Home ತಾಜಾ ಸುದ್ದಿ ಡ್ರೋನ್ ಪ್ರತಾಪ್ ಅರೆಸ್ಟ್: ಯಾವ ಪ್ರಕರಣ?

ಡ್ರೋನ್ ಪ್ರತಾಪ್ ಅರೆಸ್ಟ್: ಯಾವ ಪ್ರಕರಣ?

0

ತುಮಕೂರು : ನೀರಿನೊಳಗೆ ಕೆಮಿಕಲ್ ಹಾಕಿ ಬ್ಲಾಸ್ಟ್ (Chemical Blast) ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಡ್ರೋನ್ ಪ್ರತಾಪ್​ನನ್ನು ಪೊಲೀಸರು ಬಂಧಿಸಿದ್ದಾರೆ. ಸೋಡಿಯಂ ನೀರಿನಲ್ಲಿ ಎಸೆದು ಬ್ಲಾಸ್ಟ್ ಮಾಡಿದ್ದ ಪ್ರತಾಪ್ ಸಾರ್ವಜನಿಕರು ಹಾಗೂ ಪರಿಸರ ಪ್ರೇಮಿಗಳಿಂದ ಟೀಕೆಗೆ ಒಳಗಾಗಿದ್ದರು. ಈ ಸಂಬಂಧ ಇಂದು (ಡಿಸೆಂಬರ್ 12) ತುಮಕೂರು ಜಿಲ್ಲೆ ಮಧುಗಿರಿ ತಾಲೂಕಿನ ಮಿಡಿಗೇಶಿ ಪೊಲೀಸರು, ಡ್ರೋನ್ ಪ್ರತಾಪ್​ನನ್ನು ಬಂಂಧಿಸಿದ್ದಾರೆ.

ನಿರ್ಜನ ಪ್ರದರ್ಶನದಲ್ಲಿದ್ದ ಕೃಷಿ ಹೊಂಡದಂತ ಆಳವಾದ ಗುಂಡಿಯಲ್ಲಿನ ನೀರಿಗೆ ಕೆಮಿಕಲ್ ಹಾಕಿ ನೀರಿನಾಳದಲ್ಲಿ ಬ್ಲಾಸ್ಟ್ ಮಾಡಿದ್ದರು. ಕೆಮಿಕಲ್ ಎಸೆದಿದ್ದೇ ತಡ ದೊಡ್ಡ ಮಟ್ಟದಲ್ಲಿ ಬ್ಲಾಸ್ಟ್‌ ಆಗಿದೆ, ಬೆಂಕಿ ಸಹ ಚಿಮ್ಮಿದೆ. ಅಷ್ಟೇ ಅಲ್ಲದೇ ಬಾಂಬ್ ಬ್ಲಾಸ್ಟ್ ರೀತಿ ದೃಶ್ಯ ಕಂಡುಬಂದಿದೆ. ಈ ವೀಡಿಯೋ ನೋಡಿ ಪ್ರತಾಪ್‌ ಬಿಲ್ಡಪ್ ಬೇರೆ ಕೊಟ್ಟಿದ್ದರು. ಜೊತೆಗೆ ನಗು-ನಗುತ್ತಲೇ ನೋಡಿ.. ನೋಡಿ ದೊಡ್ಡ ಬ್ಲಾಸ್ಟ್ ಇದು ಎಂದು ಪ್ರತಾಪ್‌ ಕೂಗಿದ್ದರು. ಈ ವಿಡಿಯೋ ಸಾರ್ವಜನಿಕರ ಟೀಕೆಗೆ ಗುರಿಯಾಗಿತ್ತು.

ಈ ರೀತಿ ವಿಡಿಯೋ ಮಾಡೋದು ಕಾನೂನು ಬಾಹಿರ. ಹೀಗಾಗಿ ಪ್ರತಾಪ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹ ಕೇಳಿಬಂದಿತ್ತು. ಯಾವೆಲ್ಲ ಕೆಮಿಕಲ್ ಹಾಕಿದರೆ ಬ್ಲಾಸ್ಟ್ ಆಗುತ್ತೆ ಎಂದು ಲೈವ್‌ನಲ್ಲಿ ಹೇಳಿದ್ದು, ಇದನ್ನು ಕಿಡಿಗೇಡಿಗಳು ಕೃತ್ಯಕ್ಕೆ ಬಳಸುವ ಸಾಧ್ಯತೆ ಇದೆ ಎಂದು ಪರಿಸತವಾದಿ ವಿಜಯ್ ನಿಶಾಂತ್ ಕಿಡಿಕಾರಿದ್ದರು.

ಈ ಸಂಬಂಧಮಿಡಿಗೇಶಿ ಪೊಲೀಸರು BNS ಸೆಕ್ಷನ್ 288, ಸ್ಫೋಟವಸ್ತು ನಿಯಂತ್ರಣ ಕಾಯ್ದೆ 3ರಅಡಿ ಪ್ರಕರಣ ದಾಖಲಿಸಿಕೊಂಡು ಡ್ರೋನ್ ಪ್ರತಾಪ್ ನನ್ನು ಬಂಧಿಸಿದ್ದಾರೆ.

LEAVE A REPLY

Please enter your comment!
Please enter your name here