Home ತಾಜಾ ಸುದ್ದಿ ಮುರಿದುಬಿತ್ತು ಸಂಗೀತ ಮಾಂತ್ರಿಕ ಎ.ಆರ್.ರೆಹಮಾನ್ ಅವರ 29ವರ್ಷಗಳ ದಾಂಪತ್ಯ ಜೀವನ..!

ಮುರಿದುಬಿತ್ತು ಸಂಗೀತ ಮಾಂತ್ರಿಕ ಎ.ಆರ್.ರೆಹಮಾನ್ ಅವರ 29ವರ್ಷಗಳ ದಾಂಪತ್ಯ ಜೀವನ..!

0

ಚೆನ್ನೈ: ಸಂಗೀತ ಮಾಂತ್ರಿಕ ಎಆರ್ ರೆಹಮಾನ್ ಅವರ ಪತ್ನಿ ಸಾಯಿರಾಬಾನು ಅವರು ತಾನು ತಮ್ಮ ಪತಿಯಿಂದ ಬೇರ್ಪಡುವುದಾಗಿ ಘೋಷಿಸಿದ್ದಾರೆ. ಸಾಯಿರಾ ಅವರ ವಕೀಲ ವಂದನಾ ಶಾ ದಂಪತಿ ಬೇರ್ಪಡುವ ನಿರ್ಧಾರದ ಬಗ್ಗೆ ಅಧಿಕೃತ ಹೇಳಿಕೆಯನ್ನು ಬಿಡುಗಡೆ ಮಾಡಿದ್ದಾರೆ. ಮದುವೆಯಾಗಿ ಬರೋಬ್ಬರಿ 29ವರ್ಷಗಳ ಬಳಿಕ, ಸಾಯಿರಾ ಅವರು ತಮ್ಮ ಪತಿ ಎಆರ್ ರೆಹಮಾನ್‌ನಿಂದ ಬೇರ್ಪಡುವ ಕಠಿಣ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ಇವರ ಸಂಬಂಧದಲ್ಲಿ ಉಂಟಾದ ಆಳವಾದ ಭಾವನಾತ್ಮಕ ಒತ್ತಡದ ಬಳಿಕ ಅವರು ಈ ನಿರ್ಧಾರ ತೆಗೆದುಕೊಂಡಿದ್ದಾರೆ. ಒಬ್ಬರಿಗೊಬ್ಬರ ನಡುವೆ ಪ್ರೀತಿಯಿದ್ದರೂ, ತಮ್ಮ ನಡುವೆ ಆಗುವ ಮನಸ್ತಾಪಗಳು ಹಾಗೂ ಸಮಸ್ಯೆಗಳು ದೊಡ್ಡ ಅಂತರವನ್ನು ಸೃಷ್ಟಿಸಿದೆ ಎಂದು ದಂಪತಿ ಕಂಡುಕೊಂಡಿದ್ದಾರೆ. ಈ ಹಂತದಲ್ಲಿ ಯಾರೂ ತಮ್ಮ ನಡುವೆ ಸೇತುವೆಯಾಗಲು ಸಾಧ್ಯವಿಲ್ಲ ಎಂದು ಅವರು ಭಾವಿಸಿದ್ದಾರೆ. ಆದ್ದರಿಂದ ಸಾಯಿರಾ ನೋವು ಹಾಗೂ ಸಂಕಟದಿಂದಲೇ ಈ ನಿರ್ಧಾರ ತೆಗೆದುಕೊಂಡಿದ್ದಾರೆ’ ಎಂದು ಹೇಳಲಾಗಿದೆ. ಸಾಯಿರಾ ಅವರ ಈ ಸವಾಲಿನ ಸಮಯದಲ್ಲಿ ಅಭಿಮಾನಿಗಳು ತಮ್ಮ ಖಾಸಗಿತನವನ್ನು ಗೌರವಿಸಬೇಕು ಎಂದು ಬಯಸುತ್ತಾರೆ. ಏಕೆಂದರೆ, ಅವರೀಗ ತಮ್ಮ ಜೀವನದ ಅತ್ಯಂತ ಕಷ್ಟಕರ ಅಧ್ಯಾಯದಲ್ಲಿದ್ದಾರೆ ಎಂದು ವಕೀಲರು ತಿಳಿಸಿದ್ದಾರೆ. ಸಾಯಿರಾ ಗುಜರಾತಿ ಹಿನ್ನೆಲೆಯಿಂದ ಬಂದವರು. ಉತ್ತರ ಭಾರತದ ಸಂಪ್ರದಾಯ ಮತ್ತು ಸಂಸ್ಕೃತಿಯಲ್ಲಿ ಬೆಳೆದವರು. ಈ ದಂಪತಿಗೆ ಖತೀಜಾ, ರಹೀಮಾ ಮತ್ತು ಅಮೀನ್ ಎನ್ನುವ ಮೂರು ಮಕ್ಕಳಿದ್ದಾರೆ.


