Home ಕರಾವಳಿ ವೇಣೂರು ನದಿನೀರಿನಲ್ಲಿ ಮುಳುಗಿ ಮೂವರು ಯುವಕರು ಸಾವು..!

ವೇಣೂರು ನದಿನೀರಿನಲ್ಲಿ ಮುಳುಗಿ ಮೂವರು ಯುವಕರು ಸಾವು..!

0

ಬೆಳ್ತಂಗಡಿ:  ವೇಣೂರಿನ ಗೆಳೆಯನ ಮನೆಗೆ ಬಂದಿದ್ದ ಮೂವರು ಯುವಕರು ಬರ್ಕಜೆ ಎಂಬಲ್ಲಿ ನದಿ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಬುಧವಾರ ಸಂಜೆ ಸಂಭವಿಸಿದೆ.


ಮೃತ ಯುವಕರು ಲಾರೆನ್ಸ್(21), ಸೂರಜ್ (19) ಹಾಗೂ ಜೈಸನ್ (19) ಎಂಬವರಾಗಿದ್ದಾರೆ.
ವೇಣೂರು ಚರ್ಚನ ಕಾರ್ಯಕ್ರಮದ ಹಿನ್ನಲೆಯಲ್ಲಿ ಇವರು ಗೆಳೆಯನ ಮನೆಗೆ ಬಂದಿದ್ದರು ಎನ್ನಲಾಗಿದ್ದು ಬಳಿಕ ನದಿಯಲ್ಲಿ ಸ್ನಾನಕ್ಕೆ ಇಳಿದಿದ್ದರು ಕಿಂಡಿ ಅಣೆಕಟ್ಟಿನ ಸಮೀಪ ಇವರು ಸ್ನಾನಕ್ಕೆ ಇಳಿದಿದ್ದು ನದಿ ನೀರಿನಲ್ಲಿ ಸಿಲುಕಿ ಮೂವರು ಮೃತಪಟ್ಟಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು, ಅಗ್ನಿ ಶಾಮಕದಳದವರು ತೆರಳಿದ್ದು ಸ್ಥಳೀಯರ ಸಹಕಾರದೊಂದಿಗೆ ಮೃತದೇಹಗಳನ್ನು ಮೇಲೆತ್ತಲಾಗಿದೆ.

LEAVE A REPLY

Please enter your comment!
Please enter your name here