ಉಡುಪಿ: ಕರಾವಳಿ ಭಾಗದಲ್ಲಿ ತಮ್ಮ ಆವೇಶಭರಿತ ಭಾಷಣಗಳಿಂದ ಸದ್ದು ಮಾಡಿದವರು ಚೈತ್ರಾ ಕುಂದಾಪುರ. ಕೋಟ್ಯಂತರ ರೂಪಾಯಿ ವಂಚನೆ ಆರೋಪದಲ್ಲಿ ಹಿಂದೆ ಈಕೆ ಜೈಲು ಸೇರಿದ್ದರು. ಬಳಿಕ ಬಿಡುಗಡೆ ಆಗಿದ್ದರು. ಇದೀಗ ಬಿಗ್‌ಬಾಸ್ ಕನ್ನಡ ಸೀಸನ್ 11ರಲ್ಲಿ 3ನೇ ಅಭ್ಯರ್ಥಿಯಾಗಿ ಎಂಟ್ರಿ ಯಾಗಿದ್ದಾರೆ.
ಯಾರೀ ಚೈತ್ರಾ ಕುಂದಾಪುರ?
ಚೈತ್ರಾ ಮೂಲತಃ ಉಡುಪಿ ಜಿಲ್ಲೆಯ ಕುಂದಾಪುರ ಮೂಲದವರು.ತೆಕ್ಕಟ್ಟೆಯಲ್ಲಿ ಪಿಯುಸಿವರೆಗೆ ವ್ಯಾಸಂಗ ಮಾಡಿದ ಚೈತ್ರಾ, ಕೊಣಾಜೆಯಲ್ಲಿ ಪದವಿ ಪೂರ್ಣಗೊಳಿದ್ದಾರೆ. ಮಂಗಳೂರು ವಿಶ್ವ ವಿದ್ಯಾಲಯದಿಂದ ಪದವಿ ಪಡೆದಿದ್ದಾರೆ. ಸಮಯ ಸುದ್ದಿವಾಹಿನಿ, ಉಡುಪಿಯ ಸ್ಪಂದನ ಟಿವಿಯ ನಿರೂಪಕಿಯಾಗಿ. ಮುಕ್ತ ನ್ಯೂಸ್ ಸುದ್ದಿ ವಾಹಿನಿಯಲ್ಲೂ ಕೆಲಸ ಮಾಡಿದ್ದಾರೆ..ಸುದ್ದಿ ವಾಹಿನಿಗಳಲ್ಲಿ ಆಂಕರ್ ಆಗಿ, ಜನಪ್ರಿಯ ದಿನಪತ್ರಿಕೆಗಳಲ್ಲಿ ಕೆಲಸ ಮಾಡಿದ್ದಾರೆ.
ಉಡುಪಿಯ ಅಜ್ಜರಕಾಡಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕಿಯಾಗಿಯೂ ಚೈತ್ರಾ ಕುಂದಾಪುರ ಕೆಲಸ ಮಾಡಿದ್ದರು. ಇವರಿಗೆ ಯುವ ಮಾಧ್ಯಮ ಪ್ರಶಸ್ತಿಯೂ ಲಭಿಸಿತ್ತು.
ಕಾಲೇಜಿನಲ್ಲಿ ಓದುವಾಗಲೇ ಎಬಿವಿಪಿ ಸಂಘಟನೆಯಲ್ಲಿ ಚೈತ್ರಾ ಕುಂದಾಪುರ ಸಕ್ರಿಯರಾಗಿದ್ದರು. ಎಬಿವಿಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಮಿತಿ ಸದಸ್ಯೆಯಾಗಿದ್ದರು ಚೈತ್ರಾ ಕುಂದಾಪುರ. ಹಿಂದುತ್ವದ ವಿಚಾರಧಾರೆಗಳನ್ನು ಜನರಿಗೆ ಮುಟ್ಟುವ ಹಾಗೆ, ಕೆರಳಿಸುವ ಹಾಗೆ, ಪ್ರಚೋದನಾಕಾರಿ ಭಾಷಣ ಮಾಡುತ್ತಿದ್ದವರು
ಕರಾವಳಿಯಲ್ಲಿ ಕೇಳಿ ಬಂದ ಲವ್ ಜಿಹಾದ್ ಪ್ರಕರಣಗಳ ವಿರುದ್ಧ ಚೈತ್ರಾ ಕುಂದಾಪುರ ಹೋರಾಡಿದ್ದರು. ಚೈತ್ರಾ ಕುಂದಾಪುರ ಬರೆದ ‘ಪ್ರೇಮಪಾಶ’ ಕೃತಿ ವಿವಾದ ಸೃಷ್ಟಿಸಿತ್ತು. ಹಿಜಾಬ್ ವಿವಾದದಲ್ಲೂ ಚೈತ್ರಾ ಕುಂದಾಪುರ ಸದ್ದು ಮಾಡಿದ್ದರು. ಗೋ ಹತ್ಯೆ ವಿರುದ್ಧ ಚೈತ್ರಾ ಕುಂದಾಪುರ ದನಿಯೆತ್ತಿದ್ದರು.
2023ರ ವಿಧಾನಸಭಾ ಚುನಾವಣೆಯಲ್ಲಿ ಬೈಂದೂರು ಕ್ಷೇತ್ರದಿಂದ ಉದ್ಯಮಿ ಗೋವಿಂದ ಪೂಜಾರಿ ಕಣಕ್ಕಿಳಿಯಲು ಬಯಸಿದ್ದರು. ಟಿಕೆಟ್ ಕೊಡಿಸುತ್ತೇವೆ ಎಂದು ಹೇಳಿ ಗೋವಿಂದ ಪೂಜಾರಿಯಿಂದ ಚೈತ್ರಾ ಕುಂದಾಪುರ & ಟೀಮ್ ಕೋಟಿ ಕೋಟಿ ವಸೂಲಿ ಮಾಡಿದ್ದರು ಎಂಬ ಆರೋಪ ಕೇಳಿಬಂತು. ಅದೇ ಆರೋಪದ ಮೇಲೆ ಚೈತ್ರಾ ಕುಂದಾಪುರ ಅವರನ್ನ ಬಂಧಿಸಲಾಗಿತ್ತು. ಆನಂತರ ಜಾಮೀನಿನ ಮೇಲೆ ಚೈತ್ರಾ ಕುಂದಾಪುರ ಹೊರಬಂದರು. ‘‘ಕೇಸ್, ಕೋರ್ಟ್, ಕಾನೂನು ನನ್ನನ್ನ ಕುಗ್ಗಿಸಿಲ್ಲ’’ ಅಂತ್ಹೇಳಿ ‘ಬಿಗ್ ಬಾಸ್’ ಮನೆಯೊಳಗೆ ಕಾಲಿಟ್ಟಿದ್ದಾರೆ ಚೈತ್ರಾ ಕುಂದಾಪುರ