ಮಂಗಳೂರು: ದ.ಕ. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ. ಅವರು ತುಳುನಾಡಿನ ಸಂಸ್ಕೃತಿ ಬಿಂಬಿಸುವ ಹಾಡೊಂದನ್ನು ಹಾಡುವ ಮೂಲಕ ಜನರ ಮನ ಗೆದ್ದಿದ್ದಾರೆ.
ಗುರುವಾರ ಸಂಜೆ ನಗರದ ಕಮಿಷನರ್ ಕಚೇರಿ ಸಭಾಂಗಣದಲ್ಲಿ ದ.ಕ. ಜಿಲ್ಲಾ ಪೊಲೀಸ್ ಹಾಗೂ ಮಂಗಳೂರು ಕಮಿಷನರೆಟ್ ಘಟಕದ ವತಿಯಿಂದ ಆಯೋಜಿಸಿದ್ದ ಸ್ನೇಹ ಸೌಹಾರ್ದ ಸಮ್ಮಿಲನದಲ್ಲಿ ಜಿಲ್ಲಾಧಿಕಾರಿ ಹಾಡಿದ ಹಾಡು ವೈರಲ್ ಆಗಿದ್ದು, ಕರಾ ವಳಿ ಜನರ ಮೆಚ್ಚುಗೆಗೆ ಪಾತ್ರವಾಗಿದೆ.
ಮೂಲತಃ ತಮಿಳುನಾಡಿನ ವರಾಗಿರುವ ಜಿಲ್ಲಾಧಿಕಾರಿಯವರು ಮಂಗಳೂರಿನಲ್ಲಿ ತಮ್ಮ ಸೇವೆ ಸಲ್ಲಿಸುತ್ತಿದ್ದಾರೆ. ತುಳು ಸಂಪ್ರದಾಯ, ಆಚಾರ ವಿಚಾರಗಳ ಬಗ್ಗೆ ಅರಿತುಕೊಂಡಿರುವ ಅವರು ತುಳುನಾಡಿನ ಬಗ್ಗೆ ಅಪಾರ ಗೌರವ ಹೊಂದಿದ್ದಾರೆ. ಇದೀಗ ಅವರು ಹಾಡಿದ ತೌಲವ ಸಂಸ್ಕೃತಿ ಬಿಂಬಿಸುವ ಹಾಡಿಗೆ ಕರಾವಳಿ ಜನ ಫಿದಾ ಆಗಿದ್ದಾರೆ.
ಜಿಲ್ಲಾಧಿಕಾರಿಗಳು ಕಳೆದ ಲೋಕಸಭೆ ಚುನಾವಣೆ ವೇಳೆ ತುಳು ಭಾಷೆಯಲ್ಲೇ ಮತದಾನ ಜಾಗೃತಿ ಮಾಡಿದ್ದರು.