Home ತಾಜಾ ಸುದ್ದಿ ಕೊಡಗು ವಿಶ್ವವಿದ್ಯಾಲಯದಲ್ಲಿ 2024-25ನೇ ಶೈಕ್ಷಣಿಕ ಸಾಲಿನ ಸ್ನಾತಕೋತ್ತರ ಪದವಿ ಕೋರ್ಸ್‌‌ಗಳಿಗೆ ಪ್ರವೇಶಾತಿ ಪ್ರಾರಂಭ

ಕೊಡಗು ವಿಶ್ವವಿದ್ಯಾಲಯದಲ್ಲಿ 2024-25ನೇ ಶೈಕ್ಷಣಿಕ ಸಾಲಿನ ಸ್ನಾತಕೋತ್ತರ ಪದವಿ ಕೋರ್ಸ್‌‌ಗಳಿಗೆ ಪ್ರವೇಶಾತಿ ಪ್ರಾರಂಭ

0

ಕೊಡಗು: ಕೌಶಲ್ಯಾಧಾರಿತ ಮತ್ತು ಗುಣಮಟ್ಟದ ಶಿಕ್ಷಣವನ್ನು ನೀಡುವ ಮೂಲಕ ಉತ್ತಮ ಮಾದರಿ ವಿಶ್ವವಿದ್ಯಾಲಯವನ್ನಾಗಿ ರೂಪಿಸುವ ನಿಟ್ಟಿನಲ್ಲಿ 2023-24ನೇ ಸಾಲಿನಿಂದ ಕೊಡಗು ವಿಶ್ವವಿದ್ಯಾಲಯವು ತನ್ನೆಲ್ಲಾ ಶೈಕ್ಷಣಿಕ ಕಾರ್ಯಚಟುವಟಿಕೆಗಳನ್ನು ವಿದ್ಯುನ್ಮಾನ ಮತ್ತು ವಿದ್ಯುನ್ಮಾನೇತರ ಮಾಧ್ಯಮಗಳ ನಿರಂತರ ಪ್ರೋತ್ಸಾಹ ಮತ್ತು ಸಹಕಾರದೊಂದಿಗೆ ಯಶಸ್ವಿಯಾಗಿ ಪೂರೈಸಿದೆ.

ಕೊಡಗು ವಿಶ್ವವಿದ್ಯಾಲಯ ಜ್ಞಾನ ಕಾವೇರಿ ಆವರಣ ಮತ್ತು ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜು, ಮಡಿಕೇರಿ ಇಲ್ಲಿ 2024-25 ಶೈಕ್ಷಣಿಕ ಸಾಲಿನ ಸ್ನಾತ್ತಕೋತ್ತರ/ಡಿಪ್ಲೊಮಾ/ಸರ್ಟಿಫಿಕೆಟ್ ಕಾರ್ಯಕ್ರಮಗಳಿಗೆ ಪ್ರವೇಶಾತಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಪ್ರವೇಶಾತಿ ಪ್ರಾರಂಭ ದಿನಾಂಕ: 23.08.2024, ದಂಡಶುಲ್ಕ ರಹಿತ ಕೊನೆಯ ದಿನಾಂಕ:10.09.2024, ಪ್ರವೇಶಾತಿ ದಂಡ ಶುಲ್ಕ ಸಹಿತ ಕೊನೆಯ ದಿನಾಂಕ:15.09.2024

ಜ್ಞಾನಕಾವೇರಿ ಕ್ಯಾಂಪಸ್‌ನಲ್ಲಿ ನೀಡಲಾಗುವ ಕೋರ್ಸ್‌ಗಳು:

1. ಎಂ.ಎಸ್ಸಿ: ಜೀವರಸಾಯನಶಾಸ್ತ್ರ, ಸೂಕ್ಷ್ಮಾಣು ಜೀವವಿಜ್ಞಾನ, ಯೋಗ ವಿಜ್ಞಾನ, ರಸಾಯನಶಾಸ್ತ್ರ, ಗಣಕ ಯಂತ್ರ ವಿಜ್ಞಾನ, ಸಸ್ಯಶಾಸ್ತ್ರ ಮತ್ತು ಪರಿಸರ ವಿಜ್ಞಾನ

2. ಎಂಕಾಂ

3. ಎಂ.ಎ.: ಕನ್ನಡ, ಕೊಡವ, ರಾಜ್ಯಶಾಸ್ತ್ರ, ಇತಿಹಾಸ, ಪತ್ರಿಕೋದ್ಯಮ ಮತ್ತು ಸಮೂಹ ಮಾಧ್ಯಮ

4. ಎಂಎಸ್‌ಡಬ್ಲ್ಯೂ ಹಾಗೂ

5. ಪಿಜಿ ಡಿಪ್ಲೊಮಾ ಮತ್ತು ಸರ್ಟಿಫಿಕೇಟ್ ಕೋರ್ಸ್: ಯೋಗ ವಿಜ್ಞಾನ ಮತ್ತು ಕೊಡವ ಅಧ್ಯಯನ

 

