Home ಕರಾವಳಿ ಮಂಗಳೂರು : ಮಾತನಾಡುವ ಹಕ್ಕು ಕೇವಲ ರಾಜಕಾರಣಿಗಳಿಗೆ ಮಾತ್ರಾನಾ..? ಬಿಕೆ ಹರಿಪ್ರಸಾದ್ ವಿರುದ್ಧ ವಾಗ್ದಾಳಿ ನಡೆಸಿದ...

ಮಂಗಳೂರು : ಮಾತನಾಡುವ ಹಕ್ಕು ಕೇವಲ ರಾಜಕಾರಣಿಗಳಿಗೆ ಮಾತ್ರಾನಾ..? ಬಿಕೆ ಹರಿಪ್ರಸಾದ್ ವಿರುದ್ಧ ವಾಗ್ದಾಳಿ ನಡೆಸಿದ ಪೇಜಾವರಶ್ರೀ

0

ಮಂಗಳೂರು : ಜಾತಿ ಗಣತಿ ವಿಚಾರದಲ್ಲಿ ಸ್ವಾಮೀಜಿ ಪುಡಿ ರಾಜಕಾರಣಿಗಳಂತೆ ಹೇಳಿಕೆ ನೀಡುತ್ತಿದ್ದಾರೆ ಎಂದಿದ್ದ ಬಿ.ಕೆ.ಹರಿ ಪ್ರಸಾದ್ ಹೇಳಿಕೆಗೆ ತಿರುಗೇಟು ನೀಡಿದ ಪೇಜಾವರಶ್ರೀಗಳು,ಮಾತನಾಡುವ ಹಕ್ಕು ಕೇವಲ ರಾಜಕಾರಣಿಗಳಿಗೆ ಮಾತ್ರನಾ? ಪ್ರಜೆಗಳಿಗೆ ಹಕ್ಕಿಲ್ವಾ? ರಾಜಕಾರಣಿಗಳಿಗೆ ಮಾತ್ರ ಹಕ್ಕಿದೆ ಅಂತ ಹೇಳಲಿ.ಪ್ರಜಾಪ್ರಭುತ್ವ ಇಲ್ಲ ಈಗ ರಾಜಕಾರಣಿಗಳ ರಾಜ್ಯ ಅಂತ ಹೇಳಲಿ ಎಂದು ವಾಗ್ದಾಳಿ ನಡೆಸಿದರು.


 

ಇಂದು ಮಂಗಳೂರಿನ ಕುಳಾಯಿ ಚಿತ್ರಾಪುರ ಮಠದಲ್ಲಿ ನಡೆದ ಧರ್ಮಸಭೆ ಉದ್ದೇಶಿಸಿ ಮಾತನಾಡಿದ ಶ್ರೀಗಳು, ಇಂತಹ ರಾಜಕಾರಣಿಗಳಿಗೆ ಸದ್ಬುದ್ಧಿ ಕೊಡುವಂತೆ ಪ್ರಾರ್ಥನೆ ಮಾಡಿದ್ದೇವೆ. ನಮ್ಮ ಪಂಗಡದಲ್ಲಿ ಯಾರಿಗೆಲ್ಲ ವೈಮನಸ್ಸು ಇದೆಯೋ ಅದು ದೂರವಾಗಲಿ. ಜಾತಿ ವ್ಯವಸ್ಥೆ ಅನಿಷ್ಟಗಳಿಗೆ ಮೂಲ ಎನ್ನುವವರೇ ಅದನ್ನು ಪೋಷಿಸುತ್ತಿದ್ದಾರೆ. ಒಂದೆಡೆ ನಾವು ಜಾತ್ಯಾತೀತರು ಎನ್ನುತ್ತಾರೆ, ಇನ್ನೊಂದೆಡೆ ಎಲ್ಲ ವಲಯದಲ್ಲೂ ಅದನ್ನು ಪೋಷಿಸುತ್ತಿದ್ದಾರೆ ಎಂದರು.

ಜಾತ್ಯಾತೀತ ಅಂತ ಹೇಳಿಕೊಳ್ಳುವಾಗ ಇಲ್ಲಿ ಜಾತಿ ಪಂಗಡಗಳ ಲೆಕ್ಕಾಚಾರ ಯಾಕೆ ಅನ್ನೋದು ನಮ್ಮ ಅಭಿಪ್ರಾಯ. ಹೀಗೆ ಹೇಳಿದ್ದನ್ನ ಪುಡಿ ರಾಜಕಾರಣ ಅಂತಾರೆ, ನಾವು ಹೇಳಿದ್ದು ತಪ್ಪು ಅಂತಾರೆ. ಹಾಗಾದ್ರೆ ಇದು ಪ್ರಜಾಪ್ರಭುತ್ವ ರಾಷ್ಟ್ರ ಹೌದೋ ಅಲ್ಲವೋ ನೀವೇ ಹೇಳಿ ಎಂದ ಶ್ರೀಗಳು ಮುಂದುವರಿದು, ಹೌದು ಅಂತಾದ್ರೆ ಒಬ್ಬ ಮಾಠಾಧಿಪತಿಗೆ ಅಂತಲ್ಲ, ಸಾಮಾನ್ಯ ಪ್ರಜೆಗೂ ಮಾತಾಡುವ ಹಕ್ಕಿದೆ, ತಮ್ಮ ಅಭಿಪ್ರಾಯ ಹೇಳುವ ಹಕ್ಕಿದೆ. ಹೀಗಿರುವಾಗ ಕಾವಿ ತೆಗೆದಿಟ್ಟು ಬಂದರೆ ಉತ್ತರ ಕೊಡ್ತೇನೆ ಅನ್ನೋದರ ಅರ್ಥವೇನು?

LEAVE A REPLY

Please enter your comment!
Please enter your name here