Home ಕರಾವಳಿ ಪುತ್ತೂರು: ಮಾದಕದ್ರವ್ಯ ಸೇವಿಸಿ ಅನುಚಿತ ವರ್ತನೆ – ಇಬ್ಬರು ವಶಕ್ಕೆ

ಪುತ್ತೂರು: ಮಾದಕದ್ರವ್ಯ ಸೇವಿಸಿ ಅನುಚಿತ ವರ್ತನೆ – ಇಬ್ಬರು ವಶಕ್ಕೆ

0

ಪುತ್ತೂರು: ಚಿಕ್ಕಮುಟ್ನೂರು ಗ್ರಾಮದ ಸಾಲ್ಮರ ಎಂಬಲ್ಲಿ ಮಾದಕದ್ರವ್ಯ ಸೇವಿಸಿ ಅನುಚಿತವಾಗಿ ವರ್ತಿಸುತ್ತಿದ್ದ ಇಬ್ಬರನ್ನು ಪುತ್ತೂರು ನಗರ ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ.

ಮಹಮ್ಮದ್‌ ಇಬಾಶ್‌ (19) ಮತ್ತು ಅಹಮ್ಮದ್‌ ಇಝಾಜ್ (27)ಬಂಧಿತ ಆರೋಪಿಗಳು. ಪುತ್ತೂರು ನಗರ ಪೊಲೀಸರು ರೌಂಡ್ಸ್ ಕರ್ತವ್ಯದಲ್ಲಿದ್ದಾಗ ಸಾರ್ವಜನಿಕರ ಮಾಹಿತಿ ಆಧರಿಸಿ ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ. ಬಳಿಕ ಅವರನ್ನು ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಪರೀಕ್ಷೆಗೊಳಪಡಿಸಲಾಯಿತು. ಈ ವೇಳೆ ಅವರು ಮಾದಕದ್ರವ್ಯ ಸೇವಿಸಿರುವುದು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

LEAVE A REPLY

Please enter your comment!
Please enter your name here