Home ತಾಜಾ ಸುದ್ದಿ ಬಿಗ್ ಬಾಸ್ ನಿಂದ ಚೈತ್ರ ಕುಂದಾಪುರರನ್ನು ಹೊರಗಿಸುವಂತೆ ಸಾಗರದ ವಕೀಲ ಭೋಜರಾಜ್ ಕಾನೂನು ಕ್ರಮ ಜರಗಿಸುವುದಾಗಿ...

ಬಿಗ್ ಬಾಸ್ ನಿಂದ ಚೈತ್ರ ಕುಂದಾಪುರರನ್ನು ಹೊರಗಿಸುವಂತೆ ಸಾಗರದ ವಕೀಲ ಭೋಜರಾಜ್ ಕಾನೂನು ಕ್ರಮ ಜರಗಿಸುವುದಾಗಿ ಎಚ್ಚರಿಕೆ…!

0

ಸಾಗರ: ಚೈತ್ರ ಕುಂದಾಪುರ ಅವರನ್ನು ಬಿಗ್‌ಬಾಸ್ ಕಾರ್ಯಕ್ರಮದಿಂದ ಕೈ ಬಿಡಬೇಕು ಎಂದು ಆಗ್ರಹಿಸಿ ಕಲರ್ಸ್ ವಾಹಿನಿಗೆ ವಕೀಲರೊಬ್ಬರು ನೋಟಿಸ್ ಕಳುಹಿಸಿದ್ದಾರೆ. ಸಾಗರದ ವಕೀಲ ಭೋಜರಾಜ್ ಎಂಬವರು ಕಲರ್ಸ್ ಕನ್ನಡಕ್ಕೆ ಬರೆದಿರುವ ಪತ್ರ ವೈರಲ್ ಆಗಿದೆ.


ಚೈತ್ರ ಕುಂದಾಪುರ ಅವರನ್ನು ಕೂಡಲೇ ಬಿಗ್‌ಬಾಸ್ ಮನೆಯಿಂದ ಹೊರ ಕಳುಹಿಸಬೇಕು. ಇಲ್ಲವಾದರೆ ವಾಹಿನಿ ವಿರುದ್ದ ಕಾನೂನು ಕ್ರಮ ಜರಗಿಸುವುದಾಗಿ ಹೇಳಿದ್ದಾರೆ.

ಚೈತ್ರ ಕುಂದಾಪುರ ವಿರುದ್ದ ಗಲಾಟೆ, ದೊಂಬಿ, ಜೀವ ಬೆದರಿಕೆ ಹಾಗೂ ವಂಚನೆ ಮುಂತಾದ ಪ್ರಕರಣಗಳು ದಾಖಲಾಗಿದ್ದು,ಅಪರಾಧ ಹಿನ್ನೆಲೆಯುಳ್ಳ ವ್ಯಕ್ತಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶ ಕೊಟ್ಟಿರುವ ಬಗ್ಗೆ ನೋಟಿಸ್‌ನಲ್ಲಿ ಪ್ರಶ್ನಿಸಿದ್ದಾರೆ.

ಚೈತ್ರ ಮೇಲೆ ಸಾಕಷ್ಟು ಪ್ರಕರಣಗಳಿದ್ದು, ಅವರನ್ನು ಸ್ಪರ್ಧಿಯಾಗಿ ಮುಂದುವರೆಸಿದರೆ ಸಮಾಜಕ್ಕೆ ತಪ್ಪು ಸಂದೇಶ ರವಾನೆಯಾಗುತ್ತದೆ. ಹೀಗಾಗಿ ಈ ಕೂಡಲೇ ಅವರನ್ನು ಬಿಗ್‌ಬಾಸ್ ಮನೆಯಿಂದ ಹೊರಕಳಿಸುವಂತೆ ನೋಟಿಸ್‌ನಲ್ಲಿ ಆಗ್ರಹಿಸಿದ್ದಾರೆ.

