Home ಕರಾವಳಿ ಮಂಗಳೂರು: ನಗರದ ಯೆಯ್ಯಾಡಿ ರಸ್ತೆಯಲ್ಲಿ ಬೈಕ್ ಸ್ಕಿಡ್…! ಇಬ್ಬರು ಯುವಕರು ಮೃತ್ಯು!

ಮಂಗಳೂರು: ನಗರದ ಯೆಯ್ಯಾಡಿ ರಸ್ತೆಯಲ್ಲಿ ಬೈಕ್ ಸ್ಕಿಡ್…! ಇಬ್ಬರು ಯುವಕರು ಮೃತ್ಯು!

0

ಮಂಗಳೂರು ನಗರದ ಯೆಯ್ಯಾಡಿ ಏರ್ಪೋರ್ಟ್ ರೋಡಲ್ಲಿ ತಡ ರಾತ್ರಿ  ಬೈಕೊಂದು  ಸ್ಕಿಡ್ ಆಗಿ ಇಬ್ಬರು ಸವಾರರೂ ಸಾವನ್ನಪ್ಪಿದ ದಾರುಣ ಘಟನೆ ನಡೆದಿದೆ.

ಗುರುವಾರ ತಡರಾತ್ರಿ ಯೆಯ್ಯಾಡಿ ಸಮೀಪದ ಹರಿಪದವು ಎಂಬಲ್ಲಿ ಈ ಅವಘಡ ಸಂಭವಿಸಿದ್ದು ಕೋಡಿಕಲ್ ನಿವಾಸಿ ಕಾಶೀನಾಥ್(17) ಮತ್ತು ಉಪ್ಪಿನಂಗಡಿಯ ಚೇತನ್(24) ಮೃತ ದುರ್ದೈವಿಗಳಾಗಿದ್ದಾರೆ.ಇವರಿಬ್ಬರಿದ್ದ ಬೈಕ್ ಲಾರಿಯೊಂದಕ್ಕೆ ಢಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋದಾಗ ಚಾಲಕನ ನಿಯಂತ್ರಣ ತಪ್ಪಿ ಬೈಕ್  ಉರುಳಿಬಿದ್ದಿದೆ. ಇದರಿಂದ ರಸ್ತೆಗೆ ಎಸೆಯಲ್ಪಟ್ಟ ಇಬ್ಬರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಸಂಚಾರಿ ಪೊಲೀಸರು ಪ್ರಕರಣ ದಾಖಲು ಮಾಡಿ ತನಿಖೆ ನಡೆಸುತ್ತಿದ್ದಾರೆ.

LEAVE A REPLY

Please enter your comment!
Please enter your name here