29 ವರ್ಷಗಳ ಕಾಲ ಎಆರ್‌ ರೆಹಮಾನ್‌ ಹಾಗೂ ಸಾಯಿರಾ ಜೊತೆಯಾಗಿ ಬದುಕಿದ್ದರು. 1995ರ ಮಾರ್ಚ್‌ 12 ರಂದು ಇವರಿಬ್ಬರ ವಿವಾಹ ನೆರವೇರಿತ್ತು. ಕೇರಳದ ಪ್ರಖ್ಯಾತ ನಟ ರಾಶಿನ್‌ ರೆಹಮಾನ್‌, ಸಾಯಿರಾ ಬಾನು ಅವರ ಅಕ್ಕ ಮಹ್ರುನ್ನಿಸಾ ಅವರನ್ನು ವಿವಾಹವಾಗಿದ್ದಾರೆ.

ಎಆರ್‌ ರೆಹಮಾನ್‌ ಅವರು ಪತ್ನಿ ಸಾಯಿರಾ ಬಾನು ಅವರೊಂದಿಗೆ ಕಾಣಿಸಿಕೊಳ್ಳುವುದು ಬಹಳ ಅಪರೂಪ. ಪ್ರಶಸ್ತಿ ಪ್ರದಾನ ಸಮಾರಂಭಗಳಲ್ಲಿ ಸಾಮಾನ್ಯವಾಗಿ ಅವರು ಏಕಾಂಗಿಯಾಗಿ ಭಾಗವಹಿಸುತ್ತಿದ್ದರು. 2024ರ ಜುಲೈನಲ್ಲಿ ಅನಂತ್‌ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್‌ ಅವರ ವಿವಾಹದ ವೇಳೆ ಇಬ್ಬರೂ ಜೊತೆಯಾಗಿ ಇರುವ ಫೋಟೋವನ್ನು ಎಆರ್‌ ರೆಹಮಾನ್‌ ತಮ್ಮ ಇನ್ಸ್‌ಟಾಗ್ರಾಮ್‌ ಪೋಸ್ಟ್‌ನಲ್ಲಿ ಹಂಚಿಕೊಂಡಿದ್ದರು.

ಕೆಲಸದ ವಿಚಾರದಲ್ಲಿ ನೋಡುವುದಾದರೆ, ಎಆರ್‌ ರೆಹಮಾನ್‌ ಕೊನೆಯದಾಗಿ ಧನುಷ್‌ ಅವರ ನಿರ್ದೇಶನದ 2ನೇ ಚಿತ್ರ ರಾಯನ್‌ನಲ್ಲಿ ಕೊನೆಯ ಬಾರಿಗೆ ಕೆಲಸ ಮಾಡಿದ್ದರು. ಛವ್ವಾ, ಥಗ್‌ ಲೈಫ್‌, ಗಾಂಧಿ ಟಾಕ್ಸ್‌ ಹೆಸರಿನ ಸಿನಿಮಾಗಳಲ್ಲಿ ಸದ್ಯ ಕೆಲಸ ಮಾಡುತ್ತಿದ್ದಾರೆ.

LEAVE A REPLY

Please enter your comment!
Please enter your name here