Home ಕರಾವಳಿ ಪುತ್ತೂರು: ಮಹಾಲಿಂಗೇಶ್ವರ ‌ದೇವಸ್ಥಾನಕ್ಕೆ ಬರುವ ಭಕ್ತರಿಗೆ ವಸ್ತ್ರ ಸಂಹಿತೆ ಜಾರಿ

ಪುತ್ತೂರು: ಮಹಾಲಿಂಗೇಶ್ವರ ‌ದೇವಸ್ಥಾನಕ್ಕೆ ಬರುವ ಭಕ್ತರಿಗೆ ವಸ್ತ್ರ ಸಂಹಿತೆ ಜಾರಿ

0

ಪುತ್ತೂರು : ಪುರಾಣ ಪ್ರಸಿದ್ದ ಹತ್ತೂರ ಒಡೆಯ ಪುತ್ತೂರು ಮಹಾಲಿಂಗೇಶ್ವರ ‌ದೇವಸ್ಥಾನಕ್ಕೆ ಬರುವ ಭಕ್ತರಿಗೆ ಉಡುಪುಗಳ ಧರಿಸುವಿಕೆಗೆ ದೇವಳದ ಆಡಳಿತ ಮಂಡಳಿ ಮಾರ್ಗ ಸೂಚಿ ಬಿಡುಗಡೆ ಮಾಡಿದೆ.


ಪುರಾಣ ಪ್ರಸಿದ್ಧ ಪುತ್ತೂರು ಶ್ರೀ ‌ಮಹಾಲಿಂಗೇಶ್ವರ ದೇವಾಲಯಕ್ಕೆ ಬರುವ ಭಕ್ತರ ಸಂಖ್ಯೆ ‌ದಿನದಿಂದ‌ ದಿನಕ್ಕೆ ಹೆಚ್ಚಿತ್ತಿದ್ದು ಅದರಂತೆ ಎ ಗ್ರೇಡ್ ದೇವಾಲಯವಾಗಿ ಮಾರ್ಪಟ್ಟಿದೆ. ಈ ಹಿನ್ನೆಲೆಯಲ್ಲಿ ಮತ್ತು ಶಿಸ್ತು ಕಾಪಾಡಲು ಅನುಕೂಲವಾಗುವಂತೆ  ದೇವಾಲಯಕ್ಕೆ ಬರುವ ಭಕ್ತಾದಿಗಳಿಗೆ ವಸ್ತ್ರ ಸಂಹಿತೆಯ ಸಲುವಾಗಿ ಪ್ರವೇಶ ದ್ವಾರದ ಬಳಿ ಬೋರ್ಡ್ ಅಳವಡಿಸಲಾಗಿದೆ. ಈ ಹಿಂದೆಯು ಬೋರ್ಡ್ ಅಳವಡಿಸಿದ್ದರು ಸಹ ಈ ಬಾರಿ ಕೆಲವೊಂದು ಚಿತ್ರಗಳನ್ನು ‌ಬರೆದು ಬೋರ್ಡ್ ಅಳವಡಿಸಿದ್ದು ಮುಂದೆ ಕ್ಷೇತ್ರಕ್ಕೆ ಬರುವ ಎಲ್ಲ ಭಕ್ತಾಧಿಗಳು ಈ ಸೂಚನೆಯನ್ನು ಕಡ್ಡಾಯವಾಗಿ ‌ಪಾಲಿಸುವಂತೆ ಮಹಾಲಿಂಗೇಶ್ವರ ‌ಭಕ್ತ ಸಮಾಜ ಸಾಮಾಜಿಕ ಜಾಲ ತಾಣಗಳ ಮೂಲಕ ಮನವಿ ಮಾಡುತ್ತಿದ್ದಾರೆ.

LEAVE A REPLY

Please enter your comment!
Please enter your name here