ಬೆಂಗಳೂರು: ರಾಜ್ಯದಲ್ಲಿ ಬಿಪಿಎಲ್ ಕಾರ್ಡ್ ರದ್ದಾದ ಅರ್ಹ ಫಲಾನುಭವಿಗಳಿಗೆ ಸರ್ಕಾರ ಗುಡ್ ನ್ಯೂಸ್ ನೀಡಿದೆ. ರೇಷನ್ ಕಾರ್ಡ್ ಸಮಸ್ಯೆ ಪರಿಹಾರಕ್ಕೆ ಆಹಾರ ಇಲಾಖೆ ಅಧಿಕಾರಿಗಳಿಗೆ ಹೊಸ ಡೆಡ್ಲೈನ್ ನೀಡಿರುವ ರಾಜ್ಯ ಸರ್ಕಾರ, ಇದೇ ನವೆಂಬರ್ 28ರವರೆಗೆ ಸಮಸ್ಯೆಯನ್ನು ಸರಿಪಡಿಸಿ ಎಂದು ತಿಳಿಸಿದೆ.
ಯಾವುದೇ ಅರ್ಹ ಬಿಪಿಎಲ್ ರದ್ದಾಗಿಲ್ಲ ಅನರ್ಹರನ್ನ ಮಾತ್ರ ಎಪಿಎಲ್‌ಗೆ ಸೇರಿಸಲಾಗಿದೆ ಎಂದು ಇತ್ತೀಚೆಗೆ ಆಹಾರ ಸಚಿವ ಕೆ.ಹೆಚ್ ಮುನಿಯಪ್ಪ ತಿಳಿಸಿದ್ದರು. ಒಂದು ವೇಳೆ ಬಿಪಿಎಲ್ಗೆ ಅರ್ಹರಿದ್ದು, ಎಪಿಎಲ್ ಆಗಿದ್ರೆ ಅಂತವರಿಗೆ ಪುನರ್ ಸ್ಥಾಪಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಇತ್ತಿಚೆಗೆ ಸಚಿವರು ತಿಳಿಸಿದ್ದರು.
ಇದೀಗ ಬಿಪಿಎಲ್ ಕಾರ್ಡ್ ಸಮಸ್ಯೆ ಪರಿಹಾರಕ್ಕೆ ಅಧಿಕಾರಿಗಳಿಗೆ ಹೊಸ ಸಮಯಾವಕಾಶವನ್ನು ಆಹಾರ ಸಚಿವ ಮುನಿಯಪ್ಪ ನೀಡಿದ್ದಾರೆ. ಇದೇ ನವೆಂಬರ್ 28ಕ್ಕೆ ಮತ್ತೆ ಡೆಡ್ ಲೈನ್ ಕೊಟ್ಟಿರುವ ಆಹಾರ ಸಚಿವರು, ಈ ಅವಧಿಯಲ್ಲಿ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಿ ಎಂದು ಅಧಿಕಾರಿಗಳಿಗೆ ತಿಳಿಸಿದ್ದಾರೆ. ಅರ್ಹರಾಗಿದ್ದು ಬಿಪಿಎಲ್ ಕಾರ್ಡ್ ವಂಚಿತರಾದವರೆ ಟೆನ್ಶನ್ ಬಿಡಿ. ಇನ್ನೂ 3ದಿನದ ಒಳಗಡೆ ಪಡಿತರ ಪಡೆಯಬಹುದು ಎಂದು ಆಹಾರ ಸಚಿವರು ತಿಳಿಸಿದ್ದಾರೆ.
ಸ್ಥಳ ಪರಿಶೀಲನೆ ಮಾಡಿ ಅರ್ಹರಿಗೆ ಬಿಪಿಎಲ್ ಕಾರ್ಡ್ ವಾಪಸ್ ಆಗುತ್ತೆ. ನವೆಂಬರ್ 28ರ ಒಳಗಡೆ ಸಮಸ್ಯಗೆ ಪರಿಹಾರ ಕೊಡಲು ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಸಚಿವರು ಹೇಳಿದ್ದಾರೆ. ಆದ್ರೆ, ಸಚಿವರು ಡೆಡ್ ಲೈನ್ ಮೇಲೆ ಡೆಡ್ ಲೈನ್ ಕೊಡುತ್ತಿರುವುದು ಅಧಿಕಾರಿಗಳು ಸಕಷ್ಟ ತಂದಿದೆ ಎನ್ನಲಾಗುತ್ತಿದೆ. ಈಗಾಗಲೆ ರಜೆ, ಟೈಮಿಂಗ್ ಕೂಡ ನೋಡದೆ ಅಧಿಕಾರಿಗಳು ಹಗಲು ರಾತ್ರಿ ಕೂಡ ಕೆಲಸ ಮಾಡುತ್ತಿದ್ದಾರೆ. ಇನ್ನು 3 ದಿನದಲ್ಲಿ ಸಮಸ್ಯೆ ಪರಿಹಾರ ಸಾಧ್ಯನಾ ಎನ್ನುವ ಪ್ರಶ್ನೆ ಎದುರಾಗಿದೆ.
ರೇಷನ್ ಕಾರ್ಡ್ ರದ್ದಾದ ವಿಚಾರವಾಗಿ ಈ ಹಿಂದೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದ ಸಚಿವ ಮುನಿಯಪ್ಪ, ಯಾವುದೇ ಅರ್ಹ ಬಿಪಿಎಲ್, ಎಪಿಎಲ್ ಕಾರ್ಡ್‌ಗಳನ್ನು ರದ್ದುಪಡಿಸುವುದಿಲ್ಲ. 66% ಬಿಪಿಎಲ್ ಕಾರ್ಡ್‌ಗಳಲ್ಲಿ ಅನರ್ಹರನ್ನ ಮಾತ್ರ ಎಪಿಎಲ್‌ಗೆ ಸೇರಿಸಲಾಗಿದೆ. ತೆರಿಗೆ ಪಾವತಿದಾರರು, ಸರ್ಕಾರಿ ನೌಕರರ ಕುಟುಂಬಗಳ ಬಿಪಿಎಲ್ ಕಾರ್ಡ್‌ಗಳನ್ನ ಮಾತ್ರ ಎಪಿಎಲ್‌ಗೆ ಸೇರಿಸಲಾಗಿದೆ. ಅನರ್ಹ ಇರಬಹುದೆನ್ನುವ ಕಾರ್ಡ್‌ಗಳನ್ನ ಮಾತ್ರ ಅಮಾನತ್ತಿನಲ್ಲಿಡಲಾಗಿದೆ ಎಂದು ಹೇಳಿದ್ದರು. ಅಲ್ಲದೆ ಒಂದು ವೇಳೆ ಬಿಪಿಎಲ್ ಗೆ ಅರ್ಹರಿದ್ದು, ಎಪಿಎಲ್ ಆಗಿದ್ರೆ ಅಂತವರಿಗೆ ಪುನರ್ ಸ್ಥಾಪಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದ್ದರು.