ಮಂಗಳೂರು: ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿರುವ ಅಕ್ರಮ ಕಟ್ಟಡಗಳ ಪತ್ತೆಗೆ ಹೊಸ ಆ್ಯಪ್ ರುಚಿಸಲಾಗಿದ್ದು, ಈಗಾಗಲೇ ಕಾರ್ಯಾರಂಭಗೊಂಡಿದೆ. ಮಂಗಳೂರು ಮನಪಾ ವ್ಯಾಪ್ತಿಯಲ್ಲಿರುವ ಕಟ್ಟಡ ನಿರ್ಮಾಣದ ವೇಳೆ ಅಕ್ರಮಗ ಳನ್ನು ಪತ್ತೆ ಹಚ್ಚಿ ಸರಿಪಡಿಸುವ ಉದ್ದೇಶದಿಂದ ಎಂಸಿಸಿ ಬಿಲ್ಡಿಂಗ್ ಲೈಸನ್ಸ್ ಮ್ಯಾನೇಜ್ ಮೆಂಟ್ ಸಿಸ್ಟಮ್’ ಎಂಬ ಆ್ಯಪ್ ಅಭಿವೃದ್ಧಿಪಡಿಸ ಲಾಗಿದೆ. ಈಗಾಗಲೆ ಮೇಯರ್ ಸುಧೀರ್ ಶೆಟ್ಟಿ ಇದನ್ನು ಅನಾದರಣಗೊಳಿಸಿದ್ದು, ನೂತನ ವ್ಯವಸ್ಥೆ 21ರಿಂದ ಜಾರಿಗೆ ಬಂದಿದೆ. ಕಟ್ಟಡ ಕಾಮಗಾರಿಯ ಮೊದಲನೇ ಹಂತದಿಂದ ಅಂದರೆ ಎಕ್ಷಾವೇಶನ್, ಪ್ಲೀಂತ್ ಸ್ಟ್ರಾಬ್, ಕಂಪ್ಲಿಶನ್ ಹೀಗೆ ಪ್ರತಿಯೊಂದು ಹಂತಗಳಲ್ಲೂ ಪಾಲಿಕೆ ಇಂಜಿನಿಯರ್ ಸ್ಥಳಕ್ಕೆ ತೆರಳಿ ಪರಿಶೀಲನೆ ಮಾಡುತ್ತಿದ್ದಾರೆ. ಅದರ ವರದಿಯ ಆಧಾರದಲ್ಲಿ ಹಿರಿಯ ಅಧಿಕಾರಿಗಳು ಪರಿಶೀಲನೆ ನಡೆಸಿ ಪ್ರದೇಶ ಅನುಮತಿ ಪತ್ರ ನೀಡಲಿದ್ದಾರೆ. ಈವರೆಗೆ ನಿಯಮ ಉಲ್ಲಂಘಿಸಿ ನಿರ್ಮಿಸಲಾದ ಗೃಹ ಮತ್ತು ವಾಣಿಜ್ಯ ಕಟ್ಟಡಗಳ ಅಂದಾಜು 12 ಸಾವಿರಕ್ಕೂ ಅಧಿಕ ಪ್ರಕರಣವನ್ನು ಗುರುತಿಸಲಾಗಿದೆ. ಒಂದು ಅಪಾರ್ಟ್‌ಮೆಂಟನ್ನು ಸೆಟ್ ಬ್ಯಾಕ್ ಇಲ್ಲದೆ ನಿರ್ಮಿಸಿದ್ದರೆ ಅದರಲ್ಲಿರುವ ಯಾವುದೇ ಫ್ಯಾಟ್ ಗಳಿಗೂ ಪ್ರದೇಶ ಪ್ರಮಾಣಪತ್ರ (ಕಂಪ್ಲಿಷನ್ ಸರ್ಟಿಫಿಕೆಟ್) ನೀಡಲಾವುದಿಲ್ಲ. ಫ್ಲ್ಯಾಟ್ ಗೆ ಪರಿಶೀಲನೆ ವೇಳೆ ಸರಿ ಇದೆ ಎಂದು ಪ್ರಮಾಣೀಕರಿಸಿ, ಪ್ರವೇಶ ಪತ್ರ ನೀಡಿದರೆ ಅಕ್ರಮ ಎನ್ನಲಾಗುವುದಿಲ್ಲ. ಪ್ರವೇಶ ಪತ್ರ ಕೊಡದಿದ್ದರೆ ನಿಯಮ ಉಲ್ಲಂಘನೆ ಎಂದು ಪರಿಗಣಿಸಲಾಗುತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಕೆಲವು ಕಡೆ ಪ್ಲಾನ್ ನಲ್ಲಿ ‘ಪಾರ್ಕಿಂಗ್ ಸ್ಥಳ’ ಎಂದು ಕಾದಿರಿಸಿದ್ದರೂ ಆ ಜಾಗವನ್ನು ಇತರ ಉದ್ದೇಶಕ್ಕೆ ಬಳಕೆ ಮಾಡಿ `ದರೆ ಅದು ನಿಯಮ ಉಲ್ಲಂಘನೆ ಯಾಗಲಿದೆ. ಅದನ್ನು ಸರಿಪ ಪ್ರಮಾಣ ಪತ್ರ ಕೊಡುವುದಿಲ್ಲ. ಕೆಲವೆಡೆ ಸರಿಪಡಿಸಲು ಸಾಧ್ಯವಾದರೆ, ಇನ್ನು ಕೆಲವೆಡೆ ಕಟ್ಟಡ ಭಾಗಶಃ ನಿರ್ಮಾಣಗೊಂಡ ಬಳಿಕ ಸರಿಪಡಿಸಲು ಸಾಧ್ಯವಾಗುವುದಿಲ್ಲ. ಪ್ಲಾನ್ ನಿಯಮ ಮೀರಿ ಹೆಚ್ಚುವರಿ ಬಾಲ್ಕನಿ ಕಟ್ಟಿದ್ದರೆ ತೆರವು ಮಾಡಬಹುದು ಎಂದು ಅಧಿಕಾರಿಗಳು ಅಭಿಪ್ರಾಯ ಪಡುತ್ತಾರೆ. ನಗರದ ಸ್ಟೇಟ್ ಬ್ಯಾಂಕ್, ಕೆ.ಎಸ್.ರಾವ್ ರಸ್ತೆ, ಬಲ್ಮಠ ಕಂಕನಾಡಿ, ಪಳ್ನೀರ್ ಮತ್ತಿತರ – ಹಲವೆಡೆ ವಾಣಿಜ್ಯ ಕಟ್ಟಡಗಳಲ್ಲಿ ಪಾರ್ಕಿಂಗ್ ಕಾದಿರಿಸಿದ ಜಾಗವನ್ನು ವಾಣಿಜ್ಯ ಉದ್ದೇಶಕ್ಕೆ ಬಳಸಿ ಕೊಂಡು ನಿಯಮ ಉಲ್ಲಂಘನೆ ಮಾಡಲಾಗಿದೆ. ಎಂ.ಜಿ.ರೋಡ್, ಬಂಟ್ಸ್ ಹಾಸ್ಟೆಲ್ ಬಳಿ ಬಹು ಮಹಡಿ ವಾಣಿಜ್ಯ ಸಂಕೀರ್ಣಗಳನ್ನು ನಿಯಮ ಮೀರಿ ಕಟ್ಟಿದ ಹಿನ್ನೆಲೆಯಲ್ಲಿ ನೋಟಿಸ್ ನೀಡಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮನೆ, ವಸತಿ ಸಮುಚ್ಚಯಗಳ ಟೆರೇಸ್ ನಲ್ಲಿ ಶೀಟ್ ಹಾಕಲು ಅವಕಾಶವಿದೆ. ಆದರೆ ವಾಣಿಜ್ಯ ಸಂಕೀರ್ಣಗಳ ಮೇಲೆ ಶೀಟ್ ಹಾಕಲು ಅವಕಾಶವಿಲ್ಲ. ದಾಣಿಜ್ಯ ಕಟ್ಟಡದವರು ಮೇಲೆ ಶೀಟ್ ಹಾಕಿ, ಕೊಠಡಿ ನಿರ್ಮಿಸಿ ಬಾಡಿಗೆಗೆ ನೀಡಿ, ನಿಯಮ ಉಲ್ಲಂಘಿಸಲಾಗುತ್ತಿದೆ. ಕೆಲವು ನಿಯಮ ಉಲ್ಲಂಘನೆ ಪ್ರಕರಣಗಳು ಕೋರ್ಟ್ ವಿಚಾರಣೆಯಲ್ಲಿದೆ. ಹೆಚ್ಚಿ ನವರು ದುಪ್ಪಟ್ಟು ತೆರಿಗೆ ಪಾವತಿಸುತ್ತಿದ್ದಾರೆ. ಅನೇಕ ಮಂದಿ ಬಿಲ್ಡರ್, ಇಂಜಿನಿಯರ್, ಅಧಿಕಾರಿಗಳು ಮಾಡಿದ ತಪ್ಪಿಗಾಗಿ ದುಬಾರಿ ತೆರಿಗೆ ಕಟ್ಟುವ ಪರಿಸ್ಥಿತಿ ಬಂದಿದೆ ಎನ್ನಲಾಗುತ್ತಿದೆ.