Home ತಾಜಾ ಸುದ್ದಿ ಬಡ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ವರದಾನವಾದ ಪಿಎಂ ವಿದ್ಯಾಲಕ್ಷ್ಮೀ ಯೋಜನೆ – 10 ಲಕ್ಷದವರೆಗೆ ಸಾಲ.!

ಬಡ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ವರದಾನವಾದ ಪಿಎಂ ವಿದ್ಯಾಲಕ್ಷ್ಮೀ ಯೋಜನೆ – 10 ಲಕ್ಷದವರೆಗೆ ಸಾಲ.!

0

ಪ್ರಧಾನ ಮಂತ್ರಿ ವಿದ್ಯಾಲಕ್ಷ್ಮಿ ಯೋಜನೆ ಪೋರ್ಟಲ್‌ನ್ನು ವಿಶೇಷವಾಗಿ ಬಡ ವಿದ್ಯಾರ್ಥಿ (poor student) ಗಳನ್ನು ಗಮನದಲ್ಲಿಟ್ಟುಕೊಂಡು ಅಭಿವೃದ್ಧಿಪಡಿಸಲಾಗಿದೆ. ಈ ಯೋಜನೆಯಡಿ, ವಿದ್ಯಾರ್ಥಿವೇತನ ಮತ್ತು ಶಿಕ್ಷಣ ಸಾಲ (Scholarships and Education Loans) ಗಳನ್ನು ನೀಡಲಾಗುತ್ತದೆ. ಆರ್ಥಿಕ ಸಮಸ್ಯೆಯಿಂದ ವಿದ್ಯಾಭ್ಯಾಸ ಪೂರ್ಣಗೊಳಿಸಲು ಸಾಧ್ಯವಾಗದ ವಿದ್ಯಾರ್ಥಿಗಳಿಗೆ ನೆರವಾಗಲು ಕೇಂದ್ರ ಸರ್ಕಾರ (Central Govt) ‘ಪ್ರಧಾನ ಮಂತ್ರಿ ವಿದ್ಯಾ ಲಕ್ಷ್ಮಿ ಯೋಜನೆ’ (‘Pradhan Mantri Vidya Lakshmi Yojana’) ಆರಂಭಿಸಿದೆ. ಈ ಯೋಜನೆಯಡಿ, ವಿದ್ಯಾರ್ಥಿವೇತನ ಮತ್ತು ಶಿಕ್ಷಣ ಸಾಲವನ್ನು ನೀಡಲಾಗುತ್ತದೆ. ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

ಪ್ರಧಾನ ಮಂತ್ರಿ ವಿದ್ಯಾಲಕ್ಷ್ಮಿ ಯೋಜನೆಯಡಿ ಶಿಕ್ಷಣ ಸಾಲಕ್ಕಾಗಿ ಸಾಮಾನ್ಯ ಅರ್ಜಿ ನಮೂನೆ (CAF) ಸಹ ಈ ಪೋರ್ಟಲ್‌ನಲ್ಲಿ ಲಭ್ಯವಿದೆ. ಇವುಗಳ ಸಹಾಯದಿಂದ ಒಬ್ಬರು ಸಾಲಗಳು ಅಥವಾ ಅಧ್ಯಯನಕ್ಕಾಗಿ ವಿದ್ಯಾರ್ಥಿವೇತನಕ್ಕಾಗಿ ಅರ್ಜಿ ಸಲ್ಲಿಸಬಹುದು. ಈ ಪೋರ್ಟಲ್ ಮೂಲಕ ಸಾಲಗಳು ಮತ್ತು ವಿದ್ಯಾರ್ಥಿವೇತನಗಳಿಗೆ ಸಂಬಂಧಿಸಿದ ದೂರುಗಳನ್ನು ಸಹ ಸಲ್ಲಿಸಬಹುದು.

