ಕಾರ್ಕಳ: ಕಲ್ಕತ್ತಾ ವೈದ್ಯೆಯ ಅತ್ಯಾಚಾರ ಘಟನೆ ಮಾಸುವ ಮುನ್ನವೇ ರಾಜ್ಯದಲ್ಲಿ ಮತ್ತೊಂದು ಸಾಮೂಹಿಕ ಅತ್ಯಾಚಾರ ಬೆಚ್ಚಿಬೀಳಿಸಿದೆ. ಜೇನು ಕೃಷಿ ಕೆಲಸ ಮಾಡಿಕೊಂಡು ಜೀವನ ನೆಡೆಸುತ್ತಿದ್ದ 21ವರ್ಷದ ಯುವತಿಯ ಸ್ನೇಹ ಬೆಳಿಸಿದ ಅಲ್ತಾಫ್ ಎಂಬ ತನ್ನ ಸ್ನೇಹಿತರ ಜೊತೆಗೆ ಸೇರಿ ಯುವತಿಗೆ ಅಮಲು ಪದಾರ್ಥ ನೀಡಿ ಅತ್ಯಾಚಾರ ಎಸಗಿದ ಘಟನೆ ನಡೆದಿದೆ,
ಅನ್ಯಕೋಮಿನ ಯುವಕರಿಂದ ಕಾರ್ಕಳದಲ್ಲಿ ಭಯಾನಕ ಗ್ಯಾಂಗ್ ರೇಪ್ ನಡೆದಿದ್ದು ಈ ಘಟನೆ ಸಮಾಜದಲ್ಲಿ ಆತಂಕಕ್ಕೆ ಕಾರಣ ಆಗಿದೆ. ಕಾರ್ಕಳ ಅಯ್ಯಪ್ಪ ನಗರ ಬಳಿ ಕಾಡಿನಲ್ಲಿ ಯುವತಿಗೆ ಮತ್ತು ಬರುವ ವಸ್ತು ನೀಡಿ ಗ್ಯಾಂಗ್ ರೇಪ್ ಮಾಡಲಾಗಿದ್ದು ಈ ಬಗ್ಗೆ ಕಾರ್ಕಳ ನಗರ ಠಾಣೆಯಲ್ಲಿ ಕೇಸು ದಾಖಲಾಗಿದೆ.
ಯುವತಿಯನ್ನು ಕಾರ್ಕಳ ಸರಕಾರಿ ಆಸ್ಪತ್ರೆ ಗೆ ದಾಖಲಿಸಲಾಗಿದೆ. ಯುವತಿ ಪ್ರಜ್ಞಾ ಹೀನ ಸ್ಥಿತಿ ಯಲ್ಲಿ ಇದ್ದು 4 ಮಂದಿ ಈ ಕೃತ್ಯದಲ್ಲಿ ತೊಡಗಿದ್ದು ಇದರಲ್ಲಿ ಅಲ್ತಾಫ್ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಾಕಿ ಗ್ಯಾಂಗ್ ರೇಪ್ ಮಾಡಿದವರ ಬಗ್ಗೆ ಮಾಹಿತಿ ಲಭ್ಯ ಆಗಬೇಕಿದೆ.
ಅನ್ಯಮತೀಯ ವ್ಯಕ್ತಿಗಳಿಂದ ಈ ಘಟನೆ ನಡೆದಿದೆ. ಹಿಂದೂ ಸಂಘಟನೆಗಳು ಈಕೃತ್ಯದ ಬಗ್ಗೆ ಆಕ್ರೋಶವನ್ನು ಹೊರಹಾಕಿದ್ದು ನಾಳೆಯೊಳಗೆ ಆರೋಪಿಗಳನ್ನು ಬಂಧಿಸದಿದ್ದಲ್ಲಿ ನ್ಯಾಯಕ್ಕಾಗಿ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕುವುದಾಗಿ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.