Home ತಾಜಾ ಸುದ್ದಿ ಕರ್ನಾಟಕದಲ್ಲಿ ಡಿಜಿಟಲ್ ಮೀಡಿಯಾಗಳಿಗೂ ಸಿಗುತ್ತೆ ಸರ್ಕಾರಿ ಜಾಹೀರಾತು..!

ಕರ್ನಾಟಕದಲ್ಲಿ ಡಿಜಿಟಲ್ ಮೀಡಿಯಾಗಳಿಗೂ ಸಿಗುತ್ತೆ ಸರ್ಕಾರಿ ಜಾಹೀರಾತು..!

0

 ರಾಜ್ಯದಲ್ಲಿ ಲಕ್ಷಾಂತರ ಮಂದಿ ಡಿಜಿಟಲ್ ಮೀಡಿಯಾ ವೇದಿಕೆಗಳೊಂದಿಗೆ ಸುದ್ದಿಯನ್ನು ಸಾರ್ವಜನಿಕರಿಗೆ ತಲುಪಿಸುವಂತ ಕೆಲಸ ಮಾಡುತ್ತಿದ್ದಾರೆ. ಈ ಮಾಲೀಕರಿಗೆ ಗುಡ್ ನ್ಯೂಸ್ ಎನ್ನುವಂತೆ ಕರ್ನಾಟಕದಲ್ಲಿ ಡಿಜಿಟಲ್ ಮೀಡಿಯಾಗಳಿಗೂ ಸರ್ಕಾರಿ ಜಾಹೀರಾತು ನೀಡುವ ಸಂಬಂಧ ರಾಜ್ಯ ಸರ್ಕಾರದಿಂದ ಮಾರ್ಗಸೂಚಿಯನ್ನು ಪ್ರಕಟಿಸಿ ತಿಳಿಸಲಾಗಿದೆ.


 

ಲಕ್ಷ ಲಕ್ಷ ವೀವ್ಸ್, ಮಿಲಿಯನ್ಸ್ ಗಟ್ಟಲೇ ಫಾಲೋವರ್ಸ್.. ಹೀಗಿದ್ದರೂ ಪೇಪರ್, ಟಿವಿಗಳಿಗೆ ನೀಡುತ್ತಿದ್ದಂತ ಸರ್ಕಾರಿ ಜಾಹೀರಾತು ಮಾತ್ರ, ಡಿಜಿಟಲ್ ಮೀಡಿಯಾಗಳಿಗೆ ಸಿಗುತ್ತಿರಲಿಲ್ಲ. ಇದಕ್ಕೆ ಅವಕಾಶವೂ ಇರಲಿಲ್ಲ. ಆದರೇ ಈಗ ಡಿಜಿಟಲ್ ಮೀಡಿಯಾದವರಿಗೂ ಬಂಗಾರದ ಬೆಲೆ ಬಂದಿದೆ. ರಾಜ್ಯ ಸರ್ಕಾರದಿಂದ ಕರ್ನಾಟಕ ಡಿಜಿಟಲ್ ಮೀಡಿಯಾ ಜಾಹೀರಾತು ಮಾರ್ಗಸೂಚಿ-2024 ಪ್ರಕಟಿಸಿದ್ದು, ಅದರಲ್ಲಿನ ಮಾನದಂಡಗಳನ್ನು ಪೂರೈಸಿದವರಿಗೆ ಶೀಘ್ರವೇ ಸರ್ಕಾರಿ ಜಾಹೀರಾತು ನೀಡಲಿದೆ.

ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳ ಬಳಕೆ ಹೆಚ್ಚಾಗಿದೆ. ಸಾಂಪ್ರದಾಯಿಕ ಜಾಹೀರಾತುಗಳಿಗಿಂತ, ಡಿಜಿಟಲ್ ಜಾಹೀರಾತು ಹೆಚ್ಚು ಪ್ರಭಾವಶಾಲಿಯಾಗಿದೆ. ಸಾಂಪ್ರದಾಯಿಕ ಜಾಹೀರಾತುಗಳಿಗೆ ಹೋಲಿಸಿದ್ರೇ ಡಿಜಿಟಲ್ ಜಾಹೀರಾತುಗಳು ಹೆಚ್ಚು ವ್ಯಾಪ್ತಿ ಮತ್ತು ನಿರ್ಧಿಷ್ಟ ಜನರನ್ನು ತಲುಪುವುದರಿಂದ ಸರ್ಕಾರಗಳು ಮತ್ತು ಕಾರ್ಪೋರೇಟ್ ಸಂಸ್ಥೆಗಳ ಜಾಹೀರಾತುಗಳಲ್ಲಿ ಈಗ ಡಿಜಿಟಲ್ ಜಾಹೀರಾತುಗಳೇ ಸಿಂಹಪಾಲು ಅಂತ ರಾಜ್ಯ ಸರ್ಕಾರ ಕಂಡುಕೊಂಡಿದೆ.

ಈ ಹಿನ್ನಲೆಯಲ್ಲಿ ಸರ್ಕಾರದ ನೀತಿ ಮತ್ತು ಯೋಜನೆಗಳನ್ನು ಅಂತರ್ಜಾಲ ಬಳಸುವ ಜನರಿಗೆ ತಲುಪಿಸುವದಕ್ಕಾಗಿ ಡಿಜಿಟಲ್ ಜಾಹೀರಾತು ವ್ಯವಸ್ಥೆಯನ್ನು ಬಳಿಸಿಕೊಳ್ಳಲು ಕರ್ನಾಟಕ ಡಿಜಿಟಲ್ ಜಾಹೀರಾತು ಮಾರ್ಗಸೂಚಿ-2024ಅನ್ನು ಕ್ಷಣದಿಂದ ಜಾರಿಗೆ ಬರುವಂತೆ ಸರ್ಕಾರ ಮಂಜೂರಾತಿ ನೀಡಿರುವುದಾಗಿ ಹೇಳಿದೆ.

ಸದ್ಯ ಕನ್ನಡ, ಸಂಸ್ಕೃತಿ ಹಾಗೂ ವಾರ್ತಾ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಎಂ.ಜೆಸಿಂತ ಅವರು ಕರ್ನಾಟಕ ಡಿಜಿಟಲ್ ಜಾಹೀರಾತು ಮಾರ್ಗಸೂಚಿ-2024 ಅನ್ನು ಪ್ರಕಟಿಸಿದ್ದಾರೆ. ಮುಂದಿನ ದಿನಗಳಲ್ಲಿ ಡಿಜಿಟಲ್ ಮೀಡಿಯಾಗಳು ಸರ್ಕಾರಿ ಜಾಹೀರಾತು ಪಡೆಯಲು ಅರ್ಹತೆಗಳು ಏನು, ಮಾನದಂಡ ಏನು ಸೇರಿದಂತೆ ಇತರೆ ಮಾಹಿತಿಯ ವಿಸ್ತೃತ ಮಾರ್ಗಸೂಚಿ ಪ್ರಕಟಿಸೋ ಸಾಧ್ಯತೆ ಇದೆ. ಆ ಬಳಿಕವೇ ಡಿಜಿಟಲ್ ಮೀಡಿಯಾಗಳಿಗೆ ವಾರ್ತಾ ಇಲಾಖೆಯಿಂದ ಸರ್ಕಾರಿ ಜಾಹೀರಾತುಗಳನ್ನು ನೀಡುವ ಪ್ರಕ್ರಿಯೆ ಶುರುವಾಗಲಿದೆ ಎನ್ನಲಾಗುತ್ತಿದೆ. ಆ ಬಗ್ಗೆ ಮತ್ತಷ್ಟು ಮಾಹಿತಿ ನಿರೀಕ್ಷಿಸಲಾಗಿದೆ.

LEAVE A REPLY

Please enter your comment!
Please enter your name here