ಈ ಯೋಜನೆಗೆ ಇಲ್ಲಿಯವರೆಗೆ ದೇಶದ 13 ಬ್ಯಾಂಕ್‌ಗಳು ಈ ಪೋರ್ಟಲ್‌ನಲ್ಲಿ 22 ರೀತಿಯ ಶೈಕ್ಷಣಿಕ ಸಾಲ ಯೋಜನೆಗಳನ್ನು ನೋಂದಾಯಿಸಿವೆ. ಇವುಗಳಲ್ಲಿ ಎಸ್‌ಬಿಐ, ಐಡಿಬಿಐ ಬ್ಯಾಂಕ್, ಬ್ಯಾಂಕ್ ಆಫ್ ಇಂಡಿಯಾ ಮತ್ತು ಕೆನರಾ ಬ್ಯಾಂಕ್ ಸೇರಿವೆ. ಈ ಪೋರ್ಟಲ್‌ನ ಅಭಿವೃದ್ಧಿ ಮತ್ತು ನಿರ್ವಹಣೆಯನ್ನು NSDL E-governance ಮೂಲಸೌಕರ್ಯದಿಂದ ಮಾಡಲಾಗುತ್ತದೆ.

ಬಡ ವಿದ್ಯಾರ್ಥಿಗಳನ್ನು ಗಮನದಲ್ಲಿಟ್ಟುಕೊಂಡು ಈ ಪೋರ್ಟಲ್ ಅನ್ನು ವಿಶೇಷವಾಗಿ ಅಭಿವೃದ್ಧಿಪಡಿಸಲಾಗಿದೆ. ಹಲವು ಬಾರಿ ವಿದ್ಯಾರ್ಥಿಗಳು ಆರ್ಥಿಕ ಸಮಸ್ಯೆಯಿಂದ ವಿದ್ಯಾಭ್ಯಾಸದಿಂದ ಹೊರಗುಳಿಯುತ್ತಾರೆ. ಈ ಯೋಜನೆಯು ಅಂತಹ ವಿದ್ಯಾರ್ಥಿಗಳಿಗೆ ಸಹಾಯ ಮಾಡಲು ಉದ್ದೇಶಿಸಲಾಗಿದೆ. ವಿದ್ಯಾರ್ಥಿಗಳಿಗೆ ಸಂಬಂಧಿಸಿದ ಎಲ್ಲಾ ರೀತಿಯ ಯೋಜನೆಗಳನ್ನು ಈ ಯೋಜನೆಯಡಿ ಸೇರಿಸಲಾಗುವುದು. ಆನ್‌ಲೈನ್ ವೆಬ್‌ಸೈಟ್ (Online website) ಸಹಾಯದಿಂದ, ಸಾಲ ಮತ್ತು ವಿದ್ಯಾರ್ಥಿವೇತನ ಪ್ರಕ್ರಿಯೆಯನ್ನು ಪೂರ್ಣಗೊಳಿಸುವುದು ವ್ಯವಸ್ಥೆಯಲ್ಲಿ ಪಾರದರ್ಶಕತೆಯನ್ನು ತರಲಾಗಿದೆ. ಪ್ರಧಾನ ಮಂತ್ರಿ ವಿದ್ಯಾ ಲಕ್ಷ್ಮಿ ಯೋಜನೆ ಅಡಿಯಲ್ಲಿ ವಿದ್ಯಾರ್ಥಿಗಳು ಕೇವಲ ಒಂದು ಫಾರ್ಮ್ ಅನ್ನು ಭರ್ತಿ ಮಾಡಬೇಕು. ಯೋಜನೆಯಡಿಯಲ್ಲಿ ಶಿಕ್ಷಣ ಸಾಲದ ಮೇಲಿನ ಬಡ್ಡಿ ದರವು ಆಯಾ ಬ್ಯಾಂಕ್‌ಗಳ ಪ್ರಕಾರ ಇರುತ್ತದೆ. ಬ್ಯಾಂಕ್‌ಗಳ ಬಡ್ಡಿ ದರವನ್ನು ತಿಳಿಯಲು ವಿದ್ಯಾರ್ಥಿಗಳು ಪೋರ್ಟಲ್‌ಗೆ ಲಾಗಿನ್ (Login to the portal) ಆಗಬೇಕು.

