Home ತಾಜಾ ಸುದ್ದಿ ‘ಮುಡಾ ಹಗರಣ’ಕ್ಕೆ ಬಿಗ್ ಟ್ವಿಸ್ಟ್: ಬದಲಿ ನಿವೇಶನ ಕೋರಿ ‘ಸಿದ್ಧರಾಮಯ್ಯ’ ಬರೆದಿದ್ದ ‘ಪತ್ರ ವೈರಲ್’

‘ಮುಡಾ ಹಗರಣ’ಕ್ಕೆ ಬಿಗ್ ಟ್ವಿಸ್ಟ್: ಬದಲಿ ನಿವೇಶನ ಕೋರಿ ‘ಸಿದ್ಧರಾಮಯ್ಯ’ ಬರೆದಿದ್ದ ‘ಪತ್ರ ವೈರಲ್’

0

ಬೆಂಗಳೂರು : ಮುಡಾ ಪ್ರಕರಣ ಸಿಎಂ ಸಿದ್ದರಾಮಯ್ಯ ಅವರಿಗೆ ಕಂಟಕವಾಗಿ ಪರಿಣಮಿಸಿದೆ. 1984ರಲ್ಲಿ ಸಿದ್ದರಾಮಯ್ಯ ಅವರು ಶಾಸಕರಾಗಿದ್ದಾಗ ಬದಲಿ ನಿವೇಶನ ಕೋರಿ ಮುಡಾ ಅಧ್ಯಕ್ಷರಿಗೆ ಬರೆದ್ದರು ಎನ್ನಲಾದ ಪತ್ರವನ್ನು ಜೆಡಿಎಸ್ ರಿಲೀಸ್ ಮಾಡಿದೆ.


ಈ ಬಗ್ಗೆ ಟ್ವೀಟ್ ಮಾಡಿರುವ ಜೆಡಿಎಸ್, ‘ಗುಳಿಗೆ ಸಿದ್ದ ಒಳಗೆ ಮೇಯಿದ’ ಈ ಮಾತು ನಿಮ್ಮಂಥವರನ್ನು ನೋಡಿಯೇ ಹೇಳಿರಬೇಕು ಸಿದ್ದರಾಮಯ್ಯನವರೇ… ‘ನನಗೆ ಒಂದು ನಿವೇಶನವೂ ಇಲ್ಲ. ಯಾವುದೇ ಲೆಟರ್ ಬರೆದಿಲ್ಲ’ ಎಂದು ಸುಳ್ಳು ಹೇಳುವ ನೀವು ಸಮಾಜವಾದಿ ಮುಖವಾಡ ತೊಟ್ಟು ನೀವು ಮಾಡಿರುವ ಅಕ್ರಮಗಳಿಗೆ ಈ ಲೆಟರ್ ಸಾಕ್ಷಿ ಎಂದಿದೆ ಎಂದು ಆರೋಪಿಸಿದೆ.

ಬದಲಿ ನಿವೇಶನ ಕೋರಿ ನೀವೇ ಸ್ವತಃ ಬರೆದಿರುವ ಪತ್ರ, ನಿಮ್ಮದೇ ಸಹಿ…ಇಷ್ಟು ಸಾಕಲ್ಲವೇ ? ಇದು ನಿಮಗೆ ಕಪ್ಪು ಚುಕ್ಕೆ ಅಲ್ಲವೇ …? ನಾನು ಶುದ್ಧ ಹಸ್ತ, ಸಮಾಜವಾದಿ ಎಂದು ಸತ್ಯ ಹರಿಶ್ಚಂದ್ರನಂತೆ ಮಾತಾಡುವ ನಿಮ್ಮ ಅಸಲೀ ಬಂಡವಾಳ ಈಗ ಬಯಲಾಗಿದೆ ಎಂದು ಕುಟುಕಿದೆ.

LEAVE A REPLY

Please enter your comment!
Please enter your name here