ಪುತ್ತೂರು: ಪುತ್ತೂರಿನ ಬಿಜೆಪಿ ಮುಖಂಡ ಮತ್ತು ಮಹಿಳೆ ನಡುವಿನ ದೂರವಾಣಿ ಸಂಭಾಷಣೆಯ ಆಡಿಯೋ ವೈರಲ್ಗೆ ಸಂಬಂಧಿಸಿದಂತೆ ಬೆದರಿಕೆ ಕರೆ ಬರುತ್ತಿರುವುದಾಗಿ ಆರೋಪಿಸಿ ಮಹಿಳೆಯೋರ್ವರು ದೂರು ನೀಡಲು ಆ. 29ರಂದು ರಾತ್ರಿ ಪುತ್ತೂರು ನಗರ ಪೊಲೀಸ್ ಠಾಣೆಗೆ ಆಗಮಿಸಿದ್ದಾರೆ.
ಆಡಿಯೋ ವೈರಲ್ ಬಳಿಕ ಮಹಿಳೆಗೆ ಹಲವಾರು ಬೆದರಿಕೆ ಕರೆಗಳು ಬಂದಿದ್ದು, ಈ ನಿಟ್ಟಿನಲ್ಲಿ ಪುತ್ತೂರು ನಗರ ಪೊಲೀಸ್ ಠಾಣೆಗೆ ಬಂದು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ತಡರಾತ್ರಿ ಠಾಣೆಗೆ ಬಂದ ಮಹಿಳೆಯನ್ನು ಬಳಿಕ ಆಟೋ ರಿಕ್ಷಾದಲ್ಲಿ ತೆರಳುವಂತೆ ಸೂಚಿಸಿದ ಪೊಲೀಸರು ಹಿಂದಿನಿಂದ ಪೊಲೀಸ್ ಜೀಪಿನಲ್ಲಿ ಮನೆಯ ತನಕ ಭದ್ರತೆ ನೀಡಿದರು ಎಂದು ತಿಳಿದು ಬಂದಿದೆ.