Home ಕರಾವಳಿ ಮಂಗಳೂರು: ಕಾರಾಗೃಹದೊಳಗೆ ಗಾಂಜಾ ಪೊಟ್ಟಣ ಎಸೆದು ಪರಾರಿ

ಮಂಗಳೂರು: ಕಾರಾಗೃಹದೊಳಗೆ ಗಾಂಜಾ ಪೊಟ್ಟಣ ಎಸೆದು ಪರಾರಿ

0

ಮಂಗಳೂರು: ನಗರದ ಜಿಲ್ಲಾ ಕಾರಾಗೃಹದೊಳಗೆ ವ್ಯಕ್ತಿಯೋರ್ವ ಗಾಂಜಾ ಇದ್ದ ಪೊಟ್ಟಣ ಎಸೆದು ಪರಾರಿಯಾಗಿರುವ ಘಟನೆ ನಡೆದಿದೆ.


ಶುಕ್ರವಾರದಂದು ಮುಖ್ಯರಸ್ತೆಯಿಂದ ಓರ್ವ ಕವರ್‌ ಅನ್ನು ಜಿಲ್ಲಾ ಕಾರಾಗೃಹದ ಕ್ವಾರಂಟೈನ್‌ ವಿಭಾಗಕ್ಕೆ ಎಸೆದು ಓಡಿ ಹೋಗುತ್ತಿರುವುದನ್ನು ಭದ್ರತಾ ಸಿಬಂದಿ ಗಮನಿಸಿದ್ದರು. ಪರಿಶೀಲನೆ ಮಾಡುವಾಗ ಪ್ಲಾಸ್ಟಿಕ್‌ ಕವರ್‌ ಸಿಕ್ಕಿದ್ದು ಅದರೊಳಗೆ ಗಾಂಜಾ ಮತ್ತು ಬಿಳಿ ಬಣ್ಣದ ಹರಳಿನಂತಿರುವ ಅನುಮಾನಾಸ್ಪದ ವಸ್ತುಗಳು ಕಂಡುಬಂದಿವೆ. ಬರ್ಕೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here