Home ಕರಾವಳಿ ತುಳು ಸಿನಿಮಾ ಅಭಿಮಾನಿಗಳ ಮನದಲ್ಲಿ ಅಚ್ಚಳಿಯದೆ ಉಳಿಯಲಿದೆ ಈ “ದಸ್ಕತ್”

ತುಳು ಸಿನಿಮಾ ಅಭಿಮಾನಿಗಳ ಮನದಲ್ಲಿ ಅಚ್ಚಳಿಯದೆ ಉಳಿಯಲಿದೆ ಈ “ದಸ್ಕತ್”

0

ಮಂಗಳೂರು: ಕೃಷ್ಣ ಜೆ ಪಾಲೇಮಾರ್ ಅರ್ಪಿಸುವ ಸೆವೆಂಟಿ ಸೆವೆಂಟಿ ಸೆವೆನ್ ಸ್ಕೂಡಿಯೋಸ್ ಲಾಂಛನದಲ್ಲಿ ರಾಘವೇಂದ್ರ ಕುಡ್ವ ನಿರ್ಮಾಣದ ಅನೀಶ್ ಪೂಜಾರಿ ನಿರ್ದೇಶನದಲ್ಲಿ ಮೂಡಿ ಬಂದಿರುವ ತುಳು ಚಿತ್ರ “ದಸ್ಕತ್” ನಿನ್ನೆ ಶುಕ್ರವಾರ ಬಿಡುಗಡೆಗೊಂಡಿದ್ದು ಮೊದಲ ದಿನವೇ ಎಲ್ಲಾ ಕಡೆಗಳಲ್ಲಿ ಹೌಸ್ ಫುಲ್ ಪ್ರದರ್ಶನಗೊಳ್ಳುತ್ತಿದ್ದೆ.


ಚಿತ್ರದ ವಿಷಯಕ್ಕೆ ಬಂದರೆ ನಿರ್ದೇಶಕ ಅನೀಶ್ ಪೂಜಾರಿಯವರ ಸುಂದರ ಹುಚ್ಚು ಕನಸಿಗೆ ಧೈರ್ಯದಿಂದ ಬಂಡವಾಳ ಹೂಡಿ ಹೊಸಬರ ತಂಡಕ್ಕೆ ಸಾಥ್ ನೀಡಿದ ನಿರ್ಮಾಪಕ ರಾಘವೇಂದ್ರ ಕುಡ್ವ ಅವರಿಗೆ ನಿಜವಾಗಿಯೂ ಒಂದು ಮೆಚ್ಚುಗೆ ವ್ಯಕ್ತಪಡಿಸಬೇಕು. ಸಿನಿಮಾದ ಮೊದಲ ದೃಷ್ಯದಿಂದಲೇ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವ ದೊಡ್ಡ ಎರಡು ಅಸ್ತ್ರಗಳೇ ಸಿನಿಮಾದ ಛಾಯಾಗ್ರಹಣ ಹಾಗೂ ಹಿನ್ನೆಲೆ ಸಂಗೀತ. ಸಂತೋಷ್ ಆಚಾರ್ಯ ಅವರ ಸಿನಿಮಾಟೋಗ್ರಫಿ ಚಿತ್ರದ ಬಹುದೊಡ್ಡ ಪ್ಲಸ್ ಪಾಯಿಂಟ್,ಈ ಹಿಂದೆ ಕೂಡ ಚಲನಚಿತ್ರ ಹಾಗೂ ಹಲವಾರು ವೆಬ್ ಸಿರೀಸ್ ಗಳಲ್ಲಿ ಕೆಲಸ ಮಾಡಿರುವ ಅನುಭವ ಹೊಂದಿರುವ ಸಂತೋಷ್ ಚಿತ್ರರಂಗದಲ್ಲಿ ಒಂದು ದೊಡ್ಡ ಹೆಸರು ಮಾಡುವುದಂತೂ ಖಂಡಿತ. ಇನ್ನು ಹಾಡುಗಳು ಹಾಗೂ ಹಿನ್ನೆಲೆ ಸಂಗೀತದ ವಿಷಯಕ್ಕೆ ಬಂದರೆ ಹೊಸ ಸಂಗೀತ ನಿರ್ದೇಶಕ ಸಮರ್ಥನ್ ಎಸ್ ರಾವ್ ಅವರ ಸಂಪೂರ್ಣ ಶ್ರಮ ಈ ಸಿನಿಮಾದ ಸಂಗೀತಕ್ಕೆ ನೀಡಿದ್ದಾರೆ ಎಂದರೆ ತಪ್ಪಾಗದು ಹಲವು ದೃಶ್ಯಗಳನ್ನು ಮೇಲೆತ್ತುವಲ್ಲಿ ಹಿನ್ನೆಲೆ ಸಂಗೀತವು ಪ್ಲಸ್ ಪಾಯಿಂಟ್ ಆಗಿದೆ, ತುಳು ಚಿತ್ರ ರಂಗಕ್ಕೆ ಒಬ್ಬ ಹೊಸ ಭರವಸೆಯ ಸಂಗೀತ ನಿರ್ದೇಶಕನ ಆಗಮನ ಆಗಿದೆ ಅನ್ನುವುದು ಅಂತು ಸತ್ಯ.


