Home ಕರಾವಳಿ ಮನೆ ಕೆಲಸಕ್ಕೆ ಬಂದ ಇಬ್ಬರು ಯುವತಿಯರಿಂದ ಕಳ್ಳತನ..!

ಮನೆ ಕೆಲಸಕ್ಕೆ ಬಂದ ಇಬ್ಬರು ಯುವತಿಯರಿಂದ ಕಳ್ಳತನ..!

0

ಕಾಸರಗೋಡು: ಮನೆಗೆ ಕೆಲಸಕ್ಕೆ ಬಂದ ಸಂದರ್ಭದಲ್ಲಿ ಚಿನ್ನಾಭರಣ , ಐ ಫೋನ್ ಹಾಗೂ ಸ್ಮಾರ್ಟ್ ವಾಚ್ ಗಳನ್ನು ಕಳವು ಗೈದ ಇಬ್ಬರು ಯುವತಿಯರನ್ನು ಮನೆಯವರು ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಕುಂಬಳೆ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಬಂಧಿತ ಆರೋಪಿಗಳನ್ನು ಕಯ್ಯಾರಿನಲ್ಲಿ ವಾಸವಾ ಗಿರುವ ಪತ್ತನಂತ್ತಿಟ್ಟ ಮೂಲದ ಬ್ಲೆಸಿ (23) ಮತ್ತು ಜಿನ್ಸಿ (22) ಎಂದು ಗುರುತಿಸಲಾಗದೆ. ಬಿ .ಸಿ ರೋಡ್ ನ ಮನೆಯಿಂದ ಐ ಫೋನ್, ಮೂರು ಮುಕ್ಕಾಲು ಪವನ್ ಚಿನ್ನಾಭರಣ,ಸ್ಮಾರ್ಟ್ ವಾಚ್ ನ್ನು ಇವರು ಕಳವು ಮಾಡಿದ್ದರು. ಕಯ್ಯಾರಿನಲ್ಲಿ ವಾಸ್ತವ್ಯ ಹೂಡಿ ಮನೆ ಕೆಲಸಕ್ಕೆ ತೆರಳುತ್ತಿದ್ದರು. ಒಂದು ತಿಂಗಳ ಹಿಂದೆ ಕುಬಣೂರಿನ ಸೈನುದ್ದೀನ್ ರವರ ಮನೆಗೆ ಕೆಲಸಕ್ಕೆ ತೆರಳಿದ್ದ ಸಂದರ್ಭದಲ್ಲಿ ಐ ಫೋನ್ ಕಳವು ಗೀಡಾಗಿತ್ತು. ಆದರೆ ಮನೆಯವರು ಫೋನ್ ಎಲ್ಲಿಯಾದರೂ ಬಿದ್ದು ಹೋಗಿರಬಹುದು ಎಂದು ಸಂಶಯಿಸಿದ್ದರು. ಆಗಸ್ಟ್ 24 ಮತ್ತು 25 ರಂದು ಮತ್ತೆ ಈ ಯುವತಿಯರು ಮನೆ ಕೆಲಸಕ್ಕೆ ಬಂದಿದ್ದರು. ಅಂದು ಕೋಣೆಯಲ್ಲಿದ್ದ ಬ್ಯಾಗ್ ನಿಂದ ಚಿನ್ನಾಭರಣ ಮತ್ತು ಮೊಬೈಲ್ ಫೋನ್ ಮತ್ತು ಸ್ಮಾರ್ಟ್ ವಾಚ್ ಕಳವು ಗೀಡಾಗಿತ್ತು. ಕೆಲಸಗಾರ್ತಿಯರು ಕೆಲಸ ಬಿಟ್ಟು ತೆರಳಿದ ಬಳಿಕ ಕೃತ್ಯ ಗಮನಕ್ಕೆ ಬಂದಿತ್ತು. ಕಳವು ಬಗ್ಗೆ ಸೈನುದ್ಧಿ ನ್ ಪೊಲೀಸರಿಗೆ ದೂರು ನೀಡಿದ್ದರು. ಕೃತ್ಯ ನಡೆಸಿದವರು ಈ ಯುವತಿಯರು ಎಂಬ ಬಗ್ಗೆ ಸುಳಿವು ಲಭಿಸಿದ ಹಿನ್ನಲೆಯಲ್ಲಿ ಇಬ್ಬರನ್ನು ಮತ್ತೆ ಮನೆ ಕೆಲಸಕ್ಕೆಂದು ಕರೆಸಿದ ಮನೆ ಮಾಲಕ ವಿಚಾರಿಸಿದಾಗ ಕಳವು ನಡೆಸಿದ್ದಾಗಿ ತಪ್ಪೊಪ್ಪಿ ಕೊಂಡಿದ್ದಾರೆ. ಕಳವಿಗೀಡಾದ ಮೊಬೈಲ್ ಫೋನ್‌ಗಳನ್ನು ವಶ ಪಡಿಸಿಕೊಳ್ಳಲಾಗಿದೆ. ಬಳಿಕ ಇಬ್ಬರನ್ನು ಕುಂಬಳೆ ಠಾಣಾ ಪೊಲೀಸರಿಗೆ ಒಪ್ಪಿಸಿದ್ದಾರೆ.

LEAVE A REPLY

Please enter your comment!
Please enter your name here