ಪುತ್ತೂರು :ಕಳೆದ 2 ದಿನಗಳಿಂದ ನಾಪತ್ತೆಯಾಗಿದ್ದ ಪುತ್ತೂರಿನ ವ್ಯಕ್ತಿ ಶವವಾಗಿ ಪತ್ತೆಯಾಗಿದ್ದಾರೆ. ಪುತ್ತೂರು ನಗರದ ರೋಟರಿಪುರ ಹರಿಯುವ ತೋಡಿನಲ್ಲಿ ವ್ಯಕ್ತಿ ಮೃತದೇಹ ಪತ್ತೆಯಾಗಿದ್ದು ಇದೊಂದು ಕೊಲೆಯೆಂದು ಶಂಕಿಸಲಾಗಿದೆ. ಸ್ಥಳಕ್ಕೆ ಪುತ್ತೂರು ಪೊಲೀಸರು ಧಾವಿಸಿ ತನಿಖೆ ಆರಂಭಿಸಿದ್ದಾರೆ.
ಪುತ್ತೂರು ನಿವಾಸಿ ನಂದಕುಮಾರ್ (61) ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ವ್ಯಕ್ತಿಯಾಗಿದ್ದು ಅನುಮಾನಾಸ್ಪದ ರೀತಿಯಲ್ಲಿ ನಂದಕುಮಾರ್ ಶವ ಕಂಡು ಬಂದಿದ್ದು ಇದೊಂದು ಕೊಲೆಯಾಗಿರು ಬಗ್ಗೆ ಶಂಕಿಸಲಾಗಿದೆ. ಸಾವನ್ನಪ್ಪುವ ಮೊದಲು ಪುತ್ತೂರಿನ ಸೊಸೈಟಿಯೊಂದರಿಂದ ನಂದ ಕುಮಾರ್ ಅವರು 1 ಲಕ್ಷ ಡ್ರಾ ಮಾಡಿದ್ದರು. ಆದ್ರೆ ಸಿಕ್ಕಿದ ಅವರ ಶವದ ಬಳಿದ ಬಳಿ ಹಣ ಕೊಂಡೊಯ್ದ ಖಾಲಿ ಚೀಲ ಮಾತ್ರ ಪತ್ತೆಯಾಗಿದ್ದು ಆತನ ಬಳಿ ಇದ್ದ ಹಣ ನಾಪತ್ತೆಯಾಗಿದೆ. ಇದು ಹಲವು ಅನುಮಾನಗಳಿಗೆ ಕಾರಣವಾಗಿದೆ.ಪುತ್ತೂರು ನಗರ ಪೋಲೀಸರು ಪರಿಶೀಲನೆ ನಡೆಸಿ ತನಿಖೆ ಆರಂಭಿಸಿದ್ದಾರೆ.