ ಥಾರ್ ಜೀಪ್‌ ಬೆಂಕಿಗಾಹುತಿ..!!

ಹೊಸ ಥಾರ್ ಜೀಪ್‌ ಬೆಂಕಿಗಾಹುತಿ..!!

0

ಮಂಜೇಶ್ವರ : ಉಪ್ಪಳಕ್ಕೆ ಸಮೀಪದ ಪಚ್ಚಂಬಳದಲ್ಲಿ ಹೊಸ ಥಾರ್ ಜೀಪ್‌ ಅಭ್ಯಾಸ ಪ್ರದರ್ಶನದ ವೇಳೆ ಬೆಂಕಿಗಾಹುತಿಯಾಗಿ ಸಂಪೂರ್ಣ ನಾಶವಾಗಿದೆ.ಘಟನೆಯ ವೇಳೆ ವಾಹನದಲ್ಲಿ ಇದ್ದವರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನೆ ಉಪ್ಪಳ ಸಮೀಪದ ಪಚ್ಚಂಬಳದ ಮೈದಾನದಲ್ಲಿ ನಡೆದಿದೆ.

ಮಂಜೇಶ್ವರ ಹೊಸಂಗಡಿ ನಿವಾಸಿಯ ಹೆಸರಿನಲ್ಲಿ ತಾತ್ಕಾಲಿಕ ನೋಂದಣಿಯಲ್ಲಿದ್ದ ಈ ಹೊಸ ಥಾರ್ ಜೀಪ್ ಬೆಂಕಿಗಾಹುತಿಯಾಗಿದೆ.ಕೆಲವು ಮಂದಿ ಯುವಕರು ಜೀಪ್‌ನ್ನು ಮೈದಾನಕ್ಕೆ ತೆಗೊಂಡು ಬಂದು ಅಲ್ಲಿ ಅಭ್ಯಾಸ ಪ್ರದರ್ಶನ ನಡೆಸುವ ಮಧ್ಯೆ ಅಗ್ನಿ ಅನಾಹುತ ಸಂಭವಿಸಿದೆ. ಬೆಂಕಿ ತೀವ್ರವಾಗಿ ಹಬ್ಬುತ್ತಿದ್ದಂತೆ, ವಾಹನವನ್ನು ತಕ್ಷಣ ನಿಲ್ಲಿಸಿ ಒಳಗಿದ್ದವರು ಪರಾರಿಯಾಗಿದ್ದಾರೆ.ಮಾಹಿತಿ ತಿಳಿಯುತ್ತಿದ್ದಂತೆ ಉಪ್ಪಳದಿಂದ ಅಗ್ನಿಶಾಮಕ ದಳ ಸ್ಥಳಕ್ಕೆ ದಾವಿಸಿ ಬೆಂಕಿ ನಂದಿಸಿದರು. ಆದರೆ, ಅದಾಗಲೇ ವಾಹನ ಸಂಪೂರ್ಣವಾಗಿ ಬೆಂಕಿಯಲ್ಲಿ ಉರಿದು ನಾಶವಾಗಿದೆ.ಬೆಂಕಿ ಹೊತ್ತಿಕೊಳ್ಳಲು ಕಾರಣ ಇನ್ನೂ ಸ್ಪಷ್ಟವಾಗಿಲ್ಲ. ಕುಂಬಳೆ ಪೊಲೀಸರು ಸ್ಥಳಕ್ಕಾಗಮಿಸಿ ತನಿಖೆ ನಡೆಸುತಿದ್ದಾರೆ.

LEAVE A REPLY

Please enter your comment!
Please enter your name here