ಮಂಗಳೂರು : ನವಚೇತನ ವಿದ್ಯಾಸಂಸ್ಥೆ ನೀರುಮಾರ್ಗದಲ್ಲಿ “ಆಟಿಡೊಂಜಿ ದಿನ” ಆಚರಿಸಲಾಯಿತು.
ಮುಖ್ಯ ಅತಿಥಿಯಾಗಿ ಶ್ರೀಮತಿ ವಿಜಯಲಕ್ಷ್ಮಿ,ಶಿಕ್ಷಕ- ರಕ್ಷಕ ಸಂಘದ ಅಧ್ಯಕ್ಷರಾದ ಶ್ರೀಮತಿ ತ್ರಿವೇಣಿ ರಾವ್ ಹಾಗೂ ವಿದ್ಯಾಸಂಸ್ಥೆಯ ಆಡಳಿತ ಮಂಡಳಿಯ ಕೋಶಾಧಿಕಾರಿ ರಮೇಶ್ ಆಚಾರ್ ಪಾಲ್ಗೊಂಡಿದ್ದರು .



ಮುಖ್ಯೋಪಾಧ್ಯಾಯನಿ ಶ್ರೀಮತಿ ಸತ್ಯಶೀಲಾ ಇವರು ಎಲ್ಲರನ್ನೂ ಸ್ವಾಗತಿಸಿದರು. ಶ್ರೀಮತಿ ಬಿ.ವಿಜಯಲಕ್ಷ್ಮಿಯವರು ಆಟಿ ದಿನಾಚರಣೆಯ ವಿಶೇಷತೆಯನ್ನು ಮಕ್ಕಳಿಗೆ ತಿಳಿಸಿದರು ,ಹಾಗೆಯೇ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನೂ ನಡೆಸಲಾಗಿತ್ತು, ನಂತರ ಸಿದ್ಧಪಡಿಸಿದ್ದ ಆಟಿಯ ವಿವಿಧ ಖಾದ್ಯಗಳನ್ನು ಎಲ್ಲರೂ ಸವಿದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು, ಶಿಕ್ಷಕ-ರಕ್ಷಕ ಸಂಘದ ಸದಸ್ಯರು ಹಾಗೂ ಪೋಷಕರು ಉಪಸ್ಥಿತರಿದ್ದರು.

