Home ತಾಜಾ ಸುದ್ದಿ “Google Map” ಬಳಸಿ ಕಾರು ಚಾಲನೆ : ಅಪೂರ್ಣ ಸೇತುವೆಯಿಂದ ಕಾರು ಕೆಳಕ್ಕೆ ಬಿದ್ದು ಮೂವರು...

“Google Map” ಬಳಸಿ ಕಾರು ಚಾಲನೆ : ಅಪೂರ್ಣ ಸೇತುವೆಯಿಂದ ಕಾರು ಕೆಳಕ್ಕೆ ಬಿದ್ದು ಮೂವರು ಮೃತ್ಯು..!

0

ಬರೇಲಿ: ನಿರ್ಮಾಣ ಹಂತದಲ್ಲಿದ್ದ ಅಪೂರ್ಣ ಸೇತುವೆಯಿಂದ ಕಾರು ಕೆಳಕ್ಕೆ ಬಿದ್ದು ಸಂಭವಿಸಿದ ದುರಂತದಲ್ಲಿ ಮೂರು ಮಂದಿ ಮೃತಪಟ್ಟಿದ್ದಾರೆ. ಶನಿವಾರ ರಾತ್ರಿ ಫರೀದ್ಪುರದಲ್ಲಿ ಈ ಘಟನೆ ನಡೆದಿದೆ.

ಗೂಗಲ್ ಮ್ಯಾಪ್ ಬಳಸಿ ಕಾರು ಚಲಾಯಿಸಲಾಗುತ್ತಿತ್ತು ಎಂದು ಪೊಲೀಸರು ಹೇಳಿದ್ದಾರೆ. ದಾತಾಗಂಜ್ ನಿಂದ ಫರೀದ್ಪುರಕ್ಕೆ ಖಲ್ಲಾಪುರ ಮಾರ್ಗವಾಗಿ ಬರಲು ಗೂಗಲ್ ಮ್ಯಾಪ್ ನೆರವು ಪಡೆಯಲಾಗಿತ್ತು.

ಆದರೆ ರಾಮಗಂಗಾ ನದಿಗೆ ಕಟ್ಟಲಾಗುತ್ತಿದ್ದ ಸೇತುವೆ ಅಪೂರ್ಣವಾಗಿತ್ತು ಎಂಬ ವಿಚಾರ ಅವರಿಗೆ ತಿಳಿದಿರಲಿಲ್ಲ ಎಂದು ವಿವರಿಸಿದ್ದಾರೆ. ತಡರಾತ್ರಿ ಈ ದುರಂತ ಸಂಭವಿಸಿದ್ದರಿಂದ ಸಂತ್ರಸ್ತರಿಗೆ ಯಾವ ನೆರವೂ ಸಿಗಲಿಲ್ಲ.

ಭಾನುವಾರ ಬೆಳಿಗ್ಗೆ ಖಲ್ಲಾಪುರ ಗ್ರಾಮಸ್ಥರು ಅಪೂರ್ಣ ಸೇತುವೆಯ ಕೆಳಗೆ ಕಾರು ಬಿದ್ದಿದ್ದನ್ನು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದು, ಬರೇಲಿ ಜಿಲ್ಲೆಯ ದಾತಾಗಂಜ್ ನಿಂದ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲಿಸಿದರು.

‘ಗುರುಗ್ರಾಮ ಮೂಲದ ಭದ್ರತಾ ಕಂಪನಿಗೆ ಸೇರಿದ ಕಾರು ಇದು ಎನ್ನುವುದು ಪತ್ತೆಯಾಗಿದ್ದು, ನಿತಿನ್ ಕುಮಾರ್ (30) ಅವರ ಸಹೋದರ ಸಂಬಂಧಿಗಳಾದ ಅಜಿತ್ ಕುಮಾರ್ (35) ಮತ್ತು ಅಮಿತ್ ಕುಮಾರ್ (30) ಮೃತಪಟ್ಟಿದ್ದಾರೆ.

LEAVE A REPLY

Please enter your comment!
Please enter your name here