Home ಕರಾವಳಿ ಉಪ್ಪಿನಂಗಡಿ: ಟಿಕೆಟ್ ವಿಚಾರಕ್ಕೆ ಪ್ರಯಾಣಿಕನೊಬ್ಬ ಕಂಡೆಕ್ಟರ್ ಮೇಲೆ ಹಲ್ಲೆ..!

ಉಪ್ಪಿನಂಗಡಿ: ಟಿಕೆಟ್ ವಿಚಾರಕ್ಕೆ ಪ್ರಯಾಣಿಕನೊಬ್ಬ ಕಂಡೆಕ್ಟರ್ ಮೇಲೆ ಹಲ್ಲೆ..!

0

ಉಪ್ಪಿನಂಗಡಿ: ಟಿಕೆಟ್ ವಿಚಾರಕ್ಕೆ ಪ್ರಯಾಣಿಕನೊಬ್ಬ ಕಂಡೆಕ್ಟರ್ ಮೇಲೆ ಹಲ್ಲೆ ಮಾಡಿರುವ ಘಟನೆ ಉಪ್ಪಿನಂಗಡಿಯಿಂದ ಸುಬ್ರಹ್ಮಣ್ಯಕ್ಕೆ ಹೋಗುವ ಬಸ್‌ನಲ್ಲಿ ನಡೆದಿದೆ. ಉಪ್ಪಿನಂಗಡಿಯಿಂದ ಸುಬ್ರಹ್ಮಣ್ಯಕ್ಕೆ ಹೋಗುವ ಬಸ್‌ನಲ್ಲಿ ವಿಪರೀತ ಪ್ರಯಾಣಿಕರು, ಶಾಲಾ ಮಕ್ಕಳು ತುಂಬಿ ತುಳುಕುತ್ತಿದ್ದರು. ಈ ವೇಳೆ ಕೆಮ್ಮಾರ ಬಳಿ ತಲುಪುತ್ತಿದ್ದಂತೆ ಪ್ರಯಾಣಿಕನೊಬ್ಬನಲ್ಲಿ ಕಂಡಕ್ಟರ್ ರಫೀಕ್ ಅವರು ಟಿಕೇಟ್ ಕೇಳಿದ್ದಾರೆ.ಬಳಿಕ ಈತ ಚಿಲ್ಲರೆ ವಿಚಾರದಲ್ಲಿ ತಗಾದೆ ತೆಗೆದಿದ್ದಾನೆ ಎನ್ನಲಾಗಿದೆ. ಪ್ರಯಾಣಿಕ ಜಗಳ ಮಾಡಿದ್ದಲ್ಲದೇ ಬಸ್ ನಲ್ಲಿ ರಂಪಾಟವಾಡಿ ಬಸ್ ಕಿಟಕಿಗೆ ಹಾನಿ ಮಾಡಿದ್ದಾನೆ.

ಹಾನಿಗೈದಿದಲ್ಲದೆ ಬಸ್ ಕಂಡೆಕ್ಟರ್ ರಫೀಕ್ ಅವರ ಕುತ್ತಿಗೆ ಭಾಗ ಹಾಗೂ ಕೈಗೆ ಪರಚಿ ಗಾಯಗೊಳಿಸಿದ್ದಾನೆ. ಈ ಬಗ್ಗೆ ಪ್ರಯಾಣಿಕರು ಪೊಲೀಸರಿಗೆ ಮಾಹಿತಿ ನೀಡಿದ್ದು ಈ ಹಿನ್ನೆಲೆಯಲ್ಲಿ ಬಸ್ ಸಹಿತ ರಂಪಾಟ ನಡೆಸಿದ ಪ್ರಯಾಣಿಕನನ್ನು ಠಾಣೆಗೆ ಕರೆದುಕೊಂಡು ಬಂದಿದ್ದಾರೆ. ರಂಪಾಟ ಮಾಡಿದ ಪ್ರಯಾಣಿಕ ಮದ್ಯದ ನಶೆಯಲ್ಲಿದ್ದ ಎನ್ನಲಾಗಿದ್ದು ಪೊಲೀಸರು ಆತನಿಗೆ ಎಚ್ಚರಿಕೆ ನೀಡಿರುವುದಾಗಿ ತಿಳಿದು ಬಂದಿದೆ. ಪ್ರಯಾಣಿಕನ ಅವಾಂತರದಿಂದ ಹಲವು ಪ್ರಯಾಣಿಕರು ಮತ್ತು ಶಾಲಾ ಮಕ್ಕಳು ಪರದಾಡುವಂತಾಯಿತು.

LEAVE A REPLY

Please enter your comment!
Please enter your name here