ವಿದ್ಯಾ ಲಕ್ಷ್ಮಿ ಯೋಜನಾ ಪೋರ್ಟಲ್‌ನ ವೈಶಿಷ್ಟ್ಯಗಳು

  • ಶಿಕ್ಷಣ ಸಾಲಕ್ಕೆ ಅರ್ಜಿ ಸಲ್ಲಿಸುವ ಸೌಲಭ್ಯ.
  • ಯೋಜನೆಯಡಿಯಲ್ಲಿ ಸಾಲದ ಅರ್ಜಿಗಳ ಸ್ಥಿತಿಯನ್ನು ಪರಿಶೀಲಿಸಲು ಡ್ಯಾಶ್‌ಬೋರ್ಡ್ ಸೌಲಭ್ಯ.
  • Education loan ಗೆ ಸಂಬಂಧಿಸಿದ ಪ್ರಶ್ನೆಗಳು ಮತ್ತು ದೂರುಗಳಿಗಾಗಿ ವಿದ್ಯಾರ್ಥಿಗಳಿಗೆ ಇಮೇಲ್ ಸೌಲಭ್ಯ.
  • ಸಾಲ ಪ್ರಕ್ರಿಯೆಯ ಪ್ರಸ್ತುತ ಸ್ಥಿತಿಯನ್ನು ಅಪ್‌ಲೋಡ್ ಮಾಡಲು ಬ್ಯಾಂಕುಗಳಿಗೆ ಸೌಲಭ್ಯ.
  • ಶಿಕ್ಷಣ ಸಾಲ ಮತ್ತು ಬ್ಯಾಂಕ್‌ಗಳ ಇತರ ಯೋಜನೆಗಳ ಕುರಿತು ಒಂದೇ ಸ್ಥಳದಲ್ಲಿ ಮಾಹಿತಿ.
  • ಸರ್ಕಾರದಿಂದ ದೇಶಾದ್ಯಂತ ವಿದ್ಯಾರ್ಥಿಗಳ ಮಾಹಿತಿ ಮತ್ತು ಅರ್ಜಿಗಳಿಗಾಗಿ ರಾಷ್ಟ್ರೀಯ ವಿದ್ಯಾರ್ಥಿವೇತನ ಪೋರ್ಟಲ್‌ಗೆ ಲಿಂಕ್ (Link to National Scholarship Portal for Applications) ಮಾಡಲಾಗುತ್ತಿದೆ
  • ಒಂದೇ ವೇದಿಕೆಯಲ್ಲಿ ಎಲ್ಲಾ ಬ್ಯಾಂಕ್‌ಗಳಿಂದ ಶಿಕ್ಷಣ ಸಾಲಕ್ಕೆ ಅರ್ಜಿ ಸಲ್ಲಿಸುವ ಸೌಲಭ್ಯ

ವಿದ್ಯಾ ಲಕ್ಷ್ಮಿ ಯೋಜನೆಯ ಪ್ರಯೋಜನಗಳು

  • ಈ ಯೋಜನೆಯ ಸಹಾಯದಿಂದ ವಿದ್ಯಾರ್ಥಿಗಳು ತಮ್ಮ ಶಿಕ್ಷಣವನ್ನು ಮುಂದುವರಿಸಲು ಸಾಧ್ಯವಾಗುತ್ತದೆ.
  • ಈ ಯೋಜನೆಯಡಿ ವಿದ್ಯಾರ್ಥಿಗಳು ಪೋರ್ಟಲ್ ಮೂಲಕ 13 ಬ್ಯಾಂಕ್‌ಗಳಿಂದ 22 ರೀತಿಯ ಸಾಲಗಳನ್ನು ಪಡೆಯಲು ಸಾಧ್ಯವಾಗುತ್ತದೆ.
  • ಚಿದ್ಯಾರ್ಥಿಗಳು ತಮ್ಮ ಅನುಕೂಲಕ್ಕೆ/ಅಗತ್ಯಕ್ಕೆ ಅನುಗುಣವಾಗಿ ನೀವು ಸಾಲವನ್ನು ತೆಗೆದುಕೊಳ್ಳಬಹುದು
  • ಪ್ರಧಾನ ಮಂತ್ರಿ ವಿದ್ಯಾ ಲಕ್ಷ್ಮಿ ಯೋಜನೆಯ ಸಾಲದ ಸಂಬಂಧಿತ ಮಾಹಿತಿಯೊಂದಿಗೆ, ವಿದ್ಯಾರ್ಥಿವೇತನದ ಮಾಹಿತಿಯನ್ನು ಸಹ ಬ್ಯಾಂಕ್ ಪೋರ್ಟಲ್‌ನಲ್ಲಿ ಅಪ್‌ಲೋಡ್ ಮಾಡಲಾಗುತ್ತದೆ.
  • ಸಾಲ ಪಡೆಯಲು ಏಕೀಕೃತ (Unified) ವೇದಿಕೆಯಿಂದಾಗಿ ವಿದ್ಯಾರ್ಥಿಗಳು ಶಿಕ್ಷಣ ಸಾಲಕ್ಕಾಗಿ ಅಲೆದಾಡಬೇಕಾಗಿಲ್ಲ.

