ವಿಟ್ಲ: ಬಂಟ್ವಾಳ ತಾಲೂಕು ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಆಟೋ ಚಾಲಕನೋರ್ವ ನಾಪತ್ತೆಯಾಗಿರುವ ಘಟನೆ ನಡೆದಿದೆ.
ವಿಟ್ಲದ ವೀರಕಂಭ ಗ್ರಾಮದ ಬಾಯಿಲ ನಿವಾಸಿ ಪದ್ಮನಾಭ ನಾಯ್ಕರ ಪುತ್ರ ಧನರಾಜ್(28) ನಾಪತ್ತೆಯಾದ ಆಟೋ ಚಾಲಕ.
ನವೆಂಬರ್ 28 ರಂದು ಎಂದಿನಂತೆ ಬೆಳಿಗ್ಗೆ 8.30ರ ಸುಮಾರಿಗೆ ತನ್ನ ಮನೆಯಿಂದ ಆಟೋದೊಂದಿಗೆ ಹೊರಟಿದ್ದ ಧನರಾಜ್ ಆರು ದಿನ ಕಳೆದರೂ ಮರಳಿ ಬಂದಿಲ್ಲ.
ಆತಂಕಗೊಂಡ ಪೋಷಕರು ಧನರಾಜ್ ಮೊಬೈಲಿಗೆ ಕರೆ ಮಾಡಿದರೂ ಸ್ವಿಚ್ಡ್ ಆಫ್ ಬರುತ್ತಿದೆ. ಸಂಬಂಧಿಕರಲ್ಲಿ, ಸ್ನೇಹಿತರಲ್ಲಿ ವಿಚಾರಿಸಿದ್ದರೂ ಎಲ್ಲೂ ಮಾಹಿತಿ ಲಭ್ಯವಾಗಿಲ್ಲ ಎಂದು ಪೋಷಕರು ತಿಳಿಸಿದ್ದಾರೆ.
ತುಳು-ಕನ್ನಡ ಭಾಷೆ ಬಲ್ಲ ಸುಮಾರು ಐದು ಅಡಿ ಎತ್ತರ ಹೊಂದಿದ್ದ ಧನರಾಜ್ ಕ್ರೀಂ ಬಣ್ಣದ ಅಂಗಿ ಮತ್ತು ನೀಲಿ ಬಣ್ಣದ ಜೀನ್ಸ್ ಪ್ಯಾಂಟ್ ನಾಪತ್ತೆಯಾದ ಸಂದರ್ಭ ಧರಿಸಿದ್ದಾನೆಂದು ಪೋಷಕರು ತಿಳಿಸಿದ್ದಾರೆ.
9008117093 ಸಂಖ್ಯೆಯ ಮೊಬೈಲ್ ಹೊಂದಿರುವ ಧನರಾಜ್ ಅವರ ಆಟೋರಿಕ್ಷಾ ಉಪ್ಪಿನಂಗಡಿ ಬಳಿ ಅನಾಥ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಈ ಬಗ್ಗೆ ವಿಟ್ಲ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿದೆ. ಈತನ ಬಗ್ಗೆ ಸುಳಿವು ಸಿಕ್ಕವರು ಪೊಲೀಸ್ ಠಾಣೆಗೆ ಅಥವಾ 112ಗೆ ಕರೆ ಮಾಡುವಂತೆ ವಿನಂತಿಸಲಾಗಿದೆ.