Home ಕರಾವಳಿ ತುಳುನಾಡಿನ ಕಲಾವಿದರಿಗೆ ದೈವಾರಾಧನೆ ಏನು ದೈವದ ಕಲೆ ಕಾರ್ಣಿಕ ಏನು ಅನ್ನೋದನ್ನು ಇನ್ನೊಬ್ಬರಿಂದ ಕಲಿಯುವ ಅವಶ್ಯಕತೆ...

ತುಳುನಾಡಿನ ಕಲಾವಿದರಿಗೆ ದೈವಾರಾಧನೆ ಏನು ದೈವದ ಕಲೆ ಕಾರ್ಣಿಕ ಏನು ಅನ್ನೋದನ್ನು ಇನ್ನೊಬ್ಬರಿಂದ ಕಲಿಯುವ ಅವಶ್ಯಕತೆ ಇಲ್ಲ: ಕಲಾವಿದರ ಹಿತ ರಕ್ಷಣಾ ವೇದಿಕೆ

0

ಮಂಗಳೂರು: ತುಳುನಾಡಿನ ದೈವ ಸ್ವಾಮಿ ಕೊರಗಜ್ಜ ನ ಮಹಿಮೆಯನ್ನು ಜನರಿಗೆ ಎತ್ತಿ ತೋರಿಸುವ ಕರಾವಳಿಯ ಜನರು ನಿರ್ಮಿಸಿರುವ ಕನ್ನಡ ಚಲನಚಿತ್ರ “ಕಲ್ಜಿಗ” ಈಗಾಗಲೇ ಕರಾವಳಿ ಹಾಗೂ ಕರ್ನಾಟಕದಾದ್ಯಂತ ಶುಕ್ರವಾರ ಬಿಡುಗಡೆಗೊಂಡಿದ್ದು ಇದರ ಬಗ್ಗೆ ಪರ ವಿರೋಧದ ಚರ್ಚೆಗಳು ನಡೆಯುತ್ತಿದೆ. ಕೆಲವು ದೈವರಾದಕರು ಹಾಗೂ ದೈವ ಸಂರಕ್ಷಣಾ ವೇದಿಕೆಯ ಸದಸ್ಯರು ಬಾಯ್ಕಾಟ್ ಎನ್ನುವ ಧ್ವನಿ ಎತ್ತಿದ್ದು ಈಗ ಚಿತ್ರತಂಡ ಹಾಗೂ ಕಲಾವಿದರ ಪರವಾಗಿ ಕಲಾವಿದರ ಹಿತ ರಕ್ಷಣಾ ವೇದಿಕೆಯು ಧ್ವನಿ ಎತ್ತಿದೆ,ತುಳುನಾಡಿನ ಕಲಾವಿದರಿಗೆ ದೈವಾರಾಧನೆ ಏನು ದೈವದ ಕಲೆ ಕಾರ್ಣಿಕ ಏನು ಅನ್ನೋದನ್ನು ಇನ್ನೊಬ್ಬರಿಂದ ಕಲಿಯುವ ಅವಶ್ಯಕತೆ ಇಲ್ಲ.


ಕಲಾಮಾತೆ ಶಾರದೆಯನ್ನು ಪ್ರತಿ ದಿನ ಪೂಜಿಸುವ ನಮಗೆ ದೈವದೇವರನ್ನು ಹೇಗೆ ಗೌರವಿಸಬೇಕೆಂದು ನಮಗೆ ಕಲಿಸಬೇಡಿ. ತುಳುನಾಡಿನ ದೈವದೇವರ ಗುತ್ತಿಗೆ ನೀವು ಪಡೆದಿಲ್ಲ, ನಮ್ಮ ಮನೆ ದೈವವನ್ನು ಹೇಗೆ ಪೂಜೆ ಮಾಡ್ಬೇಕು ಹೇಗೆ ಗೌರವಿಸಬೇಕೆಂದು ನಿಮ್ಮಿಂದ ಕಲಿಯುವ ಅಗತ್ಯ ಕಲಾವಿದರಿಗಿಲ್ಲ.ದೈವದ ಅಪಮಾನ ಮಾಡಿದವರಿಗೆ ಶಿಕ್ಷೆ ದೈವಗಳೇ ಕೊಡಲಿ ನಮಗೆ ಸೋ ಕಾಲ್ಡ್ ಸೋಷಿಯಲ್ ಮೀಡಿಯ ಹೋರಾಗಾರರ ಸರ್ಟಿಫಿಕೇಟ್ ನಮಗೆ ಅಗತ್ಯ ಇಲ್ಲ #istandwithkaljiga #istandwithartists ಎಂದು ಕಲಾವಿದರ ಹಿತ ರಕ್ಷಣಾ ವೇದಿಕೆಯು ತಮ್ಮ ನಿಲುವನ್ನು ಪ್ರಕಟಿಸಿದ್ದಾರೆ.

LEAVE A REPLY

Please enter your comment!
Please enter your name here