ಎಫ್‌ಎಂಕೆಎಂಸಿ ಮಡಿಕೇರಿಯಲ್ಲಿ ನೀಡಲಾಗುವ ಕೋರ್ಸ್‌ಗಳು:

1. ಎಂಎಸ್ಸಿ: ಭೌತಶಾಸ್ತ್ರ

2. ಎಂ.ಕಾA

3. ಎಂಬಿಎ (TTM)

4. ಎಂ.ಎ.: ಕೊಡವ, ಅರ್ಥಶಾಸ್ತ್ರ ಹಾಗೂ ಇಂಗ್ಲೀಷ್

5. ಪಿಜಿ ಡಿಪ್ಲೊಮಾ ಮತ್ತು ಸರ್ಟಿಫಿಕೇಟ್ ಕೋರ್ಸ್: ಯೋಗ ವಿಜ್ಞಾನ ಮತ್ತು ಕೊಡವ ಅಧ್ಯಯನ

ಕೊಡಗು ವಿಶ್ವವಿದ್ಯಾಲಯದಲ್ಲಿ ಉನ್ನತ ಶಿಕ್ಷಣಕ್ಕೆ ಸೇರ್ಪಡೆಯಾಗುವ ವಿದ್ಯಾರ್ಥಿಗಳಿಗೆ ಹಾಗೂ ವಿದ್ಯಾರ್ಥಿನಿಯರಿಗೆ ಹಾಸ್ಟೆಲ್ ಸೌಲಭ್ಯ, ಉತ್ತಮ ಗ್ರಂಥಾಲಯ, ವೈಫೈ ಮತ್ತು ಇಂಟರ್ನೆಟ್, ಶುದ್ಧ ಕುಡಿಯುವ ನೀರು, ಸಿಸಿಟಿವಿ ಮತ್ತು 24/7 ಭದ್ರತೆ, ಕೌಶಲ್ಯ ಅಭಿವೃದ್ಧಿ ಕೋಶ, ತರಬೇತಿ ಮತ್ತು ಉದ್ಯೋಗ ಕೋಶ, ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳು ಮೊದಲಾದ ಸೌಲಭ್ಯಗಳು, ಸಂಶೋಧನಾ ಪ್ರಯೋಗಾಲಯಗಳು, ಮತ್ತು ಪರಿಣಿತ ಅಧ್ಯಾಪಕರನ್ನು ಹೊಂದಿದೆ.

ನಮ್ಮ ಕೊಡಗು ವಿಶ್ವವಿದ್ಯಾಲಯದಲ್ಲಿ ಪ್ರವೇಶಾತಿ ಪಡೆದುಕೊಂಡ ವಿದ್ಯಾರ್ಥಿಗಳಿಗೆ ಉಜ್ವಲ ಭವಿಷ್ಯವನ್ನು ರೂಪಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮಕೈಗೊಂಡು ಹೆಚ್ಚಿನ ಪ್ರೋತ್ಸಾಹ ನೀಡುವ ಉದ್ದೇಶವನ್ನು ಒಳಗೊಂಡಿದೆ. ಹಾಗಾಗಿ ಕೊಡಗು ಹಾಗೂ ಸುತ್ತುಮುತ್ತಲಿನ ಜಿಲ್ಲೆಗಳ ಸಾರ್ವಜನಿಕರು ಮತ್ತು ಪೋಷಕರು ತಮ್ಮ ಮಕ್ಕಳನ್ನು ವಿಶ್ವವಿದ್ಯಾಲಯದ ಎಲ್ಲಾ ಸಂಯೋಜಿತ ಪದವಿ ಮತ್ತು ಘಟಕ ಕಾಲೇಜುಗಳಲ್ಲಿ ಪ್ರಸ್ತುತ ಇರುವಂತಹ ಎಲ್ಲಾ ಪದವಿ ಕೋರ್ಸ್‌ಗಳಿಗೆ ಪ್ರವೇಶಾತಿ ಪಡೆದುಕೊಳ್ಳಲು ತಿಳಿಸುವಂತೆ ಕೋರಲಾಗಿದೆ.

ಹೆಚ್ಚಿನ ಮಾಹಿತಿಗಾಗಿ:

ಜ್ಞಾನ ಕಾವೇರಿ ಕ್ಯಾಂಪಸ್, ಚಿಕ್ಕ ಅಳುವಾರ, ಕುಶಾಲನಗರ ತಾಲ್ಲೂಕು, ಕೊಡಗು ಜಿಲ್ಲೆ, ಪಿನ್‌ಕೋಡ್-571232

ಕೊಡಗು ವಿಶ್ವವಿದ್ಯಾನಿಲಯ: 8861774778 | FMKMC ಮಡಿಕೇರಿ: 8088272689

ವೆಬ್‌ಸೈಟ್: kuk.karnataka.gov.in ಇಮೇಲ್: kodaguuniversityadmission@gmail.com

LEAVE A REPLY

Please enter your comment!
Please enter your name here