Home ಕರಾವಳಿ ಮಂಗಳೂರು: ಕೆತ್ತಿಕಲ್ಲು ಅವೈಜ್ಞಾನಿಕ ಕಾಮಗಾರಿ: ಎನ್‌ಎಚ್‌ಐ, ಡಿಬಿಎಲ್‌, ಜಾಗದ ಮಾಲಕನ ವಿರುದ್ಧ ಕೇಸು ದಾಖಲು

ಮಂಗಳೂರು: ಕೆತ್ತಿಕಲ್ಲು ಅವೈಜ್ಞಾನಿಕ ಕಾಮಗಾರಿ: ಎನ್‌ಎಚ್‌ಐ, ಡಿಬಿಎಲ್‌, ಜಾಗದ ಮಾಲಕನ ವಿರುದ್ಧ ಕೇಸು ದಾಖಲು

0

ಮಂಗಳೂರು : ಕೆತ್ತಿಕಲ್ಲು ಭೂಕುಸಿತ ಪ್ರದೇಶದಲ್ಲಿ ಅನಧಿಕೃತವಾಗಿ ಮಣ್ಣು ತೆಗೆದಿರುವ ಭೂಮಾಲಕರು ಮತ್ತು ಎನ್‌ಎಚ್‌ಐನವರು ಅನುಮತಿಸಿದ ಡಿಬಿಎಲ್ ಕಂಪೆನಿಯವರ ವಿರುದ್ಧ ಗಣಿ ಮತ್ತು ಭೂವಿಜ್ಞಾನ ಇಲಾಖೆಯಿಂದ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (ಬಿಎನ್‌ಎಸ್‌ಎಸ್) ಹಾಗೂ ಎಂಎಂಡಿಆರ್ ಕಾಯಿದೆ-1957ರಡಿ ಪ್ರಕರಣ ದಾಖಲಿಸಲಾಗಿದೆ. ಸುರಕ್ಷತೆಗೆ ಅಪಾಯವಿರುವುದರಿಂದ ವೆಟ್‌ವೆಲ್‌ನ ಮನಪಾದಿಂದಲೂ ಕ್ರಿಮಿನಲ್ ಕ್ರಮಕ್ಕಾಗಿ ಪೊಲೀಸ್ ತನಿಖೆಯನ್ನು ನಡೆಸಲು ಪ್ರಕರಣ ದಾಖಲಿಸಲಾಗಿದೆ. ಮಂಗಳೂರು ಸೆಂಟ್ರಲ್ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರನ್ನು ತನಿಖಾಧಿಕಾರಿಯನ್ನಾಗಿ ಪೊಲೀಸ್ ಆಯುಕ್ತರು ನೇಮಿಸಿದ್ದಾರೆ. ಜಿಯೋಲಜಿಕಲ್ ಸರ್ವೆ ಆಫ್ ಇಂಡಿಯಾ (ಜಿಎಸ್‌ಐ) ಸಲಹೆಯಂತೆ, ಘಟನಾ ಸ್ಥಳದಲ್ಲಿ ನೀರಿನ ಸಂಗ್ರಹ ಆಗದಂತೆ, ಚರಂಡಿ ಮಾಡಿ ಕಾಂಕ್ರೀಟ್ ಬಾಕ್ಸ್ ಬಳಸಿ, ನೀರು ಮಣ್ಣಿನ ಒಳಗೆ ನುಗ್ಗದೆ, ಹರಿದು ಹೋಗುವ ರೀತಿಯಲ್ಲಿ ಈಗಾಗಲೆ ವ್ಯವಸ್ಥೆ ಮಾಡಲಾಗಿದೆ. 2018 ರಿಂದ 2022 ರ ಅವಧಿಯಲ್ಲಿ ಗರಿಷ್ಠ ಮಣ್ಣು ಅಗೆಯುವಿಕೆ ನಡೆದಿರುವುದಾಗಿ ಎನ್ ಎಚ್ ಎಐ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಹಾಗೂ ಜಿ ಎಸ್ ಐ ಉಪಗ್ರಹದ ಛಾಯಚಿತ್ರಗಳ ಮೂಲಕ ತಿಳಿಯುತ್ತದೆ. ಈ ಬಗ್ಗೆ ಸಾಕ್ಷಿಯಾಗಿ 2022 ಡಿಸೆಂಬರ್ ನ ವಿಡಿಯೋವನ್ನು ಅದರ ಎನ್ಎಚ್ಎಐ ಒದಗಿಸಿದೆ. ಮಣ್ಣು ಅಗೆದ ಚಟುವಟಿಕೆಗಳ ಬಗ್ಗೆ ಉನ್ನತಮಟ್ಟದ ತನಿಖೆ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಆರಂಭವಾಗಿದ್ದು, ಇಲಾಖಾಧಿಕಾರಿಗಳು, ಎನ್ಎಚ್ಎಐ, ಡಿಪಿಎಲ್ ಕಂಪೆನಿ, ಭೂಮಾಲೀಕರು ಅಗತ್ಯ ದಾಖಲೆಗಳನ್ನು ಮಂಡಿಸಿದ್ದಾರೆ. ಭೂಕುಸಿತ ಪ್ರದೇಶದ ನಿವಾಸಿಗಳ ಹಿತದೃಷ್ಟಿಯಿಂದ ಸಂತ್ರಸ್ತರನ್ನು ಬೇರೆಕಡೆ ಸ್ಥಳಾಂತರ ಮಾಡಲಾಗಿದೆ. ಅವರಿಗೆ 10 ಸಾವಿರ ದಿಂದ 20 ಸಾವಿರ ರೂ. ವರೆಗೆ ತಾತ್ಕಾಲಿಕ ಪರಿಹಾರ ಪಾವತಿ ಮಾಡಲಾಗಿದೆ. ಈ ಪ್ರದೇಶದಲ್ಲಿ ಮೇಲಿನಿಂದ ಕೆಳಗೆ ಹರಿಯುವ ನೀರನ್ನು ಭೂಕುಸಿತ ಪ್ರದೇಶದ ವಿರುದ್ಧ ದಿಕ್ಕಿಗೆ ಹರಿದು ಹೋಗುವಂತೆ ಚರಂಡಿ ವ್ಯವಸ್ಥೆ ಕಾರ್ಯಗತಗೊಳಿಸಲಾಗಿದೆ ಎಂದು ಮಹಾನಗರಪಾಲಿಕೆ ಆಯುಕ್ತರು ವರದಿ ಸಲ್ಲಿಸಿದ್ದಾರೆ.


LEAVE A REPLY

Please enter your comment!
Please enter your name here