Home ಕರಾವಳಿ ಮಂಗಳೂರು: ಶ್ರೀನಿವಾಸ ಮಲ್ಯರ ಪುತ್ಥಳಿ ಹೆದ್ದಾರಿ ಅಭಿವೃದ್ಧಿ ಕಾಮಗಾರಿ ನಿಟ್ಟಿನಲ್ಲಿ ಸ್ಥಳಾಂತರಿಸಲು ಅಧಿಕಾರಿಗಳ ಜತೆ ಚರ್ಚೆ

ಮಂಗಳೂರು: ಶ್ರೀನಿವಾಸ ಮಲ್ಯರ ಪುತ್ಥಳಿ ಹೆದ್ದಾರಿ ಅಭಿವೃದ್ಧಿ ಕಾಮಗಾರಿ ನಿಟ್ಟಿನಲ್ಲಿ ಸ್ಥಳಾಂತರಿಸಲು ಅಧಿಕಾರಿಗಳ ಜತೆ ಚರ್ಚೆ

0

ಮಂಗಳೂರು: ಪದವ ಶಾಲೆ ಮುಂಭಾಗದಲ್ಲಿರುವ ನವ ಮಂಗಳೂರಿನ ನಿರ್ಮಾತೃ , ಮಾಜಿ ಲೋಕ ಸಭಾ ಸದಸ್ಯ ಉಳ್ಳಾಲ ಶ್ರೀನಿವಾಸ್ ಮಲ್ಯರ ಪುತ್ಥಳಿಯು ಹೆದ್ದಾರಿಯ ಅಭಿವೃದ್ಧಿ ಕಾಮಗಾರಿಯ ನಿಟ್ಟಿನಲ್ಲಿ ಸ್ಥಳಾಂತರಗೊಳ್ಳಲು ಸಿದ್ಧವಾಗಿದ್ದು, ಮಹಾನಗರ ಪಾಲಿಕೆಯ ಅಧಿಕಾರಿಗಳು ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳೊಂದಿಗೆ ಚರ್ಚಿಸಿ , ಬಳಿಕ ಸ್ಥಳಕ್ಕೆ ಭೇಟಿ ನೀಡಿ ,ಪುತ್ಥಳಿಯನ್ನು ಸೂಕ್ತವಾದ ಸ್ಥಳಕ್ಕೆ ಸ್ಥಳಾಂತರಿಸಿ ಉತ್ತಮ ರೀತಿಯಲ್ಲಿ ಅಭಿವೃದ್ಧಿ ಪಡಿಸುವಂತೆ ಉಳ್ಳಾಲ ಶ್ರೀನಿವಾಸ್ ಮಲ್ಯ ಜನ್ನ ದಿನ ಆಚರಣಾ ಸಮಿತಿಯ ಪದಧಿಕಾರಿಗಳು ಮನವಿ ಸಲ್ಲಿಸಿದರು.


ಈ ಸಂದರ್ಭದಲ್ಲಿ ಮಲ್ಯರ ಕುಟುಂಬಸ್ಥರಾದ ಉಳ್ಳಾಲ ಬಾಲಚಂದ್ರ ಮಲ್ಯ , ಉಳ್ಳಾಲ ವಿಜಿತಾತ್ಮ ಮಲ್ಯ , ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಸ್ಟ್ಯಾನಿ ಅಲ್ವಾರಿಸ್ , ಅಕಾಡೆಮಿಯ ಸದಸ್ಯರಾದ ಸಮರ್ಥ್ ಭಟ್ , ಮುಲ್ಕಿ ಪಂಚಾಯತ್ ಸದಸ್ಯರಾದ ಬಾಲಚಂದ್ರ ಕಾಮತ್ , ಮ.ನ.ಪಾ ಮಾಜಿ ಉಪಮಹಾಪೌರರಾದ ಮೊಹಮ್ಮದ್ ಕುಂಜತ್ತಬೈಲ್ , ಕಸ್ತೂರಿ ಬಾಲಕೃಷ್ಣ ಪೈ , ಸಮಿತಿ ಸದಸ್ಯರಾದ ನೀತು ಶರಣ್ , ರಾಜೇಶ್ ದೇವಾಡಿಗ, ದುರ್ಗಪ್ರಸಾದ್ , ಹೊನಯ್ಯ ಟಿ.ಸಿ, ಯೋಗೀಶ್ ನಾಯಕ್ , ರಿತೇಶ್ ಅಂಚನ್ , ವಿದ್ಯಾ ಶೆಣೈ , ಮಮತಾ ಕುಡ್ವ , ನಿರ್ಮಲ ಪೈ , ಅನಿತಾ ಡಿಸೋಜ , ರಾಧಿಕಾ ನಾಯಕ್ , ರವಾಲನಾಥ್ ಕಾಮತ್ ಮತ್ತಿತರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here