ಮಂಗಳೂರು: ಕಳೆದ ಏಳು ವರ್ಷಗಳಿಂದ ಮಂಗಳೂರಿನಲ್ಲಿ ಕಾರ್ಯಾಚರಿಸುತ್ತಿರುವ ಸೆಕೆಂಡ್ ಹ್ಯಾಂಡ್ ಕಾರುಗಳು ಹಾಗೂ ಕಮರ್ಷಿಯಲ್ ಗಾಡಿಗಳಿಗೆ ಆಕರ್ಷಕ ಬಡ್ಡಿ ದರದಲ್ಲಿ ಸಾಲ ಸೌಲಭ್ಯವನ್ನು ಒದಗಿಸುತ್ತಿರುವ ಐ.ಟಿ.ಐ ಫೈನಾನ್ಸ್ ನ ನೂತನ ಕಚೇರಿಯ ಉದ್ಘಾಟನೆಯು ಬುಧವಾರ ಕರಂಗಲ್ಪಾಡಿ ಎ.ಜೆ ಗ್ರಾಂಡ್ ಹೊಟೇಲ್ ನ ಮುಂಭಾಗದಲ್ಲಿರುವ ಲೋಟಸ್ ಎಲೈಟ್ ಕಟ್ಟಡದ ನಾಲ್ಕನೇ ಮಹಡಿಯಲ್ಲಿ ಜರುಗಿತು.
ಕಚೇರಿಯ ಉದ್ಘಾಟನೆಯನ್ನು ಮಂಗಳೂರು ದಕ್ಷಿಣದ ಮಾನ್ಯ ಶಾಸಕರಾದ ಶ್ರೀ ಡಿ.ವೇದವ್ಯಾಸ ಕಾಮತ್ ಹಾಗೂ ಐ.ಟಿ.ಐ ಫೈನಾನ್ಸ್ ನ ವೈಸ್ ಪ್ರೆಸಿಡೆಂಟ್ ಹಾಗೂ ಸೌತ್ ಜೋನ್ ಹೆಡ್ ಆಗಿರುವ ಶ್ರೀ ನಿತಿನ್ ಜೋಸ್ ರವರು ಜಂಟಿಯಾಗಿ ಜರುಗಿಸಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ದಕ್ಷಿಣ ಕನ್ನಡ ಯುಸ್ಡ್ ವೆಹಿಕಲ್ಸ್ ಡೀಲರ್ಸ್ ಹಾಗೂ ಬ್ರೋಕರ್ಸ್ ಅಸೋಸಿಯೆಶನ್ ನ ಅಧ್ಯಕ್ಷರಾದ ಶ್ರೀ ಜಯರಾಜ್ ಕೋಟ್ಯಾನ್ ಭಾಗವಹಿಸಿದರು.
ಸುಮಾರು ಏಳು ವರ್ಷಗಳಿಂದ ದಕ್ಷಿಣ ಭಾರತದಾದ್ಯಂತ ಕಾರ್ಯನಿರ್ವಹಿಸುತ್ತಿರುವ ಐ.ಟಿ.ಐ ಫೈನಾನ್ಸ್ ಸಂಸ್ಥೆಯು ಸದ್ಯ ಎಪ್ಪತ್ತೈದು ಶಾಖೆಗಳನ್ನು ಹೊಂದಿದ್ದು ಸುಮಾರು ಎಂಟುನೂರು ಉದ್ಯೋಗಿಗಳು ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದು ಸೆಕೆಂಡ್ ಹ್ಯಾಂಡ್ ಕಾರುಗಳು ಹಾಗೂ ಕಮರ್ಷಿಯಲ್ ಗಾಡಿಗಳಿಗೆ ಆಕರ್ಷಕ ಬಡ್ಡಿ ದರದಲ್ಲಿ ಸಾಲ ಸೌಲಭ್ಯವನ್ನು ನೀಡುತ್ತಾ ಮಾರುಕಟ್ಟೆಯಲ್ಲಿ ಅತೀ ವೇಗವಾಗಿ ಬೆಳೆಯುತ್ತಿರುವ ಸಂಸ್ಥೆಯಾಗಿದೆ ಎಂದು ನಿತಿನ್ ಜೋಸ್ ರವರು ತಿಳಿಸಿದರು.
ನಂತರ ಮಾತನಾಡಿದ ಶಾಸಕರು ಐ.ಟಿ.ಐ ಫೈನಾನ್ಸ್ ನಿಂದ ಮಂಗಳೂರಿನ ಜನತೆಗೆ ಉತ್ತಮ ಸೇವೆ ದೊರಕಲಿ ಹಾಗೂ ಮಧ್ಯಮವರ್ಗದ ಜನರಿಗೆ ಸೆಕೆಂಡ್ ಹ್ಯಾಂಡ್ ಕಾರುಗಳ ಮೇಲೆ ಆಕರ್ಷಕ ಬಡ್ಡಿ ದರದಲ್ಲಿ ಸಾಲ ಸೌಲಭ್ಯಗಳನ್ನು ಒದಗಿಸಿ ಅವರ ಕನಸನ್ನು ನನಸಾಗಿಸಲಿ ಎಂದು ಶುಭ ಹಾರೈಸಿದರು.
ಇನ್ನುಳಿದಂತೆ ಕಾರ್ಯಕ್ರಮದಲ್ಲಿ ಐ.ಟಿ.ಐ ಫೈನಾನ್ಸ್ ನ ಸ್ಟೇಟ್ ಹೆಡ್ ದಷ್ಟಗೀರ್ ಬಾಷಾ, ಏರಿಯಾ ಮ್ಯಾನೇಜರ್ ಮಹಾದೇವ ಸ್ವಾಮಿ, ಏರಿಯಾ ಕ್ರೆಡಿಟ್ ಮ್ಯಾನೇಜರ್ ರವಿ ಕುಮಾರ್, ಮಂಗಳೂರು ಶಾಖೆಯ ಸೀನಿಯರ್ ಬ್ರಾಂಚ್ ಮ್ಯಾನೇಜರ್ ಶಿವ ಪ್ರಸಾದ್ ಕೊಕ್ಕಡ ,ಉಡುಪಿ ಶಾಖೆಯ ಮ್ಯಾನೇಜರ್ ಶಶಿರಾಜ್ ಹಾಗೂ ಮಂಗಳೂರಿನ ಪ್ರಮುಖ ಸೆಕೆಂಡ್ ಹ್ಯಾಂಡ್ ಕಾರುಗಳ ಡೀಲರ್ ಗಳು, ಬ್ರೋಕರ್ ಗಳು , ಐ.ಟಿ.ಐ ಫೈನಾನ್ಸ್ ನ ಎಲ್ಲಾ ಸಿಬ್ಬಂದಿಗಳು ಉಪಸ್ಥಿತರಿದ್ದರು.