ಮಂಗಳೂರು ನೊಂದಾವಣಿ ಕಚೇರಿಯಲ್ಲಿ ಆಗುವ ತೊಂದರೆಯ ಬಗ್ಗೆ ಮಂಗಳೂರು ವಕೀಲರ ಸಂಘದ ಅಧ್ಯಕ್ಷರಾದ ರಾಘವೇಂದ್ರ ಎಚ್ ವಿ ರವರ ನೇತೃತ್ವದಲ್ಲಿ ಜಿಲ್ಲಾ ನೊಂದಾವಣಿ ಅಧಿಕಾರಿರವರಿಗೆ ಮನವಿ ಸಲ್ಲಿಸಿ. ಕಾವೇರಿ 2.0 ತಂತ್ರಾಂಶದಿಂದ ಸಾಮಾನ್ಯ ಜನರಿಗೆ ಆಗುವ ತೊಂದರೆಗಳನ್ನು ತಿಳಿಸಿ ಸರಿಪಡಿಸುವಂತೆ ಮನವಿಯನ್ನು ಸಲ್ಲಿಸಲಾಯಿತು.
ಇದಕ್ಕೆ ಪೂರಕವಾಗಿ ಸ್ಪಂದಿಸಿದ ಜಿಲ್ಲಾ ನೋಂದಾವಣೆ ಅಧಿಕಾರಿ ರವರು ಶೀಘ್ರ ಸಮಸ್ಯೆಯನ್ನು ಬಗೆಹರಿಸುವುದಾಗಿ ಭರವಸೆಯನ್ನು ನೀಡಿರುತ್ತಾರೆ. ವಕೀಲರ ಸಂಘದ ನಿಯೋಗದಲ್ಲಿ ಉಪಾಧ್ಯಕ್ಷರಾದ ಶ್ರೀ ಸುಜಿತ್ ಕುಮಾರ್, ಹಿರಿಯ ಸಮಿತಿ ಸದಸ್ಯರಾದ ಶ್ರೀಮತಿ ಸುಮನ ಶರಣ್,ಮಹಮ್ಮದ್ ಅಸ್ಗರ್, ಮುಡಿಪು ಹಿರಿಯ ವಕೀಲರಾದ ಶ್ರೀಮತಿ ಮರಿಯಮ್ಮ ಥಾಮಸ್, ಶ್ರೀ ಸತೀಶ್ ಭಟ್, ಶ್ರೀ ಇಸ್ಮಾಯಿಲ್ ಎಸ್, ಶ್ರೀಮತಿ ಸುಜಾತ ಗೋಪಾಲ್, ಶ್ರೀಮತಿ ನಯನ ಪೈ ಶ್ರೀ ಉದನೇಶ್ವರ ಬಿ ಮತ್ತು ಇತರ ವಕೀಲರ ಸಂಘದ ಸದಸ್ಯರು ಹಾಜರಿದ್ದರು.