Home ಕರಾವಳಿ ಅಂತ್ಯೋದಯ & ಬಿಪಿಎಲ್​ ಪಡಿತರ ಚೀಟಿ ಪಡೆದವರಿಗೆ ರಾಜ್ಯ ಸರ್ಕಾರದಿಂದ ಖಡಕ್​ ಸೂಚನೆ

ಅಂತ್ಯೋದಯ & ಬಿಪಿಎಲ್​ ಪಡಿತರ ಚೀಟಿ ಪಡೆದವರಿಗೆ ರಾಜ್ಯ ಸರ್ಕಾರದಿಂದ ಖಡಕ್​ ಸೂಚನೆ

0

ಸರ್ಕಾರದ ಮಾನದಂಡದ ವಿರುದ್ಧವಾಗಿ ಅಂತ್ಯೋದಯ ಅನ್ನ ಯೋಜನೆ ಹಾಗೂ ಬಿಪಿಎಲ್​ (BPL) ಪಡಿತರ ಚೀಟಿ ಹೊಂದಿದ್ದರೆ ಅವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲು ಸರ್ಕಾರ ನಿರ್ಧರಿಸಿದೆ. ಸರ್ಕಾರದ ಮಾನದಂಡದ ಪ್ರಕಾರ ಸರ್ಕಾರಿ ವೇತನ, ಕಾರು, ಟ್ಯಾಕ್ಟರ್​ ಇದ್ದವರು ಅಂತ್ಯೋದಯ ಅನ್ನ ಯೋಜನೆ ಮತ್ತು ಬಿಪಿಎಲ್​ ಪಡಿತರ ಚೀಟಿ ಪಡೆಯುವಂತ್ತಿಲ್ಲ. ಒಂದು ವೇಳೆ ಸರ್ಕಾರದ ಮಾನದಂಡಗಳಿಗೆ ವಿರುದ್ಧವಾಗಿ ಅಂತ್ಯೋದಯ ಅನ್ನ ಯೋಜನೆ ಮತ್ತು ಆದ್ಯತಾ (BPL) ಪಡಿತರ ಚೀಟಿ ಹೊಂದಿದ್ದಿದ್ದರೇ, ಅವುಗಳನ್ನು ಕೂಡಲೆ ತಾಲೂಕು ಕಚೇರಿಯ ಆಹಾರ ಶಾಖೆಗೆ ಹಿಂದುರುಗಿಸುವಂತೆ ರಾಜ್ಯ ಸರ್ಕಾರ (Karnataka Government) ಆದೇಶ ಹೊರಡಿಸಿದೆ.


ಒಂದು ವೇಳೆ ವಾಪಸ್ ನೀಡದೆ ಇದ್ದರೆ ಕಾನೂನು ಕ್ರಮದ, ಜೊತೆಗೆ ದಂಡ ಸಹ ವಿಧಿಸಲಾಗುವುದು ಎಂದು ಎಚ್ಚರಿಕೆ ನೀಡಿದೆ. ಸರ್ಕಾರದಿಂದ ಈಗಾಗಲೇ ಅಂತ್ಯೋದಯ/ಬಿಪಿಎಲ್​ ಕಾರ್ಡ್ ಪರಿಷ್ಕರಣಿಗೆ ಮುಂದಾಗಿದ್ದು, ಮಾನದಂಡಗಳ ವಿರುದ್ಧವಾಗಿ ಪಡಿತರ ಚೀಟಿ ಹೊಂದಿದವರಿಗೆ ಆಯಾ ತಾಲೂಕುಗಳಲ್ಲಿ ತಹಶಿಲ್ದಾರರು ನೋಟಿಸ್ ‌ಜಾರಿ ಮಾಡಿದ್ದಾರೆ. ಸರ್ಕಾರ ಕಳೆದ ತಿಂಗಳು ಅನರ್ಹ ಪಡಿತರದಾರರ ಪಟ್ಟಿಯನ್ನು ಸಹ ಬಿಡುಗಡೆ ಮಾಡಿತ್ತು.

ಅಂತ್ಯೋದಯ/ಬಿಪಿಎಲ್​ ಕಾರ್ಡ್ ಹೊಂದಲು ಯಾರು ಅನರ್ಹರು :

  1. ಸರ್ಕಾರ ಅಥವಾ ಸರ್ಕಾರದಿಂದ ಅನುದಾನವನ್ನು ಪಡೆಯುತ್ತಿರುವ ಸಂಸ್ಥೆಗಳು ಅಥವಾ ಸರ್ಕಾರಿ ಪ್ರಾಯೋಜಿತ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು/ಮಂಡಳಿಗಳು/ನಿಗಮಗಳು/ಸ್ವಾಯತ್ತ ಸಂಸ್ಥೆಗಳಿಂದ ವೇತನ ಪಡೆಯುತ್ತಿರುವವರು.
  2. ಆದಾಯ ತೆರಿಗೆ, ಸೇವಾ ತೆರಿಗೆ, ವ್ಯಾಟ್, ವೃತ್ತಿ ತೆರಿಗೆ ಪಾವತಿಸುವವರು.
  3. ಗ್ರಾಮೀಣ ಪ್ರದೇಶದಲ್ಲಿ ಮೂರು ಹೆಕ್ಟೇರ್ ಒಣಭೂಮಿ ಅಥವಾ ತತ್ಸಮಾನ ನೀರಾವರಿ ಭೂಮಿ ಹೊಂದಿರುವ ಕುಟುಂಬಗಳು ಅಥವಾ ಗ್ರಾಮೀಣ ಪ್ರದೇಶವನ್ನು ಹೊರತುಪಡಿಸಿ, ನಗರ ಪ್ರದೇಶಗಳಲ್ಲಿ 1,000 ಚದರ ಅಡಿಗಿಂತಲೂ ಹೆಚ್ಚಿನ ವಿಸ್ತೀರ್ಣದ ಪಕ್ಕಾ ಮನೆಯನ್ನು ಸ್ವಂತವಾಗಿ ಹೊಂದಿರುವ ಕುಟುಂಬಗಳು.
  4. ಜೀವನೋಪಾಯಕ್ಕಾಗಿ ಸ್ವತಃ ಓಡಿಸುವ ಒಂದು ವಾಣಿಜ್ಯ ವಾಹನವನ್ನು (ಟ್ರ್ಯಾಕ್ಟರ್​​, ಮ್ಯಾಕ್ಸಿಕ್ಯಾಬ್, ಟ್ಯಾಕ್ಸಿ ಇತ್ಯಾದಿಗಳನ್ನು) ಹೊಂದಿದ ಕುಟುಂಬವನ್ನು ಹೊರತುಪಡಿಸಿ ನಾಲ್ಕು ಚಕ್ರದ ವಾಹನಗಳನ್ನು ಹೊಂದಿರುವ ಎಲ್ಲಾ ಕುಟುಂಬಗಳು.
  5. ಕುಟುಂಬದ ವಾರ್ಷಿಕ ಆದಾಯವು ರೂ.1.20 ಲಕ್ಷಗಳಿಗಿಂತಲೂ ಹೆಚ್ಚು ಇರುವ ಕುಟುಂಬಗಳು ಪಡಿತರ ಚೀಟಿ ಹೊಂದಲು ಅನರ್ಹ.

LEAVE A REPLY

Please enter your comment!
Please enter your name here