Home ಕರಾವಳಿ ಸೌತಡ್ಕದಲ್ಲಿ ಅನ್ಯಕೋಮಿನ ಜೋಡಿ ಪತ್ತೆ..! ಪೋಲಿಸರಿಗೊಪ್ಪಿಸಿದ ಹಿಂದೂ ಸಂಘಟನೆಯ ಕಾರ್ಯಕರ್ತರು

ಸೌತಡ್ಕದಲ್ಲಿ ಅನ್ಯಕೋಮಿನ ಜೋಡಿ ಪತ್ತೆ..! ಪೋಲಿಸರಿಗೊಪ್ಪಿಸಿದ ಹಿಂದೂ ಸಂಘಟನೆಯ ಕಾರ್ಯಕರ್ತರು

0

ಪುತ್ತೂರು: ಶ್ರೀ ಕ್ಷೇತ್ರ ಮಹಾಗಣಪತಿ ಸೌತಡ್ಕ ಕ್ಷೇತ್ರಕ್ಕೆ ಹಿಂದೂ ಯುವತಿ ಜೊತೆ ಮುಸ್ಲಿಂ ಯುವಕನೋರ್ವ ಕಾಣಿಸಿಕೊಂಡಿದ್ದು, ಆಟೋದವರಿಗೆ ಪೋನ್ ಪೇ ಮಾಡಿದ ವೇಳೆ ಆತನ ಮುಸ್ಲಿಂ ಎಂದು ತಿಳಿದು ಹಿಂದೂಪರ ಸಂಘಟನೆಯ ಕಾರ್ಯಕರ್ತರು ಪೊಲೀಸರಿಗೆ ಒಪ್ಪಿಸಿದ್ದಾರೆ.

ಯುವಕ ಕೊಪ್ಪಳ ಮೂಲದವನಾಗಿದ್ದು, ಯುವತಿ ಬೆಂಗಳೂರು ಮೂಲ ಎಂದು ತಿಳಿದು ಬಂದಿದೆ. ಕೊಕ್ಕಡದಿಂದ ರಿಕ್ಷಾದ ಮೂಲಕ ಸೌತಡ್ಕ ದೇವಸ್ಥಾನಕ್ಕೆ ಬಂದು ರಿಕ್ಷಾದಿಂದ ಇಳಿದಿದ್ದರು. ಆಟೋ ಚಾಲಕನಿಗೆ ಫೋನ್ ಪೇ ಮೂಲಕ ಹಣ ಪಾವತಿಸಿದಾಗ ಹುಡುಗನ ಹೆಸರು ಬೇರೆ ಸಮುದಾಯಕ್ಕೆ ಸೇರಿರುವ ಮಾಹಿತಿ ತಿಳಿದು ಬಂದಿದ್ದು ಕೂಡಲೇ ರಿಕ್ಷಾ ಚಾಲಕ ಹಿಂದೂ ಸಂಘಟನೆಗಳ ಗಮನಕ್ಕೆ ತಂದಿದ್ದಾರೆ.

ಅನ್ಯ ಕೋಮಿನ ಜೋಡಿಯನ್ನು ಹಿಡಿದು ಪೊಲೀಸರಿಗೋಪ್ಪಿಸಿದ ಹಿಂದೂ ಸಂಘಟನೆಯ ಕಾರ್ಯಕರ್ತರು ಯುವಕ ಮತ್ತು ಯುವತಿಯ ಮನೆಯವರನ್ನು ಕರೆಯಿಸಿದ ನಂತರವೇ ಬಿಟ್ಟು ಕಳುಹಿಸಬೇಕು ಎಂದು ಒತ್ತಾಯಿಸಿದ್ದಾರೆ. ಧರ್ಮಸ್ಥಳ ಠಾಣೆಯ ಪೊಲೀಸರು ಠಾಣೆಗೆ ಕರೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.

LEAVE A REPLY

Please enter your comment!
Please enter your name here