Home ತಾಜಾ ಸುದ್ದಿ ವಾಹನ ಸವಾರರಿಗೆ ಬಿಗ್ ರಿಲೀಫ್: ನ.20ರವರೆಗೆ ‘HSRP ನಂಬರ್‌ ಪ್ಲೇಟ್‌’ ಅಳವಡಿಕೆಗೆ ಅವಧಿ ವಿಸ್ತರಣೆ

ವಾಹನ ಸವಾರರಿಗೆ ಬಿಗ್ ರಿಲೀಫ್: ನ.20ರವರೆಗೆ ‘HSRP ನಂಬರ್‌ ಪ್ಲೇಟ್‌’ ಅಳವಡಿಕೆಗೆ ಅವಧಿ ವಿಸ್ತರಣೆ

0

ವಾಹನಗಳಿಗೆ ಹೆಚ್ ಎಸ್ ಆರ್ ಪಿ ನಂಬರ್ ಪ್ಲೇಟ್ ಅಳವಡಿಕೆಯನ್ನು ಕಡ್ಡಾಯಗೊಳಿಸಲಾಗಿತ್ತು. ಅಳವಡಿಸದೇ ಇದ್ದರೇ ದಂಡ ಕಟ್ಟೋದಕ್ಕೆ ರೆಡಿಯಾಗಿ ಎನ್ನಲಾಗಿತ್ತು. ಆದರೇ ಈಗ ವಾಹನ ಸವಾರರಿಗೆ ಬಿಗ್ ರಿಲೀಫ್ ಎನ್ನುವಂತೆ ನವೆಂಬರ್.20ರವರೆಗೆ ಹೆಚ್ ಎಸ್ ಆರ್ ಪಿ ನಂಬರ್ ಪ್ಲೇಟ್ ಅಳವಡಿಕೆಗೆ ಹೈಕೋರ್ಟ್ ಗಡುವು ವಿಸ್ತರಿಸಿದೆ.


 

ಅತಿ ಸುರಕ್ಷಿತ ನೋಂದಣಿ ಫಲಕ (High Security Registration Plates- HSRP) ಅಳವಡಿಕೆಗೆ ಕಾಲಾವಕಾಶ ನೀಡುವಂತೆ ಹೈಕೋರ್ಟ್ ನಲ್ಲಿ ಸಲ್ಲಿಸಿದ್ದಂತ ಅರ್ಜಿಯ ವಿಚಾರಣೆ ನಡೆಸಲಾಯಿತು. ಹಿರಿಯ ವಕೀಲ ದೇವದತ್ ಕಾಮತ್ ಅವರು ಹೈಕೋರ್ಟ್ ನ್ಯಾಯಪೀಠವನ್ನು ಮತ್ತಷ್ಟು ಕಾಲಾವಕಾಶ ನೀಡುವಂತೆ ಕೋರಿದ್ದರು. ಮನವಿ ಪರಿಗಣಿಸಿದಂತ ನ್ಯಾಯಾಲಯವು ವಿಚಾರಣೆ ಮುಂದೂಡಿಕೆ ಮಾಡಿದೆ.

ಈ ಹಿನ್ನಲೆಯಲ್ಲಿ ಹೆಚ್ ಎಸ್ ಆರ್ ಪಿ ನಂಬರ್ ಪ್ಲೇಟ್ ಅಳವಡಿಕೆಗೆ ನವೆಂಬರ್.20, 2024ರವರೆಗೆ ಅವಧಿ ವಿಸ್ತರಿಸಿದಂತೆ ಆಗಿದೆ. ಈ ಮೂಲಕ ವಾಹನ ಸವಾರರಿಗೆ ಸದ್ಯಕ್ಕೆ ದಂಡದ ಟೆನ್ಷನ್ ನಿಂದ ಮುಕ್ತಿ ಸಿಕ್ಕಂತೆ ಆಗಿದೆ.

LEAVE A REPLY

Please enter your comment!
Please enter your name here