ವಿದ್ಯಾ ಲಕ್ಷ್ಮಿ ಯೋಜನೆಯಡಿ ಸಾಲಕ್ಕೆ ಅರ್ಜಿ ಸಲ್ಲಿಸುವುದು ಹೇಗೆ

  • ವಿದ್ಯಾ ಲಕ್ಷ್ಮಿ ಅಡಿಯಲ್ಲಿ ಸಾಲಕ್ಕೆ ಅರ್ಜಿ ಸಲ್ಲಿಸಲು, ಒಬ್ಬರು ಪೋರ್ಟಲ್‌ಗೆ ಹೋಗಬೇಕು. ಈ ಲಿಂಕ್ ಅನ್ನು ಕ್ಲಿಕ್ ಮಾಡಿ: https://www.vidyalakshmi.co.in/Students/
  • ಈ ಕೆಳಗಿನ ಲಿಂಕ್‌ನಲ್ಲಿ ನೋಂದಾಯಿಸಿದ ನಂತರವೇ ನೀವು ಸಾಲಕ್ಕೆ ಅರ್ಜಿ ಸಲ್ಲಿಸಲು ಅವಕಾಶವನ್ನು ಪಡೆಯುತ್ತೀರಿ. https://www.vidyalakshmi.co.in/Students/signup
  • ಈ ಯೋಜನೆಯಲ್ಲಿ ನೋಂದಣಿ ಪೂರ್ಣಗೊಂಡ ನಂತರ, ನೀವು ಇಮೇಲ್ ಐಡಿ ಮತ್ತು ಪಾಸ್‌ವರ್ಡ್ ಅನ್ನು ಪಡೆಯುತ್ತೀರಿ.
  • ಇಮೇಲ್ ಐಡಿ ಮತ್ತು ಪಾಸ್‌ವರ್ಡ್ ನಮೂದಿಸಿದ ನಂತರ ಲಾಗಿನ್ ಮಾಡಲು ಸಾಧ್ಯವಾಗುತ್ತದೆ.
  • ಶಿಕ್ಷಣ ಸಾಲಕ್ಕಾಗಿ, ಸಾಮಾನ್ಯ ಶಿಕ್ಷಣ ಸಾಲದ ಫಾರ್ಮ್ ಅನ್ನು ಭರ್ತಿ ಮಾಡಿ.
  • ನಿಮ್ಮ ಅನುಕೂಲಕ್ಕೆ ಅನುಗುಣವಾಗಿ ನೀವು ವಿದ್ಯಾ ಲಕ್ಷ್ಮಿ ಯೋಜನೆಯಡಿ ಸಾಲಕ್ಕಾಗಿ ಅರ್ಜಿ ಸಲ್ಲಿಸಬೇಕು.
  • ಒಮ್ಮೆ ಸಾಲವನ್ನು ಅನುಮೋದಿಸಿದ ನಂತರ, ನೀವು ಅದರ ಮಾಹಿತಿಯನ್ನು ಈ ಪೋರ್ಟಲ್‌ನಲ್ಲಿ ಪಡೆಯುತ್ತೀರಿ.

LEAVE A REPLY

Please enter your comment!
Please enter your name here