17 ಜನ ಸ್ಪರ್ಧಿಗಳ ಪೈಕಿ, ಅಪರಾಧ ಹಿನ್ನೆಲೆಯುಳ್ಳ ಚೈತ್ರ ಕುಂದಾಪುರ ಕೂಡಾ ಸಹ ಸ್ಪರ್ಧಿಯಾಗಿ ಘೋಷಣೆ ಮಾಡಿರುವುದು ಕನ್ನಡದ ಕೋಟ್ಯಾಂತರ ಬಿಗ್ ಬಾಸ್ ವೀಕ್ಷಕರಿಗೆ ಹಾಗೂ ಸಾರ್ವಜನಿಕರಿಗೆ ಆಘಾತ ಉಂಟಾಗಿರುತ್ತದೆ. ಅತ್ಯಂತ ಜನಪ್ರಿಯವಾಗಿರುವ ಬಿಗ್‌ಬಾಸ್ ಕಾರ್ಯಕ್ರಮದಲ್ಲಿ ನಟ ಸುದೀಪ್ ಅವರು ಚೈತ್ರ ಕುಂದಾಪುರಳನ್ನು “ಹಿಂದೂ fire brand” ಎಂದು ಹೊಗಳಿದ್ದಾರೆ. ಮಾತ್ರವಲ್ಲ‌, ಈಗಾಗಲೇ ಚೈತ್ರ ಕುಂದಾಪುರ ಮೇಲೆ ಸುಮಾರು 11 ಕೇಸ್ ಗಳು ದಾಖಲಾಗಿವೆ. ‘ಹಿಂದಿನ ಸೀಸನ್ ನಡೆಯುವ ಸಂದರ್ಭದಲ್ಲಿ ಜೈಲಿನಲ್ಲಿ ಇದ್ದುಕೊಂಡು ವೀಕ್ಷಣೆ ಮಾಡಿದ್ದೇನೆ’ ಎಂದು ಚೈತ್ರಾ ಹೇಳಿರುವುದು ಪ್ರೇಕ್ಷಕರಲ್ಲಿ ಮುಜುಗರವುಂಟುಮಾಡಿದೆ ಎಂದು ಎಂದು ತಿಳಿಸಿದ್ದಾರೆ.

ಈ ಹಿಂದೆ ವಂಚನೆ ಕೇಸ್‌ಗೆ ಒಳಗಾಗಿರುವ ಚೈತ್ರ ಅವರ ಹೆಸರಿನ ಮುಂದೆ ‘ಕುಂದಾಪುರ’ ಎಂಬ ಹೆಸರನ್ನು ಬಳಸಬಾರದು, ಬಳಸಿದ್ದಲ್ಲಿ, ಕುಂದಾಪುರದ ಜನತೆಗೆ ಅವಮರ್ಯಾದೆ ಆಗುತ್ತದೆ. ರಾಜ್ಯದ ಜನರು, ಕುಂದಾಪುರದ ಜನರನ್ನು ನೋಡುವ ದೃಷ್ಟಿಯೇ ಬದಲಾಗುತ್ತದೆ ಎಂಬ ವಿಚಾರವನ್ನು ಇಟ್ಟುಕೊಂಡು ಸ್ಥಳೀಯರು, ಚೈತ್ರ ಅವರ ಮುಂದಿರುವ ‘ಕುಂದಾಪುರ’ ಎಂಬ ಹೆಸರನ್ನು ತೆಗೆದು ಹಾಕುವಂತೆ ಪ್ರತಿಭಟನೆ ಮಾಡಿದ್ದರು. ಹೀಗಿದ್ದೂ ಸಹ ತಮ್ಮ ಟಿಆರ್‌ಪಿ ಗಾಗಿ ಸಮಾಜದ ಸ್ವಾಸ್ಥ್ಯವನ್ನು ಹಾಳು ಮಾಡುತ್ತಿರುವುದು, ಮೇಲ್ನೋಟಕ್ಕೆ ಕಂಡುಬರುತ್ತದೆ. ಆದ್ದರಿಂದ ಈ ನೋಟಿಸ್ ಮೂಲಕ ತಮಗೆ ತಿಳಿಯಪಡಿಸುವುದೆಂದರೆ ಬಿಗ್ ಬಾಸ್ ಸೀಸನ್ 11 ರ ಪ್ರತಿಸ್ಪರ್ಧಿಯಾದ ಸ್ವಯಂ ಘೋಷಿತ “ಹಿಂದೂ fire brand” ಎಂಬ ಹೆಸರನ್ನು ಇಟ್ಟುಕೊಂಡು, ಎಫ್‌ಐಆರ್ ಮತ್ತು ಕ್ರಿಮಿನಲ್‌ ಪ್ರಕರಣ ಹೊಂದಿರುವ, ಚೈತ್ರ ಕುಂದಾಪುರಳನ್ನು ಈ ನೋಟಿಸ್ ನ ಪ್ರತಿಯ ಇಮೇಲ್ ತಲುಪಿದ ತಕ್ಷಣವೇ ಸ್ಪರ್ಧೆಯಿಂದ ತೆಗೆದುಹಾಕಬೇಕು. ಇಲ್ಲದಿದ್ದಲ್ಲಿ ನಿಮ್ಮ ವಿರುದ್ಧ ನ್ಯಾಯಾಲಯದಲ್ಲಿ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು. ಇದರಿಂದ ಮುಂದೆ ಆಗುವ ಎಲ್ಲಾ ಆಗು ಹೋಗುಗಳಿಗೆ ತಾವೇ ಜವಾಬ್ದಾರರಾಗಿರುತ್ತೀರಿ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

LEAVE A REPLY

Please enter your comment!
Please enter your name here