Home ಕರಾವಳಿ ಮಂಗಳೂರು: ಅಕ್ರಮವಾಗಿ ಸಿಮ್ ಸಂಗ್ರಹಿಸಿ ವಿದೇಶದಲ್ಲಿರುವ ಸೈಬರ್ ವಂಚಕರಿಗೆ ನೀಡುತ್ತಿದ್ದ ಆರೋಪಿಗಳು- 86 ಸಿಮ್‌ಕಾರ್ಡ್‌ ಸಹಿತ ಇಬ್ಬರು...

ಮಂಗಳೂರು: ಅಕ್ರಮವಾಗಿ ಸಿಮ್ ಸಂಗ್ರಹಿಸಿ ವಿದೇಶದಲ್ಲಿರುವ ಸೈಬರ್ ವಂಚಕರಿಗೆ ನೀಡುತ್ತಿದ್ದ ಆರೋಪಿಗಳು- 86 ಸಿಮ್‌ಕಾರ್ಡ್‌ ಸಹಿತ ಇಬ್ಬರು ಅರೆಸ್ಟ್

0

ಮಂಗಳೂರು: ವಿದೇಶದಲ್ಲಿರುವ ಸೈಬರ್ ವಂಚಕರಿಗಾಗಿ ಸಿಮ್‌ಕಾರ್ಡ್‌ಗಳನ್ನು ಸಂಗ್ರಹಿಸುತ್ತಿದ್ದ ಆರೋಪದಲ್ಲಿ ಇಬ್ಬರನ್ನು ಮಂಗಳೂರು ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ ಏರ್ಟೆಲ್ ಕಂಪೆನಿಯ 86 ಸಿಮ್‌ ಕಾರ್ಡ್‌‌ಗಳು, 2 ಮೊಬೈಲ್‌ ಫೊನ್‌ಗಳು,, ಸ್ವಿಫ್ಟ್ ಕಾರು ಸಹಿತ 5,49,300 ರೂ. ಮೌಲ್ಯದ ಸೊತ್ತುಗಳನ್ನು ವಶಕ್ಕೆ ಪಡೆಯಲಾಗಿದೆ.


ಬೆಳ್ತಂಗಡಿಯ ಶಮದ್ ಮಹಮ್ಮದ್ ಸಮರ್ (26) ಮತ್ತು ಮಹಮ್ಮದ್ ಅಜೀಂ (19) ಬಂಧಿತ ಆರೋಪಿಗಳು. ಶಮದ್ ನಗರದ ಕಾಲೇಜೊಂದರ ಬಿಬಿಎ ವಿದ್ಯಾರ್ಥಿಯಾಗಿದ್ದು, ನಗರದಲ್ಲೇ ಬಾಡಿಗೆ ಮನೆಯಲ್ಲಿದ್ದರು. ಇವರು ಬೆಳ್ತಂಗಡಿಯ ಮುಸ್ತಾಫ ಮತ್ತು ಮಡಂತ್ಯಾರ್ನ ಸಾಜೀದ್ನ ಸೂಚನೆಯಂತೆ ತಮ್ಮ ಗೆಳೆಯರು,
ಪರಿಚಿತರಿಗೆ ಸ್ವಲ್ಪ ಹಣ ನೀಡಿ ಪುಸಲಾಯಿಸಿ ಅವರಿಂದ ಸಿಮ್ಕಾರ್ಡ್‌ಗಳನ್ನು ಪಡೆದುಕೊಳ್ಳುತ್ತಿದ್ದರು.ಆರೋಪಿಗಳು ಕಳೆದ ಜನವರಿ ಯಿಂದಲೇ ಈ ದಂಧೆ ನಡೆಸುತ್ತಿದ್ದು, ಇದುವರೆಗೆ 400ರಿಂದ 500 ಸಿಮ್‌ ಗಳನ್ನು ಸಂಗ್ರಹಿಸಿಕೊಟ್ಟಿದ್ದಾರೆ. ತನ್ನ ಗೆಳೆಯರು, ಪರಿಚಿತರಿಗೆ 200ರಿಂದ 300 ರೂ. ನೀಡಿ ಸಿಮ್ ಕಾರ್ಡ್‌ಗಳನ್ನು ಖರೀದಿಸಿ ಅದನ್ನು ಮುಸ್ತಾಫ ಮತ್ತು ಸಾಜೀದ್ಗೆ ನೀಡುತ್ತಿದ್ದರು ಎಂದು ತಿಳಿದುಬಂದಿದೆ. ಧರ್ಮಸ್ಥಳ ಪೊಲೀಸರು ಕಳೆದ ಫೆಬ್ರವರಿಯಲ್ಲಿ ಐವರನ್ನು ಬಂಧಿಸಿ ಅವರಿಂದ 42 ಸಿಮ್ಕಾರ್ಡ್‌ಗಳನ್ನು ವಶಪಡಿಸಿಕೊಂಡಿದ್ದರು. ಈಗ ಮಂಗಳೂರು ನಗರ ಪೊಲೀಸರು ಬಂಧಿಸಿರುವ ಆರೋಪಿಗಳಿಗೂ ಧರ್ಮಸ್ಥಳದಲ್ಲಿ ಬಂಧಿಸಲ್ಪಟ್ಟಿರುವ ಆರೋಪಿಗಳಿಗೂ ಸಂಪರ್ಕವಿದೆ ಎಂದು ತಿಳಿದುಬಂದಿದೆ.

LEAVE A REPLY

Please enter your comment!
Please enter your name here