Home ತಾಜಾ ಸುದ್ದಿ ರಾಜ್ಯ ಸರ್ಕಾರದಿಂದ ನಿರುದ್ಯೋಗಿಗಳಿಗೆ ಮತ್ತೊಂದು ಗುಡ್‌ ನ್ಯೂಸ್; ಯುವನಿಧಿ ಪ್ಲಸ್, ಭತ್ಯೆ ಜೊತೆ ಉದ್ಯೋಗ

ರಾಜ್ಯ ಸರ್ಕಾರದಿಂದ ನಿರುದ್ಯೋಗಿಗಳಿಗೆ ಮತ್ತೊಂದು ಗುಡ್‌ ನ್ಯೂಸ್; ಯುವನಿಧಿ ಪ್ಲಸ್, ಭತ್ಯೆ ಜೊತೆ ಉದ್ಯೋಗ

0

ಬೆಂಗಳೂರು: ಕರ್ನಾಟಕದಲ್ಲಿ ಪಂಚ ಗ್ಯಾರಂಟಿ ಯೋಜನೆಗಳನ್ನ ಅನುಷ್ಠಾನ ಮಾಡಿರುವ ಕಾಂಗ್ರೆಸ್​ ಸರ್ಕಾರ ಈಗ ಮತ್ತೊಂದು ಭಾಗ್ಯ ನೀಡಲು ಮುಂದಾಗಿದೆ. ನಿರುದ್ಯೋಗ ಯುವಕರಿಗೆ ಕೌಶಲ್ಯ ಹಾಗೂ ಉದ್ಯೋಗ ನೀಡುವ ನಿಟ್ಟಿನಲ್ಲಿ ಪಂಚ ಯೋಜನೆಗಳ ಪೈಕಿ ಯುವನಿಧಿ ಪ್ಲಸ್ (Yuvanidhi Plus) ಯೋಜನೆಯೊಂದನ್ನು ನೀಡಲು ರಾಜ್ಯ ಸರ್ಕಾರ ಮುಂದಾಗಿದೆ. ಆ ಮೂಲಕ ನಿರುದ್ಯೋಗಳಿಗೆ ಭತ್ಯೆ ಜೊತೆ ಉದ್ಯೋಗ ನೀಡುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ.


ಕಾಂಗ್ರೆಸ್ ಸರ್ಕಾರದ ಮಹತ್ವಾಕ್ಷಾಂಕಿ ಯೋಜನೆಗಳಲ್ಲೊಂದಾದ ಯುವನಿಧಿ ಯೋಜನೆಯಲ್ಲಿ ನಿರುದ್ಯೋಗಿಗಳಿಗೆ ಪ್ರತಿ ತಿಂಗಳೂ 1500 ರೂ. ಹಾಗೂ ಪದವೀಧರರಿಗೆ 3000 ರೂ. ನೀಡುತ್ತಿದೆ. ಡಿಪ್ಲೊಮಾ ಇಲ್ಲವೇ ಪದವಿಯನ್ನು ಪೂರೈಸಿದ್ದು, ಇನ್ನೂ ಯಾವುದೇ ಉದ್ಯೋಗ ಸಿಗದವರು ಈ ಯೋಜನೆಗೆ ಅರ್ಜಿ ಸಲ್ಲಿಸಬಹುದಾಗಿತ್ತು ಡಿಪ್ಲೋಮಾ ಹೋಲ್ಡರ್‌ಗಳಿಗೆ ಮುಂದಿನ ಎರಡು ವರ್ಷಗಳ ಕಾಲ ತಿಂಗಳಿಗೆ 1500 ರೂ. ಹಾಗೂ ಪದವೀಧರರಿಗೆ 3000 ರೂ. ನೀಡುವ ನಿರುದ್ಯೋಗ ಭತ್ಯೆ ನೀಡುವ ಯೋಜನೆ ಇದಾಗಿದೆ ಆದರೆ ಈಗ ಸರ್ಕಾರ ನಿರುದ್ಯೋಗಳಿಗೆ ಭತ್ಯಯ ಜೊತೆ ಉದ್ಯೋಗ ನೀಡುವ ಬಗ್ಗೆ ಚಿಂತನೆ ಮಾಡಿದ್ದು ಯುವನಿಧಿ ಪ್ಲಸ್​ ಜಾರಿಗೆ ಮುಂದಾಗಿದೆ.

ಈ ಯೋಜನೆಯಲ್ಲಿ ನಿರದ್ಯೋಗ ಯುವಕರಿಗೆ ಉದ್ಯೋಗ ನೀಡುವ ಹಾಗೂ ಕೌಶಲ್ಯ ತರಬೇತಿ ನೀಡಲು ಜೀವನೋಪಾಯ, ಕೌಶಲ್ಯಾಭಿವೃದ್ಧಿ ಇಲಾಖೆ ಮುಂದಾಗಿದೆ. ಯುವನಿಧಿಯಿಂದ ಹಣ ಮಾತ್ರ ನೀಡಲಾಗುತ್ತಿತ್ತು. ಕೆಲಸ ಸಿಗುತ್ತಿರಲಿಲ್ಲ ಹೀಗಾಗಿ ಸರ್ಕಾರ ಈ ಕ್ರಮಕ್ಕೆ ಮುಂದಾಗಿದೆ.

ಯುವನಿಧಿ ಯೋಜನೆಯಡಿ ಯಾರೆಲ್ಲ ಹಣ ಪಡೆಯುತ್ತಿದ್ದಾರೋ ಫಲಾನುಭವಿಗಳಿಗೆ ಉದ್ಯೋಗ ನೀಡುವ ಯೋಜನೆಯಾಗಿದೆ. ಯುವನಿಧಿ ಫಲಾನುಭವಿಗಳಿಗೆ ಕೌಶಲ್ಯ ತರಬೇತಿ ನೀಡಿ ಕೆಲಸ ನೀಡುವತ್ತ ಸರ್ಕಾರ ಚಿಂತನೆ ಮಾಡುತ್ತಿದೆ. ಈಗಾಗಲೇ ಕೆಲವು ಕೈಗಾರಿಕೆ, ಕಾರ್ಪೋರೇಟ್ ಕಂಪನಿಗಳು ಐಟಿಬಿಟಿ ಕಂಪನಿಗಳ ಜೊತೆ ಮಾತುಕಥೆಗೆ ಮುಂದಾಗಿದ್ದು ಸರ್ಕಾರದ ಸಹಾಭಾಗಿತ್ವದಲ್ಲಿ ತರಬೇತಿ ಜೊತೆಗೆ ಉದ್ಯೋಗ ನೀಡಲು ಸಹಕಾರಿಯಾಗಲಿದೆ.

LEAVE A REPLY

Please enter your comment!
Please enter your name here