Home ತಾಜಾ ಸುದ್ದಿ ರಾಜ್ಯ ಸರ್ಕಾರದಿಂದ `ಗ್ರಾಮಪಂಚಾಯಿತಿ’ ನೌಕರರಿಗೆ ಗುಡ್ ನ್ಯೂಸ್ : 50 ಸಾವಿರ ರೂ. ವೈದ್ಯಕೀಯ ವೆಚ್ಚ...

ರಾಜ್ಯ ಸರ್ಕಾರದಿಂದ `ಗ್ರಾಮಪಂಚಾಯಿತಿ’ ನೌಕರರಿಗೆ ಗುಡ್ ನ್ಯೂಸ್ : 50 ಸಾವಿರ ರೂ. ವೈದ್ಯಕೀಯ ವೆಚ್ಚ ನೀಡಲು ಆದೇಶ

0

ಬೆಂಗಳೂರು :ರಾಜ್ಯದ ಗ್ರಾಮಪಂಚಾಯಿತಿ ನೌಕರರಿಗೆ ರಾಜ್ಯ ಸರ್ಕಾರವು ಸಿಹಿಸುದ್ದಿ ನೀಡಿದ್ದು, ಗ್ರಾಮಪಂಚಾಯಿತಿ ನೌಕರರಿಗೆ 50 ಸಾವಿರ ರೂ. ವೈದ್ಯಕೀಯ ವೆಚ್ಚ ನೀಡುವ ಸಂಬಂಧ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.


ರಾಜ್ಯ ಸರ್ಕಾರವು ಈ ಕುರಿತು ಮಹತ್ವದ ಆದೇಶ ಹೊರಡಿಸಿದ್ದು, ಗ್ರಾಮ ಪಂಚಾಯಿತಿ ನೌಕರರು ಅನಾರೋಗ್ಯಕ್ಕೆ ಒಳಗಾದಾಗ ಚಿಕಿತ್ಸಾ ವೆಚ್ಚವನ್ನು ಜಿಲ್ಲಾ ಪಂಚಾಯಿತಿ ಆಶ್ವಾಸನಾ ನಿಧಿಯಿಂದ ಭರಿಸುವಂತೆ ಸೂಚನೆ ನೀಡಿದೆ.

 

ತೀವ್ರ ಸ್ವರೂಪದ ಕಾಯಿಲೆಗಳಾದ ಕ್ಯಾನ್ಸರ್, ಹೃದ್ರೋಗ ಶಸ ಚಿಕಿತ್ಸೆ, ಬೋನ್ ಮ್ಯಾರೋ ಟ್ರಾನ್ಸ್‌ಪ್ಲಾಂಟ್, ಡಯಾಲಿಸಿಸ್, ಮೂತ್ರ ಪಿಂಡ ಕಾಯಿಲೆಗಳಿಗೆ ಗ್ರಾಮಪಂಚಾಯಿತಿ ನೌಕರರು ತುತ್ತಾದಲ್ಲಿ ವೈದ್ಯಕೀಯ ವೆಚ್ಚ ಗರಿಷ್ಠ 50 ಸಾವಿರ ರೂ.ಗಳನ್ನು ಒಂದು ಬಾರಿ ಮಾತ್ರ ನೀಡಲು ಜಿಲ್ಲಾ ಪಂಚಾಯಿತಿ ಸಿಇಒಗಳಿಗೆ ಸೂಚಿಸಲಾಗಿದೆ.

LEAVE A REPLY

Please enter your comment!
Please enter your name here