ಇನ್ನು ಸಿನಿಮಾದ ವಿಷಯಕ್ಕೆ ಬಂದರೆ ಇದು 80-90 ರ ದಶಕದ ತುಳುನಾಡಿನ ಜನರ ಜೀವನ ಶೈಲಿಯನ್ನು ಹಾಗೂ ಜನರು ಕುಗ್ರಾಮಗಳಲ್ಲಿ ಎದುರಿಸುತ್ತಿದ್ದ ಕಷ್ಟಗಳನ್ನು ನಿಮ್ಮ ಕಣ್ಣ ಮುಂದೆ ತಂದಿಡುತ್ತದೆ. ಈ ಸಿನಿಮಾದಲ್ಲಿ ಕಥೆ ಎಂದರೆ ಪಾತ್ರಗಳು ಇಲ್ಲಿ ಇರುವ ಪ್ರತಿಯೊಂದು ಪಾತ್ರವೂ ಕಥೆಯಾಗಿರುತ್ತದೆ ಮುಖ್ಯವಾಗಿ ನಾಯಕ ನಟ ದೀಕ್ಷಿತ್ ಉತ್ತಮ ಅಭಿನಯವನ್ನು ನೀಡಿರುತ್ತಾರೆ, ಆದರೆ ಇಲ್ಲಿ ಮತ್ತೊಂದು ಮುಖ್ಯ ಅಂಶ ಎಂದರೆ ಇಲ್ಲಿ ನಟನೆಯಲ್ಲಿ ಖಳನಾಯಕನು ನಿಜವಾದ “ಹೀರೋ” ಅದುವೇ ಚಿತ್ರದಲ್ಲಿ ಗುಣಪಾಲ ಗ್ರಾಮ ಪಂಚಾಯಿತಿಯ ಅಧಿಕಾರಿಯ ಪಾತ್ರ ಮಾಡಿದಂತಹ ಯುವ ಶೆಟ್ಟಿ ಪಾತ್ರದ ಪರಕಾಯ ಪ್ರವೇಶ ಮಾಡಿದ್ದು ಅವರ ನಟನೆಯು ಅವರ ಒಳಗಿರುವ ನಟ ರಾಕ್ಷಸನನ್ನು ಹೊರತಂದಿದೆ. ಇನ್ನುಳಿದಂತೆ ಪ್ರತಿಭಾನ್ವಿತ ಮೋಹನ್ ಶೇಣಿ , ಹಿರಿಯ ಕಲಾವಿದರಾದ ಚಂದ್ರಹಾಸ್ ಉಳ್ಳಾಲ್, ಶ್ರೀಮತಿ ಮಂಜುಳಾ, ನವೀನ್ ಬೊಂದೆಲ್, ಸುನೀತಾ ಎಕ್ಕೂರು, ಚೇತನ್ ಜಿ ಪಿಲಾರ್ ಹಾಗೂ ಮುಂತಾದವರು ನೈಜ ನಟನೆಯ ಮೂಲಕ ತಮಗೆ ನೀಡಿರುವ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಚಿತ್ರದಲ್ಲಿ ದೀಪಕ್ ರೈ ಪಾಣಾಜೆ ಹಾಗೂ ತಿಮ್ಮಪ್ಪ ಕುಲಾಲ್ ತೆರೆಯ ಮೇಲೆ ಬರುವ ಸಂದರ್ಭದಲ್ಲಿ ನವಿರಾದ ಹಾಸ್ಯ ದೀಪಕ್ ರೈ ಅವರ ಪಂಚ್ ಗಳು ಇಲ್ಲಿ ಜನರಿಗೆ ಇಷ್ಟವಾಗುತ್ತದೆ.
ಅನೀಶ್ ಪೂಜಾರಿಯವರ ದಕ್ಷ ನಿರ್ದೇಶನದಲ್ಲಿ ಮೂಡಿಬಂದಿರುವ ಒಂದು ವಿಭಿನ್ನ ತುಳು ಚಿತ್ರಕ್ಕೆ ಪ್ರೇಕ್ಷಕರು ಮೊದಲ ದಿನವೇ ಫಿದಾ ಆಗಿದ್ದು ಹೌಸ್ ಫುಲ್ ಪ್ರದರ್ಶನಗಳನ್ನು ನೀಡಿದೆ, ಚಿತ್ರವು ಹೀಗೆಯೆ ಶತ ದಿನೋತ್ಸವ ಆಚರಿಸಲಿ ಎಂದು ನಮ್ಮ ಆಶಯ.
ಪ್ರಖರ ನ್ಯೂಸ್ ರೇಟಿಂಗ್
4.5/5⭐

LEAVE A REPLY

Please enter your comment!
Please enter your name here