Home ಕರಾವಳಿ ಬಿಯರ್ ಬಾಟಲಿಯಿಂದ ಚುಚ್ಚಿ ಹೋಟೆಲ್ ನೌಕರನ ಬರ್ಬರ ಕೊಲೆ..!

ಬಿಯರ್ ಬಾಟಲಿಯಿಂದ ಚುಚ್ಚಿ ಹೋಟೆಲ್ ನೌಕರನ ಬರ್ಬರ ಕೊಲೆ..!

0

ಊಡುಪಿ : ಹೋಟೆಲ್ ನೌಕರರೊಬ್ಬರನ್ನು ಬಿಯರ್ ಬಾಟಲಿಯಿಂದ ಕುತ್ತಿಗೆ ಕೊಯ್ದು ಕೊಲೆ ಮಾಡಿರುವ ಘಟನೆ ಉಡುಪಿ ಜಿಲ್ಲೆ ಮಣಿಪಾಲ ಈಶ್ವರನಗರದಲ್ಲಿ ಶುಕ್ರವಾರ ಬೆಳಗ್ಗೆ ನಡೆದಿದೆ.


ಹೊನ್ನಾವರ ಕಾಸರಗೋಡಿನ ಶ್ರೀಧರ್ ನಾಯಕ(35)  ಮೃತ  ಹೋಟೆಲ್ ಕಾರ್ಮಿಕನಾಗಿದ್ದಾನೆ.  ಶ್ರೀಧರ ಅವರು ಮಣಿಪಾಲದಲ್ಲಿ ಹೋಟೆಲ್ ಕೆಲಸ ಮಾಡಿಕೊಂಡಿದ್ದರು  ಇವತ್ತು ಬೆಳಿಗ್ಗೆ ದುಷ್ಕರ್ಮಿಗಳು ಕುತ್ತಿಗೆಯನ್ನು ಬಿಯರ್ ಬಾಟಲಿಯಿಂದ ಕೊಯ್ದು ಹತ್ಯೆ ಮಾಡಿದ್ದಾರೆ.  ಕೊಲೆ ಯಾವ ಕಾರಣಕ್ಕೆ ನಡೆದಿದೆ ಮತ್ತು ಯಾರು ಮಾಡಿದ್ದಾರೆ ಎಂಬುದು ಪೊಲೀಸ್ ವಿಚಾರಣೆಯಲ್ಲಿ ಗೊತ್ತಾಗಬೇಕಿದೆ. ಸ್ಥಳಕ್ಕೆ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ. ಕೆ ಅರುಣ್, ಮಣಿಪಾಲ ಪೊಲೀಸ್ ನಿರೀಕ್ಷಕ ದೇವರಾಜ್ ಆಗಮಿಸಿ ಪರಿಶೀಲನೆ ನಡೆಸುತ್ತಿದ್ದು ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

LEAVE A REPLY

Please enter your comment!
Please enter your name here