ಸುಳ್ಯ: ತಾಲೂಕಿನ ಆಲೇಟ್ಟಿ ಗ್ರಾಮದ ಬಿಸಿಲು ಮಲೆ, ಚಳ್ಳಂಗಾರು ಪರಿಸರದಲ್ಲಿ ಹಲವು ದಿನಗಳಿಂದ ನಿರಂತರ ಆನೆ ದಾಳಿಯಿಂದ ಅಪಾರ ಪ್ರಮಾಣದಲ್ಲಿ ಕೃಷಿ ನಾಶವಾಗಿದ್ದು ಈ ಪ್ರದೇಶಕ್ಕೆ ಇಂದು ಸುಬ್ರಹ್ಮಣ್ಯ ಉಪವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪ್ರವೀಣ್ ಶೆಟ್ಟಿ ಅವರು ಇಂದು ಭೇಟಿ ನೀಡಿದ್ದರು.
ಈಗಾಗಲೇ ಆಗಿರುವ ಕೃಷಿ ನಾಶಕ್ಕೆ ಅರ್ಜಿಯನ್ನು ಸಲ್ಲಿಸಲು ಮಾಹಿತಿಯನ್ನು ನೀಡಿದರು. ಹಾಗೂ ಮುಂದಿನ ದಿನಗಳಲ್ಲಿ ಶಾಶ್ವತವಾಗಿ ಪರಿಹಾರ ಕಂಡುಕೊಳ್ಳಲು ಸೋಲಾರ್ ಬೇಲಿ ಅಳವಡಿಸುವ ಮಾಹಿತಿಯನ್ನು ನೀಡಿದರು. ತಮ್ಮ ಇಲಾಖೆಯ ವತಿಯಿಂದ ಸಿಗುವ ಎಲ್ಲಾ ಪರಿಹಾರ ಸೌಲಭ್ಯ ಒದಗಿಸಿ ಕೊಡಲಾಗುವುದು ಎಂದು ಹೇಳಿದರು. ಕೃಷಿ ದಾಳಿಗೆ ಒಳಗಾದ ರಾಮಮೋಹನ್ ಭಟ್, ಕುಮಾರ ಸ್ವಾಮಿ ಭಟ್, ರಾಮ ನಾರಾಯಣ ಭಟ್, ರಾಮಯ್ಯ ಗೌಡ ಚಳ್ಳಂಗಾರು ಇವರುಗಳ ತೋಟಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದರು,
ಈ ಸಂದರ್ಭದಲ್ಲಿ ಆಲೆಟ್ಟಿ ಗ್ರಾಮದ ಉಪ ವಲಯ ಅರಣ್ಯ ಅಧಿಕಾರಿ ವೆಂಕಟೇಶ . ಕ್ರಿಷಿಕರಾದ ರಾಮಮೋಹನ್ ಭಟ್, ಕುಮಾರಸ್ವಾಮಿ ಭಟ್ ಸ್ಥಳದಲ್ಲಿ ಉಪಸ್ಥಿತರಿದ್ದರು.