ಮಂಗಳೂರು : ಶ್ರೀ ಚಾಮುಂಡಿ ಗುಳಿಗ ಕ್ಷೇತ್ರ ಸೇವಾ ಸಮಿತಿ ಕುಂಟಲ್ ದಡಿ ಮಟ್ಟ್ ದ ಗುಡ್ಡೆ ಮುತ್ತೂರು ಇಲ್ಲಿನ ಚಾಮುಂಡಿ ಆರೂಢ ಗುಳಿಗ ದೈವದ ಕಟ್ಟೆಗೆ ಶಿಲಾನ್ಯಾಸ ಕಾರ್ಯಕ್ರಮವು ಶ್ರೀ ಐ ಕೃಷ್ಣ ಆಸ್ರಣ್ಣ ಇವರ ನೇತೃತ್ವದಲ್ಲಿ ನೆರವೇರಿತು .
ಈ ಸಂಧರ್ಭದಲ್ಲಿ ಸಮಿತಿಯ ಗೌರವಾಧ್ಯಕ್ಷರುಗಳಾದ ಚಂದ್ರಹಾಸ್ ಶೆಟ್ಟಿ ಮೇಗಿನಮನೆ , ಧರ್ಣಪ್ಪ ಮೂಲ್ಯ ಮುತ್ತೂರು , ಸಮಿತಿ ಅಧ್ಯಕ್ಷರಾದ ಹರಿಯಪ್ಪ ಮುತ್ತೂರು ,ಉಪಾಧ್ಯಕ್ಷರಾದ ಚಂದ್ರಹಾಸ್ ಕುಲಾಲ್ , ಮುತ್ತೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಪ್ರವೀಣ್ ಆಳ್ವ ಗುಂಡ್ಯ , ಉಪಾಧ್ಯಕ್ಷರಾದ ಸುಶ್ಮಾ , ಸದಸ್ಯರುಗಳಾದ ಸತೀಶ್ ಪೂಜಾರಿ ಬಳ್ಳಾಜೆ , ಜಗದೀಶ್ ದುರ್ಗಾಕೋಡಿ , ಪಾಂಚಜನ್ಯ ಕಂಷ್ಟ್ರಕ್ಷನ್ ಮಾಲೀಕರಾದ ದೇವಿ ಪ್ರಸಾದ್ ಭಟ್ , ಸಮಿತಿಯ ಗೌರವ ಸಲಹೆಗಾರರಾದ ರಾಮ ಪೂಜಾರಿ , ತಾರನಾಥ್ ಕುಲಾಲ್ , ತಿಮ್ಮಪ್ಪ ಪೂಜಾರಿ , ಕಾರ್ಯದರ್ಶಿ ಲಕ್ಷ್ಮಣ್ , ಕಾರ್ಯಾಧ್ಯಕ್ಷ ಕುಸುಮಾಕರ ಪೂಜಾರಿ , ಕೋಶಾಧಿಕಾರಿ ಯಾದವ ಶೆಟ್ಟಿ , ಕೃಷಿಕರಾದ ಅಣ್ಣಿ ಶೆಟ್ಟಿ ಮುತ್ತೂರು ತಾಳಿಪಾಡಿ , ಉದ್ಯಮಿ ಭಾಸ್ಕರ್ ಕಿಲಾಡಿ ಮೊಗರು , ಹಿಂದೂ ಜಾಗರಣ ವೇದಿಕೆಯ ಪ್ರಮುಖ್ ಹರೀಶ್ ಮಟ್ಟಿ , ಸಮಿತಿ ಸದಸ್ಯರುಗಳು ಹಾಗೂ ಊರ ಪರವೂರ ಗ್ರಾಮಸ್ಥರು , ಭಕ್ತಾಭಿಮಾಣಿಗಳು ಉಪಸ್ಥಿತರಿದ್ದರು .