Home ತಾಜಾ ಸುದ್ದಿ ಹೇರ್ ಡ್ರೈಯರ್ ಸ್ಪೋಟ ಪ್ರಕರಣಕ್ಕೆ ಬಿಗ್ ಟ್ವಿಸ್ಟ್….! ಪೋಲಿಸರ ತನಿಖೆಯಲ್ಲಿ ಸತ್ಯಂಶ ಬಯಲು

ಹೇರ್ ಡ್ರೈಯರ್ ಸ್ಪೋಟ ಪ್ರಕರಣಕ್ಕೆ ಬಿಗ್ ಟ್ವಿಸ್ಟ್….! ಪೋಲಿಸರ ತನಿಖೆಯಲ್ಲಿ ಸತ್ಯಂಶ ಬಯಲು

0
ಬಾಗಲಕೋಟೆ: ಜಿಲ್ಲೆಯಲ್ಲಿ ಹೇರ್‌ ಡ್ರೈಯರ್‌ ಸ್ಪೋಟಗೊಂಡು ಮಹಿಳೆಯೊಬ್ಬರ ಎರಡು. ಕೈಗಳ ಬೆರಳುಗಳು ಛಿದ್ರಗೊಂಡಿದ್ದ ಘಟನೆಗೆ ಬಿಗ್‌ ಟ್ವಿಸ್ಟ್‌ ಸಿಕ್ಕಿದೆ.
ಆರೋಪಿಯೊಬ್ಬ ಶಶಿಕಲಾ ಎನ್ನುವವರ ಮೇಲಿನ ಸಿಟ್ಟಿನಿಂದ ಹೇರ್‌ ಡ್ರೈಯರ್‌ ನಲ್ಲಿ ಡಿಟನೇಟರ್‌ ಇಟ್ಟು ಕಳುಹಿಸಿದ್ದರ ಪರಿಣಾಮ, ಸ್ಫೋಟಗೊಂಡಿರೋ ವಿಷಯ ಬಹಿರಂಗವಾಗಿದೆ.
ಬಾಗಲಕೋಟೆ ಜಿಲ್ಲೆಯ ಇಳಕಲ್‌ ಪಟ್ಟಣದಲ್ಲಿ ಆರೋಪಿ ಸಿದ್ಧಪ್ಪ ಶೀಲವಂತ ಎಂಬಾತ ಮಾಜಿ ಯೋಧನ ಪತ್ನಿ ಬಸವರಾಜೇಶ್ವರಿ ಎಂಬಾಕೆಯನ್ನು ಪ್ರೀತಿಸುತ್ತಿದ್ದರು. ಈ ವಿಷಯ. ತಿಳಿದಂತ ಶಶಿಕಲಾ ಹಡಪದ ಎಂಬಾಕೆಯು ಬಸವರಾಜೇಶ್ವರಿಗೆ ನೀನು ಸಿದ್ಧಪ್ಪ ಶೀಲವಂತ ಸಹವಾಸ ಬಿಡುವಂತೆ ಬುದ್ಧಿವಾದ ಹೇಳಿದ್ದಳು. ಈ ವಿಚಾರ ಸಿದ್ಧಪ್ಪನಿಗೆ ತಿಳಿದು ಶಶಿಕಲಾ ಹಡಪದ ಕೊಲೆಗೆ ಸಂಚು ರೂಪಿಸಿದ್ದನು.
ಶಶಿಕಲಾ ಅವರ ಹೆಸರಿಗೆ ಹೇರ್‌ ಡ್ರೈಯರ್‌ ಕೋರಿಯರ್‌ ಮಾಡಿದ್ದಂತ ಸಿದ್ಧಪ್ಪ ಶೀಲವಂತ, ಅದರಲ್ಲಿ ಡಿಟೋನೇಟರ್‌ ಇರಿಸಿ ಕಳುಹಿಸಿದ್ದನು. ಕರೆಂಟ್‌ ಗೆ ಪ್ಲಗ್‌ ಹಾಕಿ ಸ್ಟಿಚ್‌ ಹಾಕಿದ ತಕ್ಷಣವೇ ಸ್ಫೋಟಗೊಂಡು ಶಶಿಕಲಾ ಹತ್ಯೆ ಮಾಡುವ ಸಂಚು ಇದಾಗಿತ್ತು.
ನವಂಬರ್‌.20, 2024ರಂದು ಕೋರಿಯರ್‌ ಬಂದಾಗ ಶಶಿಕಲಾ ಹಡಪದ ಮನೆಯಲ್ಲಿ ಇರಲಿಲ್ಲ. ಕೋರಿಯರ್‌ ನಲ್ಲಿ ಬಂದಿದ್ದಂತ ಹೇರ್‌ ಡ್ರೈಯರ್‌ ಅನ್ನು ಸಿದ್ದಪ್ಪ ಶೀಲವಂತ ಪ್ರೇಯಸಿ ಮಾಜಿ ಯೋಧನ ಪತ್ನಿ ಬಸವರಾಜೇಶ್ವರಿಯೇ ಪಡೆದಿದ್ದಳು. ಜೊತೆಗೆ ಶಶಿಕಲಾ ಬರುವ ಮುನ್ನವೇ ಹೇಗಿದೆ ಎಂದು ನೋಡೋದಕ್ಕೆ ಕರೆಂಟ್‌ ಗೆ ಹಾಕಿ ಚೆಕ್‌ ಮಾಡೋದಕ್ಕೆ ಹೋದಂತ ಸಂದರ್ಭದಲ್ಲಿ ಸ್ಪೋಟಗೊಂಡಿತ್ತು.
ಆ ಬಳಿಕ ಬಸವರಾಜೇಶ್ವರಿ ಅವರ ಎರಡು ಕೈಗಳ ಬೆರಳುಗಳು ಛಿದ್ರಗೊಂಡು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸ ಪಡೆಯುತ್ತಿದ್ದಾರೆ. ಈ ಸಂಬಂಧ ಇಳಕಲ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪೊಲೀಸರು
ತನಿಖೆಗೆ ಇಳಿದಾಗ ಕೋರಿಯರ್‌ ಕಳುಹಿಸಿದ್ದು ಆರೋಪಿ ಸಿದ್ಧಪ್ಪ ಶೀಲವಂತ ಎಂಬುದನ್ನು
ಪತ್ತೆ ಹಚ್ಚಿ ಬಂಧಿಸಿದ್ದಾರೆ.
ಆ ಬಳಿಕ ಪೊಲೀಸರ ವರಸೆಯಲ್ಲಿ ವಿಚಾರಣೆ ನಡೆಸಿದಾಗ ಹೇರ್‌ ಡ್ರೈಯರ್‌ ನಲ್ಲಿ ಡಿಟೋನೇಟರ್‌ ಇರಿಸಿ ಕಳುಹಿಸಿದ್ದಂತ ವಿಷಯ ಬೆಳಕಿಗೆ ಬಂದಿದೆ.

LEAVE A REPLY

Please enter your comment!
Please enter your name here