Home ಕರಾವಳಿ ಯುವ ಉದ್ಯಮಿ ಕುಸುಮಾಧರ ಸೇರಿದಂತೆ ದ. ಕ ಜಿಲ್ಲೆಯ 25 ಮಂದಿ ಸಾಧಕರಿಗೆ ‘ಬಿಜಿಎಸ್ ಕರಾವಳಿ...

ಯುವ ಉದ್ಯಮಿ ಕುಸುಮಾಧರ ಸೇರಿದಂತೆ ದ. ಕ ಜಿಲ್ಲೆಯ 25 ಮಂದಿ ಸಾಧಕರಿಗೆ ‘ಬಿಜಿಎಸ್ ಕರಾವಳಿ ರತ್ನ’ ಪ್ರಶಸ್ತಿ ಪ್ರದಾನ

0

ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಮಂಗಳವಾರ ಬಿಜಿಎಸ್ ಸಭಾಂಗಣದಲ್ಲಿ ‘ಬಿಜಿಎಸ್ ಕರಾವಳಿ ರತ್ನ’ ಪ್ರಶಸ್ತಿ ಪ್ರದಾನ ಮಾಡಲಾಯಿತು.


ಸುಳ್ಯ ತಾಲೂಕಿನ ಯುವ ಉದ್ಯಮಿ ಕುಸುಮಾಧರ ಸೇರಿದಂತೆ ಸುಮಾರು 25 ಮಂದಿ ಸಾಧಕರು ಪ್ರಶಸ್ತಿ ಪಡೆದುಕೊಂಡರು. ಈ ವಿಶೇಷ ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಪರಮಪೂಜ್ಯ ಜಗದ್ಗುರು ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿ ದಿವ್ಯ ಸಾನ್ನಿಧ್ಯವಹಿಸಿದ್ದರು. ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಮ್ ನ ಪರಮಪೂಜ್ಯ ಸ್ವಾಮೀಜಿಗಳಾದ ಶ್ರೀ ಗುರುದೇವಾನಂದ ಸ್ವಾಮೀಜಿ ಆಶೀರ್ವಚನ ನೀಡಿದರು. ಶ್ರೀ ಆದಿಚುಂಚನಗಿರಿ ಮಂಗಳೂರು ಶಾಖಾ ಮಠದ ಶ್ರೀ ಡಾ. ಧರ್ಮಪಾಲನಾಥ ಸ್ವಾಮೀಜಿ ದಿವ್ಯ ಉಪಸ್ಥಿತಿ ಇದ್ದರು.

ಸಭಾಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಡಾ. ವೈ ಭರತ್ ಶೆಟ್ಟಿವಹಿಸಿದ್ದರು. ಹೊಸದಿಗಂತ ಪತ್ರಿಕೆಯ ಸಿಇಒ ಪಿ.ಎಸ್ ಪ್ರಕಾಶ್, ಮಾಜಿ ಶಾಸಕ ಸಂಜೀವ ಮಠಂದೂರು, ಮ.ನ.ಪಾ ಸದಸ್ಯೆ ಸುಮಂಗಳ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here