ಮಂಗಳೂರು : ಕೈ ಗಾಯದ ಚಿಕಿತ್ಸೆಗಾಗಿ ಕಳೆದ ನಾಲ್ಕು ದಿನಗಳಿಂದ ತಂಗಿದ್ದ ಬೆಳಗಾವಿಯ 13 ವರ್ಷದ ಬಾಲಕಿಯೊಬ್ಬಳು ಜೋಕಟ್ಟೆಯ ಬಾಡಿಗೆ ಮನೆಯೊಂದರಲ್ಲಿ ಕುತ್ತಿಗೆಗೆ ಬಟ್ಟೆ ಕಟ್ಟಿಕೊಂಡು ಹತ್ಯೆಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ .



ಕೊಲೆ ಪ್ರಕರಣದ ಆರೋಪಿಯನ್ನು ಫಕೀರಪ್ಪ ಮಾದಾರ (51)ಎಂದು ಗುರುತ್ತಿಸಲಾಗಿದೆ .ಈತನು ಬೆಳಗಾವಿ ಜಿಲ್ಲೆಯವನಾಗಿದ್ದು ವಿಜವಿಠ್ಠಲ ಭಜನಾ ಮಂದಿರದ ಹಿಂಭಾಗ ಕೇಶವ ಎಂಬವರ ಬಾಡಿಗೆ ಮನೆಯಲ್ಲಿ ನೆಲೆಸಿದ್ದನು. ಈತನು ಕಳೆದ 6 ತಿಂಗಳಿಂದ ಜೋಕಟ್ಟೆ ಪರಿಸರದಲ್ಲಿ ದಿನಗೂಲಿ ನೌಕರನಾಗಿ ಕೆಲಸಮಾಡುತ್ತಿದ್ದನು. ಆರೋಪಿ ಯಾತಕ್ಕಾಗಿ ಬಾಲಕಿಯನ್ನು ಕೊಲೆಮಾಡಿದ್ದಾನೆಂದು ಇನ್ನಷ್ಟೇ ವಿಚಾರಣೆಯ ಮೂಲಕ ತಿಳಿಯಬೇಕಾಗಿದೆ. ಈತನನ್ನು ಈಗಾಗಲೇ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ತಿಳಿಸಿದ್ದಾರೆ .

