Home ತಾಜಾ ಸುದ್ದಿ ‘ಹಿಂದೂ’ ಧರ್ಮ ನಮ್ಮದಲ್ಲ, ಅದು ನಮಗೆ ಬೇಕಾಗಿಲ್ಲ : ಪ್ರೊ.ಕೆ.ಎಸ್ ಭಾಗವಾನ್ ವಿವಾದಾತ್ಮಕ ಹೇಳಿಕೆ

‘ಹಿಂದೂ’ ಧರ್ಮ ನಮ್ಮದಲ್ಲ, ಅದು ನಮಗೆ ಬೇಕಾಗಿಲ್ಲ : ಪ್ರೊ.ಕೆ.ಎಸ್ ಭಾಗವಾನ್ ವಿವಾದಾತ್ಮಕ ಹೇಳಿಕೆ

0

ಮೈಸೂರು : ಮನುಸ್ಮೃತಿಯಲ್ಲಿ ಶೂದ್ರರು ಅಂದರೆ ವೇಶ್ಯೆಗೆ ಹುಟ್ಟಿದವನು ಅಂತಿದೆ. ಮನುಸ್ಮೃತಿಯಲ್ಲಿ ಹೇಳಿರುವಂತೆ ನಾವು ಶೂದ್ರರೆಂದು ಒಪ್ಪಿಕೊಳ್ಳಬೇಕಾ? ಎಂದು ಮೈಸೂರಿನ ಮಹಿಷ ದಸರಾದಲ್ಲಿ ಸಾಹಿತಿ ಪ್ರೊಫೆಸರ್ ಕೆಎಸ್ ಭಗವಾನ್ ವಿವಾದಾತ್ಮಕ ಹೇಳಿಕೆ ನೀಡಿದರು.

ಹಿಂದೂ ಧರ್ಮ ನಮ್ಮದಲ್ಲ ನಮಗೆ ಹಿಂದೂ ಧರ್ಮ ಬೇಕಾಗಿಲ್ಲ.

ಎಲ್ಲರೂ ಬುದ್ಧ ಗುರುಗಳನ್ನು ನಂಬಿ. ನಾನು ಹೇಳಿದ್ದನ್ನು ನಂಬಿ ಎಂದು ಗೌತಮ ಬುದ್ಧ ಹೇಳಲ್ಲ. ನಾನು ಹೇಳಿದ್ದು ಕೇಳದಿದ್ದರೆ ಸ್ವರ್ಗ ಸಿಗಲ್ಲವೆಂದು ಏಸು ಹೇಳುತ್ತಾರೆ. ನನ್ನ ಮಾತು ಕೇಳದಿದ್ದರೆ ಮೋಕ್ಷ ಸಿಗಲ್ಲವೆಂದು ಪ್ರವಾದಿ ಹೇಳುತ್ತಾರೆ. ನಾನು ಹೇಳಿದ್ದರೂ ಕೇಳದಿದ್ದರೆ ನರಕಕ್ಕೆ ಹೋಗುತ್ತೀರೆಂದು ಕೃಷ್ಣ ಹೇಳುತ್ತಾನೆ. ಶೂದ್ರರು ವೇಶ್ಯೆಗೆ ಹುಟ್ಟಿದವರೆಂದು ಹೇಳುವ ಧರ್ಮದಲ್ಲಿ ಇರಬಾರದು. ನಾವು ಬೌದ್ಧ ಧರ್ಮಕ್ಕೆ ಹೋಗಬೇಕು ಎಂದು ಪ್ರೊಫೆಸರ್ ಭಗವಾನ್ ತಿಳಿಸಿದರು.

ಶೂದ್ರರು ವೇಶ್ಯೆ ಮಕ್ಕಳೆಂದು ಹೇಳುವ ಧರ್ಮಕ್ಕೆ ಎಕ್ಕಡಲ್ಲಿ ಹೊಡಿಬೇಕು. ಶೂದ್ರರು ಎಂಬ ಗುಲಾಮರನ್ನು ಎಚ್ಚರಿಸಬೇಕು. ಯಾರು ಹೀನನೂ ಆಗಿದ್ದಾನೆ, ಅವನು ಹಿಂದೂ. ಯಾರೂ ಹಿಂದೂ ಆಗಬಾರದು. ಜ್ಞಾನದ ಹಸಿವು ಇಲ್ಲದ ಕಾರಣ ಹಲವರು ಗುಲಾಮರಾಗಿದ್ದಾರೆ ಎಂದು ಬೌದ್ಧ ಧರ್ಮ ಹೊಗಳುವ ಬರದಲ್ಲಿ ಹಿಂದೂ ಧರ್ಮ ನಿಂದನೆ ಮಾಡಿದ್ದಾರೆ.ಹಿಂದೂ ಅಂದರೆ ಹಿಂದಕ್ಕೆ ಹೋಗುವ ಜನ. ಹಿಂದೂ ಅಂದರೆ ಬ್ರಾಹ್ಮಣ ಧರ್ಮ ಎಂದರ್ಥ. ಹಿಂದುಗಳು ಮುಂದೆ ಬಾರದ ಜನ ಮುಂದಕ್ಕೆ ಬಿಡುವುದಿಲ್ಲ. ಗಂಡಸರನ್ನು ಮಾತ್ರ ಬ್ರಾಹ್ಮಣರು ಅಂತಾರೆ. ಹೆಂಗಸರನ್ನು ಬ್ರಾಹ್ಮಣರು ಅನ್ನಲ್ಲ ಅವರನ್ನು ಶೂದ್ರರು ಅಂತಾರೆ.

ದೇವಸ್ಥಾನ ಕಟ್ಟುವುದು ಶೂದ್ರರು ಒಳಗೆ ಇರುವವರು ಬ್ರಾಹ್ಮಣರು. ದೇವಸ್ಥಾನ ಕಟ್ಟಿದ ಶೂದ್ರರನ್ನೇ ಒಳಗಡೆ ಬಿಟ್ಟುಕೊಳ್ಳುವುದಿಲ್ಲ. ಮಾನ ಮರ್ಯಾದೆ ಇದ್ದರೆ ದೇಗುಲಕ್ಕೆ ಹೋಗುವುದನ್ನು ನಿಲ್ಲಿಸಬೇಕು. ನಾನು ದೇವಸ್ಥಾನಕ್ಕೆ ಹೋಗಿ 50 ವರ್ಷ ಆಯ್ತು. ದೇವಸ್ಥಾನಕ್ಕೆ ಹೋದರೆ ಏನು ಆಗಲ್ಲ ತಟ್ಟೆಗೆ ದುಡ್ಡು ಹಾಕ್ತಿರಾ, ಅರ್ಧ ಕೈ ಇಟ್ಟುಕೊಂಡು ಅರ್ಧ ಕೊಡ್ತಾರೆ ದೇವಸ್ಥಾನಕ್ಕೆ ಹೋಗುವುದರಿಂದ ಕಳೆದುಕೊಳ್ಳುತ್ತೇವೆ. ಶೂದ್ರರಿಗೆ ಮಾನ ಮರ್ಯಾದೆ ಇದ್ದರೆ ದೇವಸ್ಥಾನಕ್ಕೆ ಹೋಗಬಾರದು ಎಂದು ಮಹಿಷ ದಸರಾದಲ್ಲಿ ಸಾಹಿತಿ ಪ್ರೊಫೆಸರ್ ಕೆಎಸ್ ಭಗವಾನ್ ಹೇಳಿಕೆ ನೀಡಿದರು.

LEAVE A REPLY

Please enter your comment!
Please enter your name here