Home ತಾಜಾ ಸುದ್ದಿ ದಿಢೀರನೇ Bigg Boss Season 11ರ ಮನೆಯಿಂದ ಹೊರ ನಡೆದ ಚೈತ್ರಾ ಕುಂದಾಪುರ.!

ದಿಢೀರನೇ Bigg Boss Season 11ರ ಮನೆಯಿಂದ ಹೊರ ನಡೆದ ಚೈತ್ರಾ ಕುಂದಾಪುರ.!

0

ಬೆಂಗಳೂರು: ಬಿಗ್‌ಬಾಸ್‌ ಮನೆಯಿಂದ ಚೈತ್ರಾ ಕುಂದಾಪುರ ಹೊರಗೆ ಬಂದಿದ್ದಾರೆ. ಹೌದು, ಬಿಗ್ ಬಾಸ್‌ ಕಾರ್ಯಕ್ರಮದಲ್ಲಿ ಕಳೆದ ಕೆಲ ದಿನಗಳ ಹಿಂದಷ್ಟೇ ಅನಿರೀಕ್ಷಿತ ಬೆಳವಣಿಗೆಯೊಂದರಲ್ಲಿ ಶೋಭಾ ಶೆಟ್ಟಿ ಅವರು ಅರ್ಧದಲ್ಲೇ ಆಚೆ ಬಂದಿದ್ದರು.


ಇದೀಗ ಎಂಎಲ್ ಎ ಟಿಕೆಟ್ ಕೊಡಿಸುವುದಾಗಿ ಉದ್ಯಮಿಗೆ 5 ಕೋಟಿ ರೂ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಚೈತ್ರಾ ಕೋರ್ಟ್ ಗೆ ಹಾಜರಾಗಿದ್ದಾರೆ. ವಾರೆಂಟ್ ಜಾರಿ ಹಿನ್ನೆಲೆ ಬಿಗ್ ಬಾಸ್ ಮನೆಯಿಂದ ಹೊರ ಬಂದು ಬೆಂಗಳೂರಿನ 1 ನೇ ಎಸಿಎಂಎಂ ಕೋರ್ಟ್ ಗೆ ಹಾಜರಾಗಿದ್ದಾರೆ.

ವಿವಾದದಿಂದಲೇ ಸುದ್ದಿಯಾಗಿರುವ ಚೈತ್ರಾ ಕುಂದಾಪುರ ಉದ್ಯಮಿಯೊಬ್ಬರಿಗೆ ಬಿಜೆಪಿ ಟಿಕೆಟ್‌ ನೀಡುತ್ತೇನೆ ಎಂದು ವಂಚನೆ ಮಾಡಿದ್ದರು ಎನ್ನುವ ಆರೋಪವನ್ನು ಎದುರಿಸುತ್ತಿದ್ದಾರೆ. ಬೈಂದೂರಿನ ಉದ್ಯಮಿ ಗೋವಿಂದ ಬಾಬು ಪೂಜಾರಿಗೆ ಬಿಜೆಪಿ ಎಂಎಲ್‍ಎ ಟಿಕೆಟ್ ಕೊಡಿಸುವುದಾಗಿ ನಂಬಿಸಿ 5 ಕೋಟಿ ರೂ. ಪಡೆದು ವಂಚಿಸಿದ್ದರು ಎನ್ನುವ ಆರೋಪದಲ್ಲಿ ಚೈತ್ರಾ ಜೈಲು ಸೇರಿ ಆ ಬಳಿಕ ಜಾಮೀನು ಪಡೆದು ಆಚೆ ಬಂದಿದ್ದರು. ಈ ಪ್ರಕರಣ ರಾಜ್ಯದಲ್ಲಿ ಸದ್ದು ಮಾಡಿತ್ತು.

LEAVE A REPLY

Please enter your comment!
